ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸತತ 15 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶಕ್ಕೆ ತೆರಳುತ್ತಿದ್ದಾರೆ. ಅವರು ಮಾರ್ಚ್ 26 ರಂದು ನೆರೆಯ ಬಾಂಗ್ಲಾದೇಶ ಭೇಟಿ ಮಾಡುತ್ತಿದ್ದಾರೆ.
2019 ನವೆಂಬರ್ನಲ್ಲಿ ಅಮೆರಿಕಕ್ಕೆ ಹೋಗಿ ಬಂದ ನಂತರ ಮೋದಿ(PM Modi) ಅವರು ಇದುವರೆಗೆ ಯಾವುದೇ ವಿದೇಶಕ್ಕೆ ಭೇಟಿ ನೀಡಿರಲಿಲ್ಲ. ಇದಕ್ಕೆ ಕಾರಣ ಕೊರೊನಾವೈರಸ್ ಸೋಂಕು. ಮುಂಜಾಗ್ರತಾ ಕ್ರಮವಾಗಿ ವಿದೇಶ ಪ್ರವಾಸಗಳನ್ನು ರದ್ದು ಮಾಡಿದ್ದರು.
KCC: ಎಲ್ಲಾ ರೈತರಿಗೂ ಸಿಗಲಿದೆ Credit Card, ಏಪ್ರಿಲ್ 15 ರವರೆಗೆ ವಿಶೇಷ ಅಭಿಯಾನ
ಇದೀಗ ಮತ್ತೆ ತಮ್ಮ ವಿದೇಶ ಪ್ರವಾಸಗಳಿಗೆ ಚಾಲನೆ ನೀಡಿರುವ ಅವರು ಬಾಂಗ್ಲಾದೇಶದಲ್ಲಿ ಮಾರ್ಚ್ 26 ರಂದು ನಡೆಯುವ ಬಾಂಗ್ಲಾದೇಶ(Bangladesh) ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ. ಮೋದಿ ಅವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸಿನಾ ಅವರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ.
State Bank of India: ಮಹಿಳಾ ದಿನಾಚರಣೆಗೆ 'SBI' ನಿಂದ ಬಂಪರ್ ಗಿಫ್ಟ್..!
ಮೋದಿ ಅವರು ವಿದೇಶ ಪ್ರವಾಸವನ್ನು ತಮ್ಮ ಆಡಳಿತದ ಒಂದು ಮಹತ್ವದ ಭಾಗವಾಗಿ ಮಾಡಿಕೊಂಡಿದ್ದರು. ಇದರಿಂದ ವಿದೇಶ(Abroad)ಗಳ ಜೊತೆ ಭಾರತದ ಬಾಂಧವ್ಯ ಗಟ್ಟಿಗೊಂಡಿದ್ದಲ್ಲದೇ ಭಾರತದ ಬಗ್ಗೆ ವಿಶ್ವಮಟ್ಟದಲ್ಲಿ ಮುನ್ನಡೆ ಸಿಗುವಂತೆ ಮಾಡಿದ್ದರು. ಹೀಗಾಗಿ ಅವರು ಆಗಿಂದಾಗ ವಿದೇಶ ಪ್ರವಾಸಗಳನ್ನು ಕೈಗೊಂಡು ಗಮನ ಸೆಳೆದಿದ್ದರು. ಇದು ವಿರೋಧ ಪಕ್ಷಗಳ ವಿರೋಧಕ್ಕೂ ಪ್ರಮುಖ ಕಾರಣವಾಗಿತ್ತು.
Priyanka Gandh: 'ನೂರು ದಿನಗಳಾಗಲಿ, ನೂರು ವರ್ಷಗಳಾಗಲಿ ನಮ್ಮ ಬೆಂಬಲ ರೈತರಿಗೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.