ನವದೆಹಲಿ : ಮಹಿಳೆಯರಿಗೆ 40 ವರ್ಷ ವಯಸ್ಸಾಗುತ್ತಿದ್ದಂತೆ ಅವರ ಶರೀರದಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತದೆ. ವಯಸ್ಸಾದಂತೆ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯೆಂದರೆ ಕೀಲುಗಳಿಗೆ ಸಂಬಂಧಪಟ್ಟದ್ದು. ಇದಲ್ಲದೆ ಮೊನೋಪಾಸ್ (Monopass) ಕಾರಣದಿಂದಾಗಿ ಮಧ್ಯ ವಯಸ್ಸಿನಲ್ಲಿ ದೇಹ ತೂಕ ಹೆಚ್ಚಾಗುವ (Weight Gain) ಸಮಸ್ಯೆ ಸಾಮಾನ್ಯವಾದದ್ದು. ಸಮಸ್ಯೆಯಿಂದ ಪರಿಹಾರ ಬೇಕೆಂದರೆ ನಮ್ಮ ಜೀನವದ ಪ್ರತಿ ಹಂತದಲ್ಲಿಯೂ ದೇಹದ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವ ಬಗ್ಗೆ ಗಮನ ವಹಿಸುವುದು ಅಗತ್ಯ.
40 ರ ವಯಸ್ಸಿನಲ್ಲಿ ಹೆಚ್ಚನ ಗಮನ ಅಗತ್ಯ:
ಜೀವನದ ಪ್ರತಿ ಹಂತದಲ್ಲಿಯೂ ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಅದರಲ್ಲಿಯೂ 40ರ ಆಸುಪಾಸಿನಲ್ಲಿ ಅತಿ ಹೆಚ್ಚುಕಾಳಜಿ ವಹಿಸುವ ಅಗತ್ಯವಿದೆ. ನಿಮ್ಮ ನಿತ್ಯದ ಡಯೆಟ್ ನಲ್ಲಿ (Diet) ಈ ವಸ್ತುಗಳನ್ನು ಸೇವಿಸಿ. ಇದರಿಂದ ನಿಮ್ಮದೇಹದ ರೋಗ ನಿರೋಧಕ ಶಕ್ತಿಯನ್ನು (Immunty) ವೃದ್ದಿಸಿಕೊಳ್ಳಬಹುದು.
ALSO READ : Trending: ಏನಿದು Disease X, ಕೊರೊನಾಗಿಂತಲೂ ಭಯಾನಕ ಮಹಾಮಾರಿ ಎಂದ ವಿಜ್ಞಾನಿಗಳು
ಬಾದಾಮಿ ಆಕ್ರೋಟ್ :
ವಯಸ್ಸಾಗುತ್ತಿದ್ದಂತೆ ಮಹಿಳೆಯರು ಬಾದಾಮಿ, ಆಕ್ರೋಟ್ ಗಳನ್ನು ಸೇವಿಸಬೇಕು. ಉತ್ತಮ ಕೊಬ್ಬಿನಾಂಶ, ಪ್ರೊಟಿನ್, (Protein) ಫೈಬರ್ ಅತಿ ಹೆಚ್ಚಾಗಿರುವ ಬಾದಾಮಿ ಮತ್ತು ಆಕ್ರೋಟ್ ಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ. ಅಲ್ಲದೆ ದೇಹ ತೂಕ ಹೆಚ್ಚುವುದನ್ನು (Weight Gain) ಕೂಡಾ ತಡೆಯುತ್ತದೆ.
ಸೇಬುಹಣ್ಣು:
ಪ್ರತಿ ನಿತ್ಯ ಬೆಳಿಗ್ಗೆಸೇಬುಹಣ್ಣು (Apple) ಸೇವಿಸುವುದು ಎಲ್ಲಾ ವಯಸ್ಸಿವಬರಿಗೂ ಬಹಳ ಮುಖ್ಯ. ಪ್ರತಿನಿತ್ಯ ಸೇಬು ತಿನ್ನುವುದರಿಂದ ಉದರಕ್ಕೆಸಂಬಂಧಿಸಿದ ರೋಗಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೆ ಹೃದಯಸಂಬಂಧಿ ಕಾಯಿಲೆಗಳನ್ನು(Heart Disease) ತಡಯುವಲ್ಲಿಯೂ ಸೇಬುಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.
ಹುಳಿ ಅಂಶವಿರುವ ಹಣ್ಣುಗಳು:
ಹುಳಿ ಅಂಶವಿರುವ ಹಣ್ಣುಗಳಲ್ಲಿ ಆ್ಯಂಟಿ ಓಕ್ಸಿಡೆಂಟ್ (Anti Oxident) ಇರುತ್ತದೆ. ಹುಳಿ ಅಂಶವಿರುವ ಹಣ್ಣುಗಳಲ್ಲಿ ಫೈಬರ್, ವಿಟಮಿನ್ ಸಿ (Vitamin C) ಹೆಚ್ಚಾಗಿ ಇರುತ್ತದೆ. 40ರ ವಯಸ್ಸಿನಲ್ಲಿ ಮಹಿಳೆಯರಲ್ಲಿ ಕಂಡು ಬರುವ ದೇಹ ತೂಕ ಹೆಚ್ಚಳದ ಸಮಸ್ಯೆ, ಹೃದಯ ಸಂಬಂಧ ರೋಗಗಳನ್ನು ತಡೆಯಲು ಇದುಸಹಾಯ ಮಾಡುತ್ತದೆ.
ALSO READ : COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು
ಮೊಟ್ಟೆ :
ಮಹಿಳೆಯರ ದೇಹದಲ್ಲಿ ಸಾಮಾನ್ಯವಾಗಿ ವಿಟಮಿನ್ ಡಿ (Vitamin D) ಮತ್ತು ಕಬ್ಬಿನಾಂಶದ ಕೊರತೆ ಇದ್ದೇ ಇರುತ್ತದೆ, ಹಾಗಾಗಿ ಪ್ರತಿ ನಿತ್ಯ ಮೊಟ್ಟೆ(Egg) ಸೇವನೆ ಮಾಡುವುದು ಒಳಿತು. ಇದರಲ್ಲಿ ಪ್ರೋಟಿನ್ ಅಂಶ ಹೇರಳವಾಗಿರುವುದು ಮಾತ್ರವಲ್ಲ ಇದು, ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹೃದಯ ಸಂಬಂಧ ರೋಗಗಳನ್ನು ತಡೆಯಲು, ದೇಹ ತೂಕ ಹೆಚ್ಚಳವನ್ನು ಕಡಿಮೆ ಮಾಡಲುಸಹಕಾರಿಯಾಗಿದೆ.
ಎಣ್ಣೆ ಅಂಶ ಹೊಂದಿರುವ ಮೀನು:
ಸೋಮಾಲಿನಾ ಮೀನುಗಳಲ್ಲಿ ಅಧಿಕ ಪ್ರಮಾಣದ ಕೊಬ್ಬಿನ ಅಂಶವಿರುತ್ತದೆ. ಇದು ಮಹಿಳೆಯರ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಗಳಿಗ ಅಗತ್ಯವಿರುತ್ತದೆ. ಕೊಬ್ಬಿನ ಅಂಶವಿರುವ ಮೀನುಗಳಲ್ಲಿ ಒಮೆಗಾ 3(Omega 3) ಇರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಹೃದಯ, ಮೆದುಳು ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
ಕ್ಯಾರೆಟ್ :
ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ತ್ವಚೆ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮ. ಕ್ಯಾರೆಟ್ ಸೇವನೆಯಿಂದ ತ್ವಚೆಯಲ್ಲಿ ಬೀಳುವ ಕಪ್ಪುಕಲೆಗಳು, ಚರ್ಮದ ಸುಕ್ಕು, ಇವುಗಳಿಂದ ಮುಕ್ತಿ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.