ಬಂಗಾರದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ !ಮೂರು ವರ್ಷಗಳಲ್ಲಿ ಇದೇ ಮೊದಲು ಇಷ್ಟು ಅಗ್ಗವಾದ ಚಿನ್ನ!ಇನ್ನೂ ಮುಂದುವರಿಯಲಿದೆ ದರ ಇಳಿಕೆಯ ಆಟ

Gold Rate Today:ಚಿನ್ನದ ಬೆಲೆಯಲ್ಲಿ  5,400 ರೂ.ಯಷ್ಟು ಕುಸಿದಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಅವರ ದಾಖಲೆಯ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗಿದೆ.

Written by - Ranjitha R K | Last Updated : Nov 15, 2024, 05:19 PM IST
  • ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು.
  • ಇದೀಗ ಚಿನ್ನದ ಬೆಲೆ ಏರಿಕೆಯ ಗತಿಗೆ ವಿರಾಮ ಬಿದ್ದಿದೆ
  • ಚಿನ್ನದ ಬೆಲೆಯಲ್ಲಿ 5,400 ರೂ.ಯಷ್ಟು ಕುಸಿದಿದೆ.
ಬಂಗಾರದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ !ಮೂರು ವರ್ಷಗಳಲ್ಲಿ ಇದೇ ಮೊದಲು ಇಷ್ಟು ಅಗ್ಗವಾದ ಚಿನ್ನ!ಇನ್ನೂ ಮುಂದುವರಿಯಲಿದೆ ದರ ಇಳಿಕೆಯ ಆಟ  title=

Gold Rate Today : ಕೆಲ ದಿನಗಳ ಹಿಂದಿನವರೆಗೂ ಚಿನ್ನದ ಬೆಲೆ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದು, ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಇದೀಗ ಚಿನ್ನದ ಬೆಲೆ ಏರಿಕೆಯ ಗತಿಗೆ ವಿರಾಮ ಬಿದ್ದಿದೆ. ಒಂದೆಡೆ ಷೇರು ಮಾರುಕಟ್ಟೆ ಕುಸಿಯುತ್ತಿದ್ದರೆ ಮತ್ತೊಂದೆಡೆ ಚಿನ್ನ ಬೆಳ್ಳಿ ಬೆಲೆ ಕುಸಿಯುತ್ತಿದೆ. ಈ ವರ್ಷ ತನ್ನ ಐತಿಹಾಸಿಕ ದಾಖಲೆಯ ಗರಿಷ್ಠ ದರವನ್ನು ಮುಟ್ಟಿದ ನಂತರ, ಚಿನ್ನದ ಬೆಲೆಯಲ್ಲಿ  5,400 ರೂ.ಯಷ್ಟು ಕುಸಿದಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಅವರ ದಾಖಲೆಯ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗಿದೆ. 

3 ವರ್ಷಗಳಲ್ಲಿ ಅತಿ ದೊಡ್ಡ ಕುಸಿತ :
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.  ಕಳೆದ ವಾರ ಚಿನ್ನದ ಬೆಲೆ ಶೇಕಡಾ 4 ಕ್ಕಿಂತ ಹೆಚ್ಚು ಕುಸಿದಿದೆ.ಮೂರು ವರ್ಷಗಳಲ್ಲಿನ ಅತಿ ದೊಡ್ಡ ಕುಸಿತ ಇದಾಗಿದೆ. ಇದರೊಂದಿಗೆ ಚಿನ್ನದ ಬೆಲೆ ಕಳೆದ 2 ತಿಂಗಳಲ್ಲೇ ಕನಿಷ್ಠ ಮಟ್ಟ ತಲುಪಿದೆ. ಚಿನ್ನ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 5400 ರೂ.ಗೆ ಕುಸಿದಿದೆ. 

ಇದನ್ನೂ ಓದಿ : ವಿಐಪಿ ಕ್ಲೋಥಿಂಗ್ ಲಿ. ಯಿಂದ ಬಂಪರ್ ಆಫರ್...! ಒಳ ಉಡುಪು ಕೊಂಡರೆ ನಿಮಗೆ ಸಿಗಲಿದೆ 1 ಕಾರ್, 100 ಸ್ಕೂಟರ್‌ಗಳು ಮತ್ತು 1000 ಸರ್‌ಪೈಸ್ ಗಿಫ್ಟ್ ಗಳು...!

ಅಮೆರಿಕ ಚುನಾವಣೆಯ ಫಲಿತಾಂಶದ ನಂತರ ಚಿನ್ನದ ಬೆಲೆಯಲ್ಲಿ  ಇಳಿಮುಖವಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಡಾಲರ್ ಸೂಚ್ಯಂಕ ಹೆಚ್ಚಾಗಿದೆ. ಟ್ರಂಪ್ ವಾಪಸಾತಿಯಿಂದಾಗಿ ಡಾಲರ್ ಬಲಗೊಂಡಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿರೀಕ್ಷೆಗಳು ಹೆಚ್ಚಿವೆ. ಹಾಗಾಗಿಯೇ ಸುರಕ್ಷಿತ ಹೂಡಿಕೆಯ ಬೇಡಿಕೆಯೂ ಕುಸಿದಿದೆ. ಟ್ರಂಪ್ ವಿಜಯದ ನಂತರ, ಬಿಟ್‌ಕಾಯಿನ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ. ಅಲ್ಲಿ ಹೂಡಿಕೆದಾರರ ಆಕರ್ಷಣೆ ಹೆಚ್ಚುತ್ತಿದೆ. ಹಣದುಬ್ಬರ ದರದ ಏರಿಕೆಯಿಂದಾಗಿ, ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವಲ್ಲಿ ವಿಳಂಬವಾಗಬಹುದು. ಈ ಎಲ್ಲಾ ಅಂಶಗಳು ಚಿನ್ನದ ಬೆಲೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿವೆ.  

ಮಾರುಕಟ್ಟೆ ತಜ್ಞರ ಪ್ರಕಾರ ಅಲ್ಪಾವಧಿಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿಯಬಹುದು.  ಎಚ್‌ಡಿಎಫ್‌ಸಿ ಸೆಕ್ಯುರಿಟಿಯ ಅನುಜ್ ಗುಪ್ತಾ ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ, ಮುಂಬರುವ ಒಂದರಿಂದ ಒಂದೂವರೆ ತಿಂಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿಯಬಹುದು ಎಂದು ಹೇಳಿದ್ದಾರೆ. ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 5000 ರೂ.ಯಷ್ಟು ಇಳಿಕೆ ಕಾಣಬಹುದು ಎಂದು ಹೇಳಿದ್ದಾರೆ. ಚಿನ್ನವನ್ನು ಖರೀದಿಸಬೇಕು ಎಂದಿರುವವರು ಚಿನ್ನದ ದರದ ಮೇಲೆ  ಕಣ್ಡುವುದು ಬಹಳ ಮುಖ್ಯ.   

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಇಂದಿನ ಚಿನ್ನದ ಬೆಲೆ  :
24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 73,739 ರೂ.
23 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 73,444 ರೂ.
22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 67,545 ರೂ.
18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55, 304 ರೂ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News