ಬಾಲಿವುಡ್ ನಟಿ ಇಶಾ ಡಿಯೋಲ್ Instagram ಖಾತೆ ಹ್ಯಾಕ್..!

ಬಾಲಿವುಡ್ ನಟಿ ಇಶಾ ಡಿಯೋಲ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ತನ್ನ ಪ್ರೊಫೈಲ್ನಿಂದ ಸಂದೇಶವನ್ನು ಸ್ವೀಕರಿಸಿದಲ್ಲಿ ಅದನ್ನು ಸ್ವೀಕರಿಸಕೂಡದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Last Updated : Jan 10, 2021, 07:06 PM IST
  • ಇಂದು ಬೆಳಿಗ್ಗೆ ನನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ 'imeshadeol' ಹ್ಯಾಕ್ ಆಗಿದೆ, ಆದ್ದರಿಂದ ನೀವು ನನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಏನನ್ನಾದರೂ ಸ್ವೀಕರಿಸಿದರೆ ದಯವಿಟ್ಟು ಯಾವುದೇ ಸಂದೇಶಕ್ಕೆ ಪ್ರತ್ಯುತ್ತರಿಸಬೇಡಿ.ಅನಾನುಕೂಲತೆಗಾಗಿ ಕ್ಷಮಿಸಿ" ಎಂದು 39 ವರ್ಷದ ನಟಿ ಬರೆದುಕೊಂಡಿದ್ದಾರೆ.
  • ನಟಿ ಇಶಾ ಡಿಯೋಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೃತಿಸ್ವಾಮ್ಯ ಉಲ್ಲಂಘನೆ ಸಂದೇಶವನ್ನು ಸ್ವೀಕರಿಸಿರುವ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಇಶಾ ಡಿಯೋಲ್ Instagram ಖಾತೆ ಹ್ಯಾಕ್..!   title=
Photo Courtesy: Facebook

ನವದೆಹಲಿ: ಬಾಲಿವುಡ್ ನಟಿ ಇಶಾ ಡಿಯೋಲ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ತನ್ನ ಪ್ರೊಫೈಲ್ನಿಂದ ಸಂದೇಶವನ್ನು ಸ್ವೀಕರಿಸಿದಲ್ಲಿ ಅದನ್ನು ಸ್ವೀಕರಿಸಕೂಡದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ನಟಿ ಇಶಾ ಡಿಯೋಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೃತಿಸ್ವಾಮ್ಯ ಉಲ್ಲಂಘನೆ ಸಂದೇಶವನ್ನು ಸ್ವೀಕರಿಸಿರುವ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.ನಂತರ ಅವರ ಇನ್‌ಸ್ಟಾಗ್ರಾಮ್ (Instagram) ಖಾತೆಯ ಸುರಕ್ಷತೆಗೆ ಧಕ್ಕೆಯುಂಟಾಗಿರುವುದು ತಿಳಿದುಬಂದಿದೆ.ಅವರ ಖಾತೆಯ ಹೆಸರು Instagram Support ಎಂದು ಬದಲಾಗಿದೆ.

ಇದನ್ನೂ ಓದಿ: WhatsApp New Policyಯಿಂದ ಬಳಕೆದಾರರ ಕಿರಿಕಿರಿ, ವಾಟ್ಸ್ ಆಪ್ ನೀಡಿದೆ ಉತ್ತರ

ಇಂದು ಬೆಳಿಗ್ಗೆ ನನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ 'imeshadeol' ಹ್ಯಾಕ್ ಆಗಿದೆ, ಆದ್ದರಿಂದ ನೀವು ನನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಏನನ್ನಾದರೂ ಸ್ವೀಕರಿಸಿದರೆ ದಯವಿಟ್ಟು ಯಾವುದೇ ಸಂದೇಶಕ್ಕೆ ಪ್ರತ್ಯುತ್ತರಿಸಬೇಡಿ.ಅನಾನುಕೂಲತೆಗಾಗಿ ಕ್ಷಮಿಸಿ" ಎಂದು 39 ವರ್ಷದ ನಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ವಿನ್ಯಾಸದೊಂದಿಗೆ ಬರುತ್ತಿದೆ Instagram

ಇತ್ತೀಚೆಗೆ, ಹಿರಿಯ ಗಾಯಕಿ ಗಾಯಕ ಆಶಾ ಭೋಸ್ಲೆ, ಉರ್ಮಿಳಾ ಮಾತೋಂಡ್ಕರ್, ಇಂಟೀರಿಯರ್ ಡಿಸೈನರ್ ಸುಸ್ಸೇನ್ ಖಾನ್, ನಟ ವಿಕ್ರಾಂತ್ ಮಾಸ್ಸಿ ಮತ್ತು ಫರಾಹ್ ಖಾನ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಹ್ಯಾಕ್ ಮಾಡಲಾಗಿದೆ.

Trending News