ಪಿಎಲ್‌ಎ ಕೋರಿಕೆಯ ಮೇರೆಗೆ LAC ಉದ್ವಿಗ್ನತೆ ಕುರಿತಂತೆ ಇಂಡೋ-ಚೀನಾ ಮಾತುಕತೆ

ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕುರಿತಂತೆ ಇಂದು ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ಚೀನಾದ ಮಾಲ್ಡೊದಲ್ಲಿ ಎರಡು ಸೇನೆಗಳ ನಡುವೆ ಮಾತುಕತೆ ನಡೆಯುತ್ತಿದೆ. 

Last Updated : Jun 22, 2020, 02:42 PM IST
ಪಿಎಲ್‌ಎ ಕೋರಿಕೆಯ ಮೇರೆಗೆ LAC ಉದ್ವಿಗ್ನತೆ ಕುರಿತಂತೆ ಇಂಡೋ-ಚೀನಾ ಮಾತುಕತೆ title=

ನವದೆಹಲಿ: ಭಾರತ ಮತ್ತು ಚೀನಾ (Indo-China) ನಡುವಿನ ಉದ್ವಿಗ್ನತೆ ಕುರಿತಂತೆ ಇಂದು ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ಚೀನಾದ ಮಾಲ್ಡೊದಲ್ಲಿ ಎರಡು ಸೇನೆಗಳ ನಡುವೆ ಮಾತುಕತೆ ನಡೆಯುತ್ತಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕೋರಿಕೆಯ ಮೇರೆಗೆ ಈ ಸಭೆ ನಡೆಯುತ್ತಿದೆ. ಚೀನಾದ ಗಾಲ್ವಾನ್‌ನಲ್ಲಿ ಭಾರತೀಯ ಸೇನೆಯು ತೋರಿಸಿದ ಶೌರ್ಯದಿಂದ ಆತಂಕಕ್ಕೊಳಗಾಗಿರುವ ಚೀನಾ ಎಲ್‌ಎಸಿ ಮೇಲಿನ ಉದ್ವಿಗ್ನತೆ ಕುರಿತು ಸಭೆಗಾಗಿ ಮನವಿ ಮಾಡಿತ್ತು.

ಇಂಡೋ-ಚೀನಾ ಉದ್ವಿಗ್ನತೆಯ ಮಧ್ಯೆ ರಷ್ಯಾಕ್ಕೆ ತೆರಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಗಾಲ್ವಾನ್ ಕಣಿವೆಯಲ್ಲಿ ಚೀನಾದ (China) ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಒಂದು ವಾರದ ನಂತರ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿದೆ. ಮಾತುಕತೆಯಲ್ಲಿ ಭಾರತೀಯ ನಿಯೋಗವನ್ನು 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವ ವಹಿಸುತ್ತಿದ್ದಾರೆ. ಜೂನ್ 6 ರಂದು ಮೊದಲ ಸುತ್ತಿನ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆ ನಡೆಯಿತು, ಇದರಲ್ಲಿ ಎರಡೂ ಸೂಕ್ಷ್ಮ ಪ್ರದೇಶಗಳಿಂದ ಸೈನ್ಯವನ್ನು ತೆಗೆದುಹಾಕಲು ಎರಡೂ ಕಡೆಯವರು ನಿರ್ಧರಿಸಿದರು. 

ಚೀನಾ ಉತ್ಪನ್ನಗಳಿಗೆ ಹಾಕಲು ಕತ್ತರಿ, ನಡೆಯುತ್ತಿದೆ ಪಟ್ಟಿ ಸಿದ್ದಪಡಿಸುವ ತಯಾರಿ

ಎಲ್‌ಎಸಿಯಲ್ಲಿ ಮೇ 4 ರ ಮೊದಲು ಸ್ಥಾನಕ್ಕೆ ಮರಳಲು ಚೀನಾ ಸೈನ್ಯವನ್ನು ಭಾರತ ಕೇಳಿತ್ತು. ಮೂಲಗಳ ಪ್ರಕಾರ ಇಂದಿನ ಸಭೆಯಲ್ಲಿ ಗಾಲ್ವಾನ್ ಕಣಿವೆ ಮತ್ತು ಇತರ ಸ್ಥಳಗಳಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾಗೆ ಒತ್ತಾಯಿಸುತ್ತದೆ.

ಗಡಿಯಲ್ಲಿ ಇಂಡೋ-ಚೀನಾ ಉದ್ವಿಗ್ನತೆ ಮಧ್ಯೆ ಶೀಘ್ರವೇ ಮಿಲಿಟರಿ ಬಲ ಹೆಚ್ಚಿಸಲು ಮುಂದಾದ ಸರ್ಕಾರ

ಮತ್ತೊಂದು ಪ್ರಮುಖ ಸಂಗತಿಯೆಂದರೆ ಭಾರತ ಮತ್ತು ಚೀನಾದ ಮಿಲಿಟರಿ ಅಧಿಕಾರಿಗಳ ಈ ಸಭೆ ನಡೆಯುತ್ತಿರುವ ಸಮಯದಲ್ಲಿ, ರಕ್ಷಣಾ ಸಚಿವರಾದ  ರಾಜನಾಥ್ ಸಿಂಗ್ ಮೂವರು ಮುಖ್ಯಸ್ಥರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮುಕ್ತ ವಿನಾಯಿತಿ ನೀಡಲಾಗಿದೆ. 

ಭಾರತವು ಎಲ್‌ಎಸಿ (LAC)ಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಅತ್ಯಂತ ವೇಗವಾಗಿ ನಿಯೋಜಿಸಿದೆ. ಎಲ್‌ಎಸಿಯಲ್ಲಿ ಹೆಚ್ಚು ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸೇನೆಯು ಚೀನಾದ ನಿದ್ರೆ ಕೆಡಿಸಿದೆ.

Trending News