ನವದೆಹಲಿ: ತನ್ನ ದೇಶದಲ್ಲಿ ಅಭಿವೃದ್ಧಿಗೊಂಡ Sputnik V ಕೊರೊನಾ ಲಸಿಕೆಯ ಜಂಟಿ ಉತ್ಪಾದನೆಗಾಗಿ ರಷ್ಯಾ ಭಾರತದೊಂದಿಗೆ ಅಧಿಕೃತ ಸಂಪರ್ಕ ಸಾಧಿಸಿದೆ. ಮೂಲಗಳಿಂದ ಲಭಿಸಿರುವ ಮಾಹಿತಿಯ ಪ್ರಕಾರ ರಷ್ಯಾ ರಾಯಭಾರಿ ನಿಕೊಲಾ ಕೂಡಾಶೇವ್ ಅವ್ರು ಇಂದು ಆರೋಗ್ಯ ಸಚಿವಾಲಯದ ಕೊರೊನಾ ಕುರಿತಾದ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಕುರಿತು ರಷ್ಯಾ ಭಾರತೀಯ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಐಸಿಎಂಆರ್ ಅನ್ನು ಸಂಪರ್ಕಿಸಿದೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಲಸಿಕೆ ತಯಾರಿಸುವ ಗಾಮಾಲಯಾ ನ್ಯಾಷನಲ್ ಸೆಂಟರ್ ಆಫ್ ಎಪಿಡೆಮಿಯಾಲಾಜಿ ಹಾಗೂ ಮೈಕ್ರೋಬಯಾಲಾಜಿ ಜೊತೆ ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಕಳೆದ ವಾರವಷ್ಟೇ ಈ ಕುರಿತು ಮಾತನಾಡಿದ್ದ ರಷ್ಯಾ ಮೂಲದ ರಶಿಯನ್ ಡೈರೆಕ್ಟರ್ ಇನ್ವೆಸ್ಟ್ಮೆಂಟ್ ಫಂಡ್ ನ CEO ಕಿರಿಲ್ ದಿಮಿತ್ರೆಭ್, ವ್ಯಾಕ್ಸಿನ್ ಉತ್ಪಾದನೆಗಾಗಿ ನಾವು ಭಾರತದೊಂದಿಗೆ ಕಾರ್ಯನಿರ್ವಹಿಸಲು ಸಿದ್ಧರಾಗಿರುವುದಾಗಿ ಹೇಳಿದ್ದರು. ಪ್ರತಿ ತಿಂಗಳು ಸುಮಾರು 6 ಮಿಲಿಯನ್ ಸ್ಪುಟ್ನಿಕ್ ವ್ಯಾಕ್ಸಿನ್ ಉತ್ಪಾದನೆಯ ಗುರಿಯನ್ನು ಹೊಂದಿದೆ.