ಬೆಂಗಳೂರು : ಸೌಂದರ್ಯ ವಿಚಾರ ಬಂದಾಗ ಆದ್ಯತೆ ಸಿಗುವುದು ಮುಖಕ್ಕೆ. ನಿಮ್ಮ ಮುಖ ಸೌಂದರ್ಯ ಉಳಿಯಬೇಕಾದರೆ ಏನು ಮಾಡಬೇಕು.? ದೇಹದ ಕೊಬ್ಬನ್ನು ಇಳಿಸಲು ಭರ್ಜರಿ ವ್ಯಾಯಾಮ ಮಾಡುತ್ತೀರಿ. ಯೋಗ ಮಾಡಿ ದೇಹದ ತೂಕ ಇಳಿಸಿಕೊಳ್ಳುತ್ತೀರಿ. ಆದರೆ ಮುಖದ ಫ್ಯಾಟ್ ಇಳಿಸಿಕೊಳ್ಳುವುದು ಹೇಗೆ (face workout)?. ಮುಖ ಸದಾ ನ್ಯಾಚುರಲ್ ಯಂಗ್ (slim face) ಆಗಿ ಕಾಣಲು ಏನು ಮಾಡಬೇಕು, ತಿಳಿದುಕೊಳ್ಳಿ.
ಮುಖಕ್ಕೆ ವ್ಯಾಯಾಮ ಯಾಕೆ ಬೇಕು..?
ಹರೆಯದ ಒಂದು ಹಂತ ದಾಟಿದಾಗ ಮುಖದಲ್ಲೂ ಫ್ಯಾಟ್ (fat) ಕಾಣಿಸುತ್ತದೆ. ಮುಖದಲ್ಲೂ ಸುಕ್ಕಿನ ಗೆರೆಗಳು ಸೃಷ್ಟಿಯಾಗುತ್ತದೆ. ಮುಖ ಮುಪ್ಪಾದಂತೆ ತೋರುತ್ತದೆ. ನಿಮ್ಮದೇಹಕ್ಕೆ ಬೊಜ್ಜು ಬಂದಂತೆ ಮುಖಕ್ಕೂ ಬೊಜ್ಜು ಬರುತ್ತದೆ. ಅದನ್ನು ಕರಗಿಸಬೇಕು.
ಇದನ್ನೂ ಓದಿ : ಪುರುಷರಿಗೆ ತುಂಬಾ ಲಾಭಕಾರಿಯಾಗಿದೆ ಲವಂಗ, ಹಲವು ರೀತಿಯ ಕ್ಯಾನ್ಸರ್ ನಿಂದ ರಕ್ಷಣೆ ಕೂಡ ನೀಡುತ್ತದೆ
ಮುಖದ ವ್ಯಾಯಾಮ (facial exercise) ಯಾವುದು..?
1.ನಾಲಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಶಕ್ತಿಯುತವಾಗಿ ಹೊರಕ್ಕೆ ಚಾಚಿ. ಕನಿಷ್ಟ 10 ಸೆಕೆಂಡ್ ಚಾಚಿದರೂ ಸಾಕು. ದಿನ ಬೆಳಗ್ಗೆ ಎದ್ದು ಹಾಗೆ ಸ್ವಲ್ಪ ಹೊತ್ತು ಮಾಡಿ. ಇದರಿಂದ ಮುಖದ (Face) ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ. ಮುಖ ಲಘುವಾಗುತ್ತದೆ.
2.ದವಡೆಯ (jaw muscles) ಕೆಲವು ವ್ಯಾಯಾಮ ಮಾಡುವುದು:
ನಿಂತು ಅಥವಾ ಕುಳಿತು ಈ ವ್ಯಾಯಾಮ (Exercise) ಮಾಡಬಹುದು. ಇದು ಸುಲಭ ಮತ್ತು ಸರಳ. ಏನಾದರೂ ತಿನ್ನುತ್ತಿದ್ದೀರಿ ಎನ್ನುವಂತೆ ದವಡೆಗಳನ್ನು ತಿರುಗಿಸಿ. ತುಟಿಗಳನ್ನು ಮುಚ್ಚಿಕೊಳ್ಳಿ, ದವಡೆಯಿಂದ ಜಗಿದಂತೆ ಮಾಡಿ ಮತ್ತು ದೀರ್ಘವಾಗಿ ಉಸಿರಾಡುತ್ತಿರಿ. ಬಾಯಿ ಅಗಲವಾಗಿ ತೆರೆಯಿರಿ ಮತ್ತು ನಾಲಗೆಯು ಕೆಳಭಾಗದ ಹಲ್ಲಿಗೆ ಒತ್ತುತ್ತಿರಲಿ ಮತ್ತು ಕೆಲವು ಸೆಕೆಂಡುಗಳ ಕಾಲ ಹಾಗೆ ಬಿಡಿ. ಉಸಿರು ಒಳಗೆ, ಹೊರಗೆ ಬಿಡಿ. ಈ ರೀತಿಯ ಮುಖ ವ್ಯಾಯಾಮದಿಂದ ಮುಖದಲ್ಲಿ ಕಾಂತಿ ಹೆಚ್ಚುತ್ತದೆ. ಫ್ಯಾಟ್ (Fat) ಕಡಿಮೆಯಾಗಿ ಯಂಗ್ ಆಗಿ ಕಾಣಿಸ್ತೀರಿ..
ಇದನ್ನೂ ಓದಿ : ಯಾವುದೇ ಕಾರಣಕ್ಕೂ ಈ ಐದು ಆಹಾರಗಳನ್ನು ಫ್ರಿಜ್ ನಲ್ಲಿಟ್ಟು ಬಳಿಕ ಬಿಸಿ ಮಾಡಿ ತಿನ್ನಬೇಡಿ..! ಕಾರಣ ತಿಳಿಯಿರಿ
ಗಾಳಿ ಹೊರಬಿಡುವ ವ್ಯಾಯಾಮ:
ಒಂದು ಕುರ್ಚಿ ಮೇಲೆ ಕುಳಿತು ಮುಖ ಮೇಲಕ್ಕೆತ್ತಿ. ಆಕಾಶ ನೋಡುತ್ತಿರಿ. ತುಟಿಗಳನ್ನು(lips) ಒಳಗೆ ಎಳೆಯಿರಿ. ಗಾಳಿ ಹೊರಗೆ ಹಾಕಲು ಪ್ರಯತ್ನಿಸಿ. ಇದನ್ನು ಕೆಲವು ಸೆಕೆಂಡುಗಳ ಕಾಲ ಮಾಡಿ.
ಮುಖದ ಸ್ನಾಯುಗಳಿಗೆ ವ್ಯಾಯಾಮ :
ಕೈಗಳಿಂದ ಮುಖದ ಮೇಲಿನ ಸ್ನಾಯುಗಳನ್ನು ಎಳೆಯಿರಿ. ಗಲ್ಲವನ್ನು ಎದೆತನಕ ಇಳಿಸುವ ಪ್ರಯತ್ನ ಮಾಡಿ. ಮುಖವನ್ನು ಎಷ್ಟು ಸಾಧ್ಯವೊ ಅಷ್ಟು ಮೇಲಕ್ಕೆತ್ತಿ.
ಇದನ್ನೂ ಓದಿ : Good News! Hair Fall ಗೆ ಕಾರಣವಾಗುವ ಹಾರ್ಮೋನ್ ತಡೆಯಲು ಬಂತು ಔಷಧಿ
ಆರೋಗ್ಯಕಾರಿ ಆಹಾರ (Healthy food) ತುಂಬಾ ಮುಖ್ಯ :
ಇದು ಕೂಡಾ ತುಂಬಾ ಮುಖ್ಯ.ಅಲ್ಕೋಹಾಲ್ (alcohol) ಬಿಡಿ. ಅಧಿಕ ಎಣ್ಣೆ ಇರುವ ಆಹಾರ ಪದಾರ್ಥ ತಿನ್ನಬೇಡಿ. ಉಪ್ಪು, ಸಕ್ಕರೆ (salt and sugar) ಹೆಚ್ಚು ತಿನ್ನಬೇಡಿ ಎಷ್ಟು ಸಾಧ್ಯವೋ ಅಷ್ಟು ನೀರು (Water) ಕುಡಿಯಿರಿ. ನೀರು ನಿಮ್ಮ ಮುಖಕ್ಕೆ ಸಹಜ ಕಾಂತಿಯನ್ನು ನೀಡುತ್ತದೆ. ಮತ್ತೊಂದು ನೆನಪಿಡಿ. ನಿತ್ಯದ ದೈಹಿಕ ಕಸರತ್ತು ಹಾಗೆ ಮುಂದುವರಿಸಿ. ದೇಹದ ಕೊಬ್ಬು ಕಡಿಮೆಯಾದರೆ ಮಾತ್ರ ಮುಖದ ಕೊಬ್ಬು ಕಡಿಮೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.