CM BSY : ಸಂಪುಟ ವಿಸ್ತರಣೆಗೆ ಸಿಗಲಿದೆಯಾ ಅನುಮತಿ ? ಕುತೂಹಲ ಕೆರಳಿಸಿದ ಸಿಎಂ ದೆಹಲಿ ಭೇಟಿ

ಸಾಕಷ್ಟುಕುತೂಹಲ ಕೆರಳಿಸಿದೆ ಸಿಎಂ ಯಡಿಯೂರಪ್ಪ ದೆಹಲಿ ಭೇಟಿ.  ವರಿಷ್ಠರ ಜೊತೆ ಚರ್ಚೆ  ನಂತರ ಇಂದೇ ಬೆಂಗಳೂರಿಗೆ ವಾಪಸಾಗಲಿರುವ ಬಿಎಸ್ ವೈ

Written by - Zee Kannada News Desk | Last Updated : Jan 10, 2021, 11:33 AM IST
  • ಕುತೂಹಲ ಕೆರಳಿಸಿದೆ ಸಿಎಂ ದೆಹಲಿ ಭೇಟಿ
  • ಸಂಪುಟ ವಿಸ್ತರಣೆ ಬಗ್ಗ ವರಿಷ್ಠರೊಂದಿಗೆ ಚರ್ಚೆ
  • ಉಪಚುನಾವಣೆಯ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ
CM BSY : ಸಂಪುಟ ವಿಸ್ತರಣೆಗೆ ಸಿಗಲಿದೆಯಾ ಅನುಮತಿ ? ಕುತೂಹಲ ಕೆರಳಿಸಿದ ಸಿಎಂ ದೆಹಲಿ ಭೇಟಿ title=
ಸಾಕಷ್ಟುಕುತೂಹಲ ಕೆರಳಿಸಿದೆ ಸಿಎಂ ಯಡಿಯೂರಪ್ಪ ದೆಹಲಿ ಭೇಟಿ (photo ANI)

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ ಅನ್ನೋ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಸಚಿವ ಸ್ಥಾನ ಆಕಾಂಕ್ಷಿಗಳು ಸಂಪುಟವಿಸ್ತರಣೆಗೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಸಂಪುಟ ವಿಸ್ತರಣೆಗೆ ಸಿಗಲಿದೆಯೇ  ಅನುಮತಿ:
ಬೆಳಿಗ್ಗೆ 8.20ರ ವಿಮಾನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ (B S Yadiyurappa) ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಪಕ್ಷದವರಿಷ್ಠರೊಂದಿಗೆ ಚರ್ಚೆ ನಡಸಲಿದ್ದಾರೆ. ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪಚುನಾವಣೆ (By-Election) ಘೋಷಣೆಯಾಗುವ ಸಂಭವವಿದೆ. ಒಂದು ವೇಳೆ ಚುನಾವಣೆ ಘೋಷಣೆಯಾದಲ್ಲಿ  ಸಚಿವ ಸಂಪುಟ ವಿಸ್ತರಣೆ 2 ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ  ಘೋಷಣೆಯಾಗುವ ಮೊದಲೇ ಸಂಪುಟ ವಿಸ್ತರಣೆ (Cabine Expansion) ಕೈಗೊಳ್ಳುವ ಚಿಂತನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಇದ್ದಾರೆ. ಹಾಗಾಗಿ  ಇಂದಿನ ಸಭೆಯಲ್ಲಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುವ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸಲಿದ್ದಾರೆ. 

ಇದನ್ನೂ ಓದಿ : H.D.Kumaraswamy: 'ಸಿಎಂ ಬಿಎಸ್ ವೈಗೆ ಅಭಿನಂದನೆಗಳು ಹೇಳಿದ ಮಾಜಿ ಸಿಎಂ'

ಸಂಪುಟ ವಿಸ್ತರಣೆಯೋ? ಅಥವಾ ಸಂಪುಟ ಪುನಾರಚನೆಯೋ  :
ಇಂದು ದೆಹಲಿ ಭೇಟಿ ವೇಳೆ ಸಿಎಂ ಬಿಎಸ್ ವೈ ಜೆ.ಪಿ.ನಡ್ಡಾ (J P Nadda) ಅರುಣ್ ಸಿಂಗ್‌ ಅವರನ್ನು ಭೇಟಿ ಮಾಡುವ ಸಂಭವವಿದೆ. ಅಮಿತ್ ಶಾ (Amith Shah) ಅವರೊಂದಿಗೂ ಚರ್ಚಿಸಿ ಇಂದು ರಾತ್ರಿಯೇ ಬೆಂಗಳೂರಿಗೆ (Bengaluru) ವಾಪಸ್ ಆಗುವ ನಿರೀಕ್ಷೆಯಿದೆ. ಈ ಬಾರಿ ಸಂಪುಟ ವಿಸ್ತರಣೆಯಾಗಲಿದೆಯೇ, ಅಥವಾ ಪುನಾರಚನೆ ಆಗಲಿದೆಯೇ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ಪ್ರಶ್ನೆಗೆ ವರಿಷ್ಠರೊಂದಿಗಿನ ಚರ್ಚೆ ಬಳಿಕವಷ್ಟೇ ಉತ್ತರ ಸಿಗಲಿದೆ.

ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಗ್ಗೆಯೂ ಚರ್ಚೆ:
ಒಂದು ಲೋಕಸಭಾ (Loksabha) ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿಚಾರವೂ ಇಂದಿನ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ಉಪ-ಚುನಾವಣೆಗಳಿಗೆ ಅಭ್ಯರ್ಥಿಗಳಾಗಲು ಬಿಜೆಪಿಯಲ್ಲಿ (BJP) ಭಾರೀ ಫೈಟ್ ಏರ್ಪಟ್ಟಿದೆ. ಉಪ-ಚುನಾವಣೆಗಳಿಗೆ ಸದ್ಯದಲ್ಲೇ ದಿನಾಂಕ ಘೋಷಣೆಯಾಗುವ ಹಿನ್ನೆಲೆಯಲ್ಲಿ  ಅಭ್ಯರ್ಥಿಗಳ ವಿಚಾರವನ್ನೂ ಸಿಎಂ ಇತ್ಯರ್ಥ ಮಾಡಿಕೊಂಡು ಬರಲಿದ್ದಾರೆ ಎನ್ನಲಾಗಿದೆ.  

ಇದನ್ನೂ ಓದಿಗ್ರಾಮೀಣಾಭಿವೃದ್ಧಿ ವಿವಿಯಿಂದ ಸರಕಾರಿ ಶಾಲೆಗಳ ದತ್ತು ಸ್ವೀಕಾರ
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News