EPFOನಿಂದ ಮಹತ್ವದ ನಿರ್ಣಯ, e-Mail ಮೂಲಕ Digital Signature ಗೆ ಅನುಮತಿ

ಡಿಜಿಟಲ್ ಸಿಗ್ನೇಚರ್ ಅಥವಾ ಇ-ಸಿಗ್ನೇಚರ್ ಬಳಸಲು, ಇಪಿಎಫ್‌ಒನ ಪ್ರಾದೇಶಿಕ ಕಚೇರಿಯಿಂದ ಒಂದು ಬಾರಿ ಅನುಮೋದನೆ ಪಡೆಯುವುದು ಅಗತ್ಯವಾಗಿದೆ.  

Last Updated : May 7, 2020, 02:11 PM IST
EPFOನಿಂದ ಮಹತ್ವದ ನಿರ್ಣಯ, e-Mail ಮೂಲಕ Digital Signature ಗೆ ಅನುಮತಿ title=

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಇದರಿಂದ ಇನ್ಮುಂದೆ ಎಲ್ಲಾ ಕಂಪನಿಗಳಿಗೆ ತಮ್ಮ ಡಿಜಿಟಲ್ ಸಿಗ್ನೇಚರ್ ಅನ್ನು ಇ-ಮೇಲ್ ಮೂಲಕ ನೋಂದಾಯಿಸಲು ಇಪಿಎಫ್‌ಒ ಅನುಮೋದನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಾರ್ಮಿಕ ಸಚಿವಾಲಯವು, ಕರೋನಾ ವೈರಸ್‌ನ ಬಿಕ್ಕಟ್ಟು ಮತ್ತು ಲಾಕ್‌ಡೌನ್‌ನ ಪರಿಸ್ಥಿತಿಯಿಂದಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಈ ಕುರಿತಾದ ಮೊದಲ ನಿಯಮ ಏನಿತ್ತು?
ಇದಕ್ಕೂ ಮೊದಲು ಕಂಪನಿಯಿಂದ ಮಾನ್ಯತೆ ಪಡೆದ ಅಥವಾ ಅಧಿಕೃತ ಅಧಿಕಾರಿಗಳು ಡಿಜಿಟಲ್ ಸಹಿಯನ್ನು ಸೊಂದಾಯಿಸಲು EPFO ಕಚೇರಿಗೆ ಭೇಟಿ ನೀಡಬೇಕಾಗಿತ್ತು.ಆದರೆ ಇದೀಗ ಕಾರ್ಮಿಕ ಸಚಿವಾಲಯವು ಅದನ್ನು ಇಮೇಲ್ ಮೂಲಕ ನೋಂದಾಯಿಸಲು ಅನುಮೋದನೆ ನೀಡಿದ್ದು, ಕಂಪನಿಗಳಿಗೆ ಇನ್ಮುಂದೆ ಈ ಕಾರ್ಯ ಮಾಡುವುದು ತುಂಬಾ ಸುಲಭವಾಗಲಿದೆ.

ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ ಮತ್ತು ಈ ಕಾರಣದಿಂದಾಗಿ ಕಂಪನಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಪಿಎಫ್‌ಒ ಪೋರ್ಟಲ್‌ನಲ್ಲಿ ಡಿಜಿಟಲ್ ಸಿಗ್ನೇಚರ್ ಅಥವಾ ಇ-ಸಿಗ್ನೇಚರ್ ಬಳಸುವಲ್ಲಿ ಕಂಪನಿಗಳಿಗೆ ತೊಂದರೆಗಳಾಗದಂತೆ ಕಾರ್ಮಿಕ ಸಚಿವಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಡಿಜಿಟಲ್ ಸಿಗ್ನಿಚರ್ ಏಕೆ ಬೇಕಾಗುತ್ತದೆ?
ಕಂಪೆನಿಗಳ ಅಧಿಕೃತ ವ್ಯಕ್ತಿಗಳು ತಮ್ಮ ಡಿಜಿಟಲ್ ಸಹಿಯನ್ನು ಬಳಸಿಕೊಂಡು ಇವೈಎಫ್‌ಒ ಪೋರ್ಟಲ್‌ನಲ್ಲಿ ಕೆವೈಸಿ ಅಟೆಸ್ಟೇಷನ್, ಟ್ರಾನ್ಸ್‌ಫರ್ ಕ್ಲೈಮ್ಸ್ ಅಟೆಸ್ಟೇಷನ್‌ನಂತಹ ಅನೇಕ ವಿಶೇಷ ಕಾರ್ಯಗಳನ್ನು ಆನ್‌ಲೈನ್‌ನಲ್ಲಿ ಮಾಡಬಹುದು, ಇದಕ್ಕಾಗಿ ಈ ಮೊದಲು ಇಪಿಎಫ್‌ಒ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಔಪಚಾರಿಕವಾಗಿ ಈ ಕೆಲಸವನ್ನು ಮಾಡಬೇಕಾಗುತ್ತಿತ್ತು.

ಡಿಜಿಟಲ್ ಸಿಗ್ನೇಚರ್ ಅಥವಾ ಇ-ಸಿಗ್ನೇಚರ್ ಬಳಸಲು, ಇಪಿಎಫ್‌ಒನ ಪ್ರಾದೇಶಿಕ ಕಚೇರಿಯಿಂದ ಒಮ್ಮೆ ಅನುಮೋದನೆ ಪಡೆಯುವುದು ಅವಶ್ಯಕ. ಅಂತಹ ಪರಿಸ್ಥಿತಿಯಲ್ಲಿ, ಅನುಸರಣೆ ಪ್ರಕ್ರಿಯೆ ಅಥವಾ ಅನುಸರಣೆ ಕಾರ್ಯವಿಧಾನವನ್ನು ಸುಲಭಗೊಳಿಸಲು, ಎಲ್ಲಾ ವಿನಂತಿಗಳನ್ನು ಇಮೇಲ್ ಮೂಲಕ ಸ್ವೀಕರಿಸಲು ಮತ್ತು ಪ್ರಕ್ರಿಯೆಯನ್ನು ಮುಂದೆ ಸಾಗಿಸಲು ಇಪಿಎಫ್‌ಒಗೆ ಅನುಮತಿ ನೀಡಲಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಕಾರ್ಮಿಕ ಸಚಿವಾಲಯದಿಂದ ಮತ್ತೊಂದು ಸೌಲಭ್ಯ
ಕಂಪೆನಿಗಳು ಪ್ರಾದೇಶಿಕ ಕಚೇರಿಗೆ ಸಹಿ ಮಾಡುವ ಮೂಲಕ ಹಾಗೂ ಅದರ ಸ್ಕ್ಯಾನ್ ನಕಲನ್ನು ಸಹ ಕಳುಹಿಸಬಹುದು ಮತ್ತು ಅವುಗಳನ್ನು ಇಪಿಎಫ್‌ಒ ಮೂಲಕವೂ ಸ್ವೀಕರಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
 

Trending News