ನವದೆಹಲಿ: ವಿಶ್ವದಾದ್ಯಂತ ಭಾರತದ ಬೆಳವಣಿಗೆ ಕಂಡು ಬೆಚ್ಚಿ ಬಿದ್ದಿರುವ ಚೀನಾ ಗಡಿಯಲ್ಲಿ ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಕರೋನಾ ಸಂಕಷ್ಟದಿಂದ ಪಾರಾಗಲು ಇಡೀ ಜಗತ್ತೇ ಒಟ್ಟಾಗಿ ಪ್ರಯತ್ನಿಸುತ್ತಿದೆ. ಆದರೆ ಕರೋನಾಗೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವ ಚೀನಾದ ಉದ್ದೇಶವೆಂದರೆ ಭಾತರದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಮೂಲಕ ಏಕಕಾಲದಲ್ಲಿ ಅನೇಕ ಗುರಿಗಳನ್ನು ಸಾಧಿಸುವುದು. ಅದರಲ್ಲಿಯೂ ಮುಖ್ಯವಾಗಿ ವಿಶ್ವದ ಗಮನವನ್ನು ಕೋವಿಡ್ -19 (Covid-19) ಕರೋನಾದಿಂದ ಬೇರೆಡೆಗೆ ತಿರುಗಿಸುವ ದುರುದ್ದೇಶ ಚೀನಾದ್ದಾಗಿದೆ.
ಚೀನಾದ ಈ ನಡೆಗೆ ಮತ್ತೊಂದು ಪ್ರಮುಖ ಕಾರಣ ಎಂದರೆ ವಿಶ್ವದ ದೃಷ್ಟಿಯಲ್ಲಿ ಭಾರತ ಉತ್ತುಂಗಕ್ಕೇರುತ್ತಿರುವುದು. ಹೌದು ಇತ್ತೀಚಿನ ದಿನಗಳಲ್ಲಿ ಭಾರತ ಉತ್ತುಂಗಕ್ಕೇರುತ್ತಿದ್ದು ಅಮೆರಿಕ (America) ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ದೇಶಗಳು ಭಾರತಕ್ಕೆ ಆರ್ಥಿಕ ಮತ್ತು ಕಾರ್ಯತಂತ್ರದ ಬೆಂಬಲವನ್ನು ನೀಡುತ್ತಿವೆ. ಇದನ್ನು ಸಹಿಸಲಾಗದ ಚೀನಾ ಭಾರತದೊಂದಿಗಿನ ವಿವಾದವನ್ನು ಹೆಚ್ಚಿಸುತ್ತಿದೆ.
ಡ್ರ್ಯಾಗನ್ನ ಶಕ್ತಿಯನ್ನು ತೋರಿಸಲು ಅದನ್ನು ಕ್ರೇಜ್ ಅಥವಾ ವಿಸ್ತರಣಾವಾದಿ ನೀತಿ ಎಂದು ಹೇಳಬಹುದು. ಚೀನಾದ ಗಡಿ ವಿವಾದ ತನ್ನ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ಮುಂದುವರೆದಿದೆ. ಚೀನಾ ಯಾವಾಗಲೂ ಸಣ್ಣ ದೇಶಗಳಿಗೆ ಕಣ್ಬಿಟ್ಟು ಹೆದರಿಸುತ್ತದೆ. ಆದರೆ ಭಾರತ(India)ದ ಚೀನಾದ ಕೆಂಗಣ್ಣಿನ ನೋಟಕ್ಕೆ ತಲೆಕೆಡಿಸಿಕೊಲ್ಲುವುದಿಲ್ಲ.
ವಾಸ್ತವವಾಗಿ ಕೊರೊನಾವೈರಸ್ (Coronavirus) ಕಾರಣ ಚೀನಾ ಪ್ರಸ್ತುತ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಇಡೀ ಜಗತ್ತು ಚೀನಾದಿಂದ ಸರಿಯಾದ ಉತ್ತರವನ್ನು ಪಡೆಯಲು ಹರಸಾಹಸ ಪಡುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದಂತಹ ದೇಶಗಳೊಂದಿಗಿನ ವಿವಾದದ ಮೂಲಕ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಚೀನಾ ಬಯಸಿದೆ. ಕರೋನಾ ಯುಗದಲ್ಲಿ ಅನೇಕ ದೇಶಗಳು ತಮ್ಮ ಕಂಪನಿಗಳನ್ನು ಚೀನಾದಲ್ಲಿ ಮುಚ್ಚುತ್ತಿರುವುದು ಕೂಡ ಚೀನಾದ ನಿದ್ದೆ ಕೆಡಿಸಿದೆ. ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಚೀನಾ ಸಂಘರ್ಷವನ್ನು ಎದುರಿಸುತ್ತಿದೆ. ಮೂರನೆಯ ಕಾರಣವೆಂದರೆ ಚೀನಾದ ವಿಸ್ತರಣಾವಾದಿ ನೀತಿ, ಇದರಲ್ಲಿ ಯಾವಾಗಲೂ ಇತರ ದೇಶಗಳ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿದೆ.
ಚೀನಾ ಭಾರತದೊಂದಿಗೆ ಉದ್ವಿಗ್ನತೆಯನ್ನು ಏಕೆ ಹೆಚ್ಚಿಸುತ್ತಿದೆ?
ರಕ್ಷಣಾ ತಜ್ಞರ ಪ್ರಕಾರ ಚೀನಾ(China)ದ ನೀತಿಯು ತನ್ನ ಹಕ್ಕನ್ನು ಮೊದಲು ಯಾವುದಾದರೂ ಸ್ಥಳದಲ್ಲಿ ಇಡುವುದು. ನಂತರ ನಿಧಾನವಾಗಿ ಆ ಸ್ಥಳದಲ್ಲಿ ತನ್ನನ್ನು ಬಲಪಡಿಸಿಕೊಳ್ಳುವುದು. ನಂತರ ಅಲ್ಲಿ ಆಕ್ರಮಣಕಾರಿ ನೀತಿ ಅನುಸರಿಸುವುದು. ಚೀನಾದ ಕಮ್ಯುನಿಸ್ಟ್ ಸರ್ಕಾರದ ಒತ್ತಡದಲ್ಲಿ ಅಲ್ಲಿನ ಮಾಧ್ಯಮಗಳು ಕೂಡ ಸರ್ಕಾರದ ಕೊಂಬಿನಂತೆ ವರ್ತಿಸುತ್ತವೆ. ಚೀನಾದ ಮಾಧ್ಯಮಗಳು ಭಾರತದೊಂದಿಗಿನ ವಿವಾದದ ವಿಷಯವನ್ನು ತೀವ್ರವಾಗಿ ಎತ್ತುತ್ತಿದ್ದರೆ, ಅದು ಚೀನಾ ಸರ್ಕಾರದಿಂದ ಉತ್ತೇಜಿಸಲ್ಪಡುತ್ತದೆ.
ಭಾರತ ಮಾತ್ರವಲ್ಲ ಚೀನಾ ತನ್ನ ಗಡಿಭಾಗದಲ್ಲಿರುವ ಎಲ್ಲಾ ದೇಶಗಳೊಂದಿಗೂ ಇದೇ ರೀತಿಯ ಧೋರಣೆ ಹೊಂದಿದೆ. ಇದರಿಂದಾಗಿ ಅವರ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಗುತ್ತದೆ. ದಕ್ಷಿಣ ಚೀನಾ ಸಮುದ್ರದಲ್ಲಿಯೂ, ಚೀನಾದ ವಿಸ್ತರಣಾ ನೀತಿಯ ಪ್ರಭಾವ ಮತ್ತೆ ಮತ್ತೆ ಕಂಡುಬರುತ್ತದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ದಾದಾಗಿರಿ!
- ಚೀನಾದ ಹಡಗು ಡಿಕ್ಕಿ ಹೊಡೆದು ವಿಯೆಟ್ನಾಂನ ದೋಣಿ ಮುಳುಗಿತು
- ಫಿಲಿಪೈನ್ಸ್ ಹಕ್ಕಿನ ದ್ವೀಪದಲ್ಲಿ ತಮ್ಮ ಸಂಶೋಧನಾ ಕೇಂದ್ರವನ್ನು ತೆರೆಯಿತು
- ಚೀನಾ ತನ್ನ ಮಿಲಿಟರಿ ನೆಲೆ ಮತ್ತು ವಾಯುನೆಲೆಯನ್ನು ಇಲ್ಲಿ ನಿರ್ಮಿಸಿದೆ
- ದಕ್ಷಿಣ ಚೀನಾ ಸಮುದ್ರದಲ್ಲಿ ಎರಡು ಹೊಸ ಜಿಲ್ಲೆಗಳನ್ನು ರಚಿಸಲಾಯಿತು.
ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಇಲ್ಲಿ ಯಾವುದೇ ದೇಶಕ್ಕೆ ಹಕ್ಕಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹೆಚ್ಚುತ್ತಿರುವ ಸುಗ್ರೀವಾಜ್ಞೆಯಿಂದ ಚೀನಾ ಕೂಡ ತೊಂದರೆಗೀಡಾಗಿದೆ. ಏಕೆಂದರೆ ಈ ಸ್ನೇಹದ ಬೆಳವಣಿಗೆಯೊಂದಿಗೆ ಟ್ರಂಪ್ ಕೂಡ ಚೀನಾ ವಿರುದ್ಧ ದೊಡ್ಡ ಅಭಿಯಾನ ನಡೆಸುತ್ತಿದ್ದಾರೆ. ಅದು ಕರೋನಾ ಆಗಿರಲಿ ಅಥವಾ ದಕ್ಷಿಣ ಚೀನಾ ಸಮುದ್ರವಾಗಲಿ, ಚೀನಾದ ಪ್ರತಿ ಗುಸ್ಟೇಟರಿಯನ್ನು ಶಿಕ್ಷಿಸಲು ಅಮೆರಿಕ ಹತಾಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಕೂಡ ಭಾರತದೊಂದಿಗೆ ಮಿಲಿಟರಿ ಸಹಕಾರವನ್ನು ಹೆಚ್ಚಿಸುತ್ತಿದೆ. ಅಮೆರಿಕ ಮತ್ತು ಭಾರತದ ಈ ಮೈತ್ರಿ ಚೀನಾಕ್ಕೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.
ಆದರೆ ಚೀನಾ ಮತ್ತು ಭಾರತದ ಗಡಿಯು ವಿಶ್ವದ ಅತಿ ಉದ್ದದ ವಿವಾದಿತ ಆದರೆ ಸ್ತಬ್ಧ ಗಡಿಯಾಗಿದೆ ಎಂಬುದೂ ಒಂದು ದೊಡ್ಡ ಸತ್ಯ. ಇದರಲ್ಲಿ 1975 ರಿಂದ ಗುಂಡುಗಳನ್ನು ಹಾರಿಸಲಾಗಿಲ್ಲ. ಉಭಯ ದೇಶಗಳು ಯಾವಾಗಲೂ ಪರಸ್ಪರ ಮಾತುಕತೆಗಳ ಮೂಲಕ ವಿಷಯವನ್ನು ಬಗೆಹರಿಸಿಕೊಂಡಿವೆ. ಆದರೆ ಕರೋನಾ ಅವಧಿಯಲ್ಲಿ ಚೀನಾ ಇಡೀ ಪ್ರಪಂಚದೊಂದಿಗೆ ದ್ವೇಷವನ್ನು ಉಳಿಸಿಕೊಂಡಿದೆ. ಸಣ್ಣ ದೇಶಗಳೊಂದಿಗೆ ವ್ಯವಹರಿಸುವುದು ಚೀನಾಕ್ಕೆ ಸುಲಭ, ಆದರೆ ಭಾರತದೊಂದಿಗೆ ಚೀನಾ ಸುಲಭವಾಗಿ ತನ್ನ ಪ್ರಭಾವ ಬೀರಲು ಸಾಧ್ಯವಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಚೀನಾದಿಂದ ತರಿಸಲಾಗಿದ್ದ ಪಿಪಿಇ ಕಿಟ್ ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಹಿಂದಿರುಗಿಸಿದ ಭಾರತ ಸ್ವದೇಶದಲ್ಲಿಯೇ ಕಿಟ್ ಗಳ ತಯಾರಿ ಆರಂಭಿಸಿತು.