Africa: ಆಫ್ರಿಕನ್ ದೇಶವಾದ ಗಿನಿಯಾದಲ್ಲಿ ಭೀಕರ ದುರಂತ ಸಂಭವಿಸಿದೆ. ಭಾನುವಾರ ನಡೆದ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಆಫ್ರಿಕನ್ ದೇಶವಾದ ಗಿನಿಯಾದಲ್ಲಿ ಭೀಕರ ದುರಂತ ಸಂಭವಿಸಿದೆ. ಭಾನುವಾರ ಆಫ್ರಿಕದ, ಎನ್ಜೆರೆಕೋರ್ ನಗರದಲ್ಲಿ ಫುಟ್ಬಾಲ್ ಪಂದ್ಯವನ್ನು ಆಯೋಜಿಸಲಾಗಿತ್ತು. ಪಂದ್ಯದ ವೇಳೆ ರೆಫರಿ ಕೊಟ್ಟ ಒಂದೇ ಒಂದು ತೀರ್ಪು 100 ಜನರ ಪ್ರಾನವನ್ನು ತೆಗೆದುಕೊಂಡು ಬಿಟ್ಟಿದೆ. ಪಂದ್ಯದ ವೇಳೆ ರೆಫರಿ ತೀರ್ಪು ನೀಡಿದ್ದರು, ಈ ತೀರ್ಪನ್ನು ಒಪ್ಪದ ವಿರೋಧಿ ತಂಡದ ಬೆಂಬಲಿಗರು ಕ್ರೀಡಾಂಗಣಕ್ಕೆ ನುಗ್ಗಿದ್ದರು. ಉಭಯ ತಂಡಗಳ ಅಭಿಮಾನಿಗಳು ಪರಸ್ಪರ ಹಲ್ಲೆ ನಡೆಸಿದ್ದಾರೆ.
ಗಿನಿಯಾದಲ್ಲಿ ಭಾನುವಾರ ಫುಟ್ಬಾಲ್ ಪಂದ್ಯವನ್ನು ಆಯೋಜಿಸಲಾಗಿತ್ತು, ಈ ವೇಳೆ ರೆಫರಿ ಕೊಟ್ಟ ತೀರ್ಪು ವಿವಾದಕ್ಕೀಡಾಗಿತ್ತು. ರೆಫರಿ ನಿರ್ಧಾರದ ವಿರುದ್ಧ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿದರು. ಇನ್ನೊಂದೆಡೆ ಎದುರಾಳಿ ತಂಡದ ಅಭಿಮಾನಿಗಳೂ ಮೈದಾನಕ್ಕೆ ನುಗ್ಗಿ ಪ್ರತಿದಾಳಿ ನಡೆಸಿದರು. ಈ ವೇಳೆ ಮೈದಾನದಲ್ಲಿದ್ದ ಎರಡು ತಂಡಗಳ ಬೆಂಬಲಿಗಳ ನಡುವೆ ಬಾರಿ ಜಗಳವಾಗಿದ್ದು, ಪರಸ್ಪರ ಪ್ರಾಣ ತೆಗೆದುಕೊಳ್ಳಲು ಆರಂಭಿಸಿದ್ದರು.
ಎರಡು ತಂಡಗಳ ಅಭಿಮಾನಿಗಳ ನಡುವೆ ಆರಂಭವಾದ ಕಾಳಗ ಬೀದಿಗೂ ಹಬ್ಬಿತು. ಇದು ಅತ್ಯಂತ ಹಿಂಸಾತ್ಮಕವಾಯಿತು. ಹತ್ತಿರದ ಪ್ರದೇಶವೆಲ್ಲ ರಕ್ತಮಯವಾಯಿತು. ಎರಡೂ ತಂಡಗಳ ಅಭಿಮಾನಿಗಳು ಸಮೀಪದ ಪೊಲೀಸ್ ಠಾಣೆಯನ್ನು ದ್ವಂಸ ಮಾಡಿದ ದೃಶ್ಯ ಕೂಡ ಕಂಡು ಬಂತು. ಆಸ್ಪತ್ರೆಯಲ್ಲಿ ಮೃತದೇಹಗಳು ಕಣ್ಣು ಹಾಯಿಸದಷ್ಟು ಕಂಡು ಬಂದಿದ್ದವು, ಫುಟ್ಬಾಲ್ ಫೀಲ್ಡ್ ಹತ್ಯಾಕಾಂಡವಾಗಿ ಹೋಗಿತ್ತು. ಫುಟ್ಬಾಲ್ ಮೈದಾನದಲ್ಲಿ ಮರಣ ಮೃದಂಗ ಕೇಳಿ ಬಂದಿತ್ತು. ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ 100 ಕ್ಕೂ ಹೆಚ್ಚು ಜನ ಘಟನೆಯಲ್ಲಿ ಸಾವನ್ನಪ್ಪಿದ್ದು, ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
BREAKING: At least 100 people killed in clashes between rival fans at soccer match in N’zerekore, Guinea. - AFP
pic.twitter.com/BIOH6bU75H— AZ Intel (@AZ_Intel_) December 1, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.