ನವದೆಹಲಿ: ಭಾರತದಲ್ಲಿ ಬುಧವಾರ ಕರೋನವೈರಸ್ನಿಂದಾಗಿ 507 ಜನರು ಸಾವನ್ನಪ್ಪಿದ್ದಾರೆ, ಇದು ದೇಶದಲ್ಲಿ ಒಂದು ದಿನದಲ್ಲಿ ಕರೋನಾದಿಂದಾಗಿ ಮೃತಪಟ್ಟವರ ಅತ್ಯಧಿಕ ಸಂಖ್ಯೆ. ಅದೇ ಸಮಯದಲ್ಲಿ ಜೂನ್ನಲ್ಲಿ ಸುಮಾರು ನಾಲ್ಕು ಲಕ್ಷ ಜನರಿಗೆ ಕರೋನಾವೈರಸ್ ಸೋಂಕು ತಗುಲಿದ ಕಾರಣ ಈ ತಿಂಗಳನ್ನು ಇದುವರೆಗಿನ ಅತ್ಯಂತ ಭಯಾನಕ ತಿಂಗಳು ಎಂದು ಬಣ್ಣಿಸಲಾಗಿದ್ದು ಈ ಕಾರಣದಿಂದಾಗಿ ಕೆಲವು ರಾಜ್ಯಗಳು ವಿಭಿನ್ನ ನಿರ್ಬಂಧಗಳೊಂದಿಗೆ ಲಾಕ್ಡೌನ್ (Lockdown) ಅನ್ನು ಆಶ್ರಯಿಸಬೇಕಾಯಿತು.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕೋವಿಡ್-19 (COVID-19) ರ ಕಾರಣದಿಂದಾಗಿ ಸಂಭವಿಸಿದ ಒಟ್ಟು 17,4000 ಸಾವುಗಳಲ್ಲಿ ಕೇವಲ ಮೂರು ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಾತ್ರವೇ 70 ಪ್ರತಿಶತದಷ್ಟು ಸಾವು ಸಂಭವಿಸಿದೆ.
ಕೊರೊನಿಲ್ ಬಗ್ಗೆ ಯಾವುದೇ ವಿವಾದಗಳಿಲ್ಲ, ಇದು ನನ್ನ ವಿರುದ್ಧದ ಪ್ರಚಾರವಷ್ಟೇ: ಬಾಬಾ ರಾಮದೇವ್
ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 18,653 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿ ಒಟ್ಟು ಸೋಂಕಿತರ ಸಂಖ್ಯೆ 5,85,493ಕ್ಕೆ ಏರಿದೆ ಎಂದು ಈವರೆಗಿನ ದತ್ತಾಂಶಗಳಿಂದ ತಿಳಿದುಬಂದಿದೆ. ಅದೇ ಸಮಯದಲ್ಲಿ ಈ ಕಾಯಿಲೆಯಿಂದ ಚೇತರಿಸಿಕೊಳ್ಳುವ ಪ್ರಮಾಣವು ಹಂತಹಂತವಾಗಿ ಉತ್ತಮಗೊಳ್ಳುತ್ತಿದೆ ಮತ್ತು ಇದು 60 ಪ್ರತಿಶತದಷ್ಟು ತಲುಪಿದೆ.
ಸಚಿವಾಲಯದ ಮಾಹಿತಿಯ ವಿಶ್ಲೇಷಣೆಯ ಪ್ರಕಾರ ಸತತ ಐದನೇ ದಿನವೂ 18,000ಕ್ಕಿಂತ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಜೂನ್ ತಿಂಗಳಲ್ಲಿ ದೇಶದಲ್ಲಿ 3,94,958 ಮಂದಿ ಮಾರಕ ಸೋಂಕಿಗೆ ತುತ್ತಾಗಿದ್ದಾರೆ. ಇದು ಒಟ್ಟು ಪ್ರಕರಣಗಳಲ್ಲಿ 68 ಪ್ರತಿಶತ.
COVID-19 ಎಫೆಕ್ಟ್: ಈ ವರ್ಷ ಗಣೇಶೋತ್ಸವ ಮಂಡಲ್ ಇಡದಿರಲು ಲಾಲ್ಬೌಚ ರಾಜ ನಿರ್ಧಾರ
ಅಂಕಿಅಂಶಗಳ ಪ್ರಕಾರ 2,20,114 ಕರೋನಾ ರೋಗಿಗಳು ಇನ್ನೂ ಚಿಕಿತ್ಸೆಯಲ್ಲಿದ್ದರೆ, 3,47,978 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೆ 59.43 ರಷ್ಟು ರೋಗಿಗಳು ಸೋಂಕು ಮುಕ್ತರಾಗಿದ್ದಾರೆ ಎಂದು ಇದು ಸೂಚಿಸುತ್ತದೆ.
ಭಾರತದಲ್ಲಿ ಕೋವಿಡ್ -19 ರ ಮೊದಲ ಪ್ರಕರಣ ಕೇರಳದಲ್ಲಿ ಜನವರಿ 30 ರಂದು ಚೀನಾದ ವುಹಾನ್ನಿಂದ ಹಿಂದಿರುಗಿದ ಸಂದರ್ಭದಲ್ಲಿ ವರದಿಯಾಗಿದೆ. ಮಾರ್ಚ್ 12 ರಂದು ಕೋವಿಡ್ -19 ರಿಂದ ಕರ್ನಾಟಕದ ಆರೋಗ್ಯ ಅಧಿಕಾರಿಗಳು ದೇಶದಲ್ಲಿ ಮೊದಲ ಸಾವನ್ನು ದಾಖಲಿಸಿದ್ದಾರೆ.
ಈಗಿನದು ಏನೇನೂ ಅಲ್ಲ, ಅಮೆರಿಕಕ್ಕೆ ಅಪ್ಪಳಿಸಲಿದೆ ಕರೋನಾ ಸುನಾಮಿ
ಸೋಂಕಿನ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಮಣಿಪುರ ಮತ್ತು ನಾಗಾಲ್ಯಾಂಡ್ ಸೇರಿದಂತೆ ಇತರ ರಾಜ್ಯಗಳು ಲಾಕ್ಡೌನ್ ಅನ್ನು ಜೂನ್ 30 ರಿಂದ ಜುಲೈ 31 ರವರೆಗೆ ವಿವಿಧ ಅವಧಿಗಳನ್ನು ವಿಸ್ತರಿಸಿವೆ.
ಕರೋನಾವೈರಸ್ (Coronavirus) ಸೋಂಕು ಹರಡುವುದನ್ನು ತಡೆಗಟ್ಟಲು ನಿರ್ಬಂಧಿತ ಚಟುವಟಿಕೆಗಳನ್ನು ಹಂತಹಂತವಾಗಿ ತೆರೆಯಲಾಗುವುದು, ಆದರೂ ಶಿಕ್ಷಣ ಸಂಸ್ಥೆಗಳು, ಮೆಟ್ರೋ ರೈಲು ಸೇವೆಗಳು, ಚಿತ್ರಮಂದಿರಗಳು ಮತ್ತು ಜಿಮ್ಗಳು ಮುಚ್ಚಲ್ಪಡುತ್ತವೆ. ರಾಜಕೀಯ, ಸಾಂಸ್ಕೃತಿಕ, ಕ್ರೀಡಾಕೂಟಗಳು ಮತ್ತು ಇತರ ಕಾರ್ಯಕ್ರಮಗಳ ನಿಷೇಧವನ್ನು 'ಅನ್ಲಾಕ್ -2' ನಲ್ಲಿಯೂ ಮುಂದುವರಿಸಲಾಗಿದೆ.