online shopping: ಆನ್ ಲೈನ್ ಶಾಪಿಂಗ್ ನಲ್ಲಿ ನಕಲಿ ಸರಕು ಬಂದ್ರೆ ಕಂಪನಿಯೇ ಜವಾಬ್ದಾರಿ! ಸರ್ಕಾರದಿಂದ ಹೊಸ ನಿಯಮ!

ರಾಷ್ಟ್ರೀಯ ಇ -ಕಾಮರ್ಸ್ ನೀತಿಯ ಕರಡುವಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು.

Last Updated : Mar 14, 2021, 01:44 PM IST
  • ಈಗಂತೂ ಆನ್ ಲೈನ್ ಶಾಪಿಂಗ್ ಹೆಚ್ಚಾಗಿದೆ.
  • ರಾಷ್ಟ್ರೀಯ ಇ -ಕಾಮರ್ಸ್ ನೀತಿಯ ಕರಡುವಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು.
  • ಕರಡು ಸಿದ್ಧಪಡಿಸುವ ಬಗ್ಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯ ಹಿರಿಯ ಅಧಿಕಾರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆ
online shopping: ಆನ್ ಲೈನ್ ಶಾಪಿಂಗ್ ನಲ್ಲಿ ನಕಲಿ ಸರಕು ಬಂದ್ರೆ ಕಂಪನಿಯೇ ಜವಾಬ್ದಾರಿ! ಸರ್ಕಾರದಿಂದ ಹೊಸ ನಿಯಮ! title=

ನವದೆಹಲಿ: ಈಗಂತೂ ಆನ್ ಲೈನ್ ಶಾಪಿಂಗ್ ಹೆಚ್ಚಾಗಿದೆ. ಬೇಕಾದ ಎಲ್ಲ ವಸ್ತುಗಳನ್ನು ಮನೆಯಿಂದಲೇ ಪಡೆಯಬಹುದಾಗಿದೆ. ಆದರೆ ಉತ್ಪನ್ನಗಳು ನೈಜವೇ? ನಕಲಿಯೇ? ಎಂಬ ಬಗ್ಗೆ ಸಂದೇಹ ಇದ್ದೇ ಇರುತ್ತದೆ. ನಕಲಿಯಾಗಿದ್ದರೆ ಹಿಂದಿರುಗಿಸಲು ಸಾಧ್ಯವಾಗುವ ಗ್ರಾಹಕರಿಗೆ ಅನುಕೂಲವಾಗುವಂತಹ ಹೊಸ ನಿಯಮವನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.

ರಾಷ್ಟ್ರೀಯ ಇ -ಕಾಮರ್ಸ್(E Eommerce) ನೀತಿಯ ಕರಡುವಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು. ಕರಡು ಸಿದ್ಧಪಡಿಸುವ ಬಗ್ಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯ ಹಿರಿಯ ಅಧಿಕಾರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕರಡು ಸಿದ್ಧಪಡಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

Corona vaccine ಎರಡೂ ಡೋಸ್ ಪಡೆದ ನಂತರವೂ ಕರೋನಾ ಪಾಸಿಟಿವ್ ಆದ ವೈದ್ಯೆ

ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಗ್ರಾಹಕರು(Customer) ಪಡೆಯಬೇಕಿದೆ. ಸಂಬಂಧಿತ ಉತ್ಪನ್ನ ಮೂಲದ ಬಗ್ಗೆ, ದೇಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಭಾರತದಲ್ಲಿ ಅದಕ್ಕೆ ಸೇರ್ಪಡೆಯಾದ ಬೆಲೆ ಮೊದಲಾದವುಗಳ ಬಗ್ಗೆ ಇ -ಕಾಮರ್ಸ್ ಕಂಪನಿಗಳು ತಮ್ಮ ವೇದಿಕೆಯಲ್ಲಿ ನೋಂದಾಯಿಸಲಾದ ಮಾರಾಟಗಾರರ ಬಗ್ಗೆ ತಿಳಿಸಿ ಗ್ರಾಹಕರನ್ನೂ ಪರಿಗಣಿಸಬೇಕು.

ಅಂಬಾನಿ ನಿವಾಸ ಎದುರು ಸ್ಫೋಟಕ ಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು, ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅರೆಸ್ಟ್.!

ಇ-ಕಾಮರ್ಸ್ ಕಂಪನಿಗಳು ತಮ್ಮ ವೇದಿಕೆಯಲ್ಲಿ ಮಾರಾಟವಾಗುವ ಉತ್ಪನ್ನ ನಕಲಿಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸುರಕ್ಷಿತ ಸಿಬ್ಬಂದಿ ಇದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಕರಡಿನಲ್ಲಿ ತಿಳಿಸಲಾಗಿದೆ. ಯಾವುದೇ ಇ -ಕಾಮರ್ಸ್ ಕಂಪನಿ ಫ್ಲಾಟ್ ಫಾರಂನಿಂದ ನಕಲಿ ಉತ್ಪನ್ನ ಮಾರಾಟ ಮಾಡಿದರೆ ಅದು ಆನ್ಲೈನ್ ಕಂಪನಿ ಮತ್ತು ಮಾರಾಟಗಾರರ ಜವಾಬ್ದಾರಿಯಾಗಿರುತ್ತದೆ. ಆನ್ಲೈನ್ ಶಾಪಿಂಗ್(online Shopping) ಫ್ಲಾಟ್ ಫಾರ್ಮ್ ನಿಂದ ನಕಲಿ ಉತ್ಪನ್ನ ಮಾರಾಟ ಮಾಡುವ ದೂರುಗಳು ಹೆಚ್ಚಾಗಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅನೇಕ ಗ್ರಾಹಕರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ.

ನಾನ್ ವೆಜ್ ಪಿಜ್ಜಾ ಸ್ವೀಕರಿಸಿದ್ದಕ್ಕೆ ₹1 ಕೋಟಿ ರೂ ಪರಿಹಾರ ಕೇಳಿದ ಮಹಿಳೆ...!

ಹಾಗಾಗಿ ಇ-ಕಾಮರ್ಸ್ ನಲ್ಲಿರುವ ನ್ಯೂನ್ಯತೆ ಸರಿಪಡಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇ -ಮಾರುಕಟ್ಟೆಗಳು ಜನರ ಜೀವನಶೈಲಿಯನ್ನು ಸುಲಭಗೊಳಿಸುತ್ತವೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News