Happy Birthday Puneeth Rajkumar: ಯುವರತ್ನನ Feel The Power ಸಾಂಗ್ ಔಟ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 46 ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ  ಅಭಿಮಾನಿಗಳು ಹಾಗೂ ಸಹ ನಟರಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

Last Updated : Mar 17, 2021, 03:55 PM IST
  • ಪುನೀತ್ ಅವರು ಫ್ಯಾಮಿಲಿ ಪ್ಯಾಕ್ ಎನ್ನುವ ಚಿತ್ರವನ್ನು ಕೂಡ ನಿರ್ಮಿಸುತ್ತಿದ್ದಾರೆ.ಈ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಪ್ರಮುಖ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 2021 ಪುನೀತ್ ರಾಜಕುಮಾರ್ ಅವರಿಗೆ ಬ್ಯುಸಿ ವರ್ಷವೆಂದೇ ಹೇಳಬಹುದು.
Happy Birthday Puneeth Rajkumar: ಯುವರತ್ನನ Feel The Power ಸಾಂಗ್ ಔಟ್ title=
Photo Courtesy: Twitter

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 46 ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ  ಅಭಿಮಾನಿಗಳು ಹಾಗೂ ಸಹ ನಟರಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

ಇದನ್ನೂ ಓದಿ: WATCH:'ಊರಿಗೊಬ್ಬ ರಾಜಾ' ಎನ್ನುತಾ ಬಂದ ಯುವರತ್ನ...!

ಕಿಚ್ಚ ಸುದೀಪ್, ದರ್ಶನ್, ರಕ್ಷಿತ ಶೆಟ್ಟಿ, ಗಣೇಶ್, ರಿಷಬ್ ಶೆಟ್ಟಿ ಮತ್ತು ಇತರರು ಸೇರಿದಂತೆ ಅನೇಕ ಗಣ್ಯರು ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈಗ #HBDPuneethRajkumar ಎಂಬ ಹ್ಯಾಶ್‌ಟ್ಯಾಗ್ ಬೆಳಿಗ್ಗೆಯಿಂದ ಟ್ರೆಂಡಿಂಗ್ ಆಗುತ್ತಿದೆ.

ಇದನ್ನೂ ಓದಿ: ಯುಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ ಯುವರತ್ನನ 'ಪವರ್ ಆಫ್ ಯೂತ್' ಸಾಂಗ್..!

ಏತನ್ಮಧ್ಯೆ, ವಿಶೇಷ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಯುವರತ್ನ ಚಿತ್ರದ 'ಫೀಲ್ ದಿ ಪವರ್' ಪ್ರೊಮೊ ಸಾಂಗ್ ನ್ನು ಯುಟೂಬ್ ನಲ್ಲಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ.ಈ ಸಾಂಗ್ ಯುಟ್ಯೂಬ್ ನಲ್ಲಿ ಬಿಡುಗಡೆಯಾದ ಆರು ಗಂಟೆಯಲ್ಲಿ ೫ ಲಕ್ಷ ವಿಕ್ಷಣೆಯನ್ನು ಗಳಿಸುವ ಮೂಲಕ ಟ್ರೆಂಡಿಂಗ್ ನಲ್ಲಿದೆ. ಇದೇ ವೇಳೆ ತಮ್ಮ ಮುಂಬರುವ ಚಿತ್ರ ಜೇಮ್ಸ್ ನ ಪೋಸ್ಟರ್ ನ್ನು ಕೂಡ ಪುನೀತ್ ರಾಜಕುಮಾರ್ ಅವರು ಅನಾವರಣಗೊಳಿಸಿದ್ದಾರೆ.ಈ ಚಿತ್ರದಲ್ಲಿ ರಾಜಕುಮಾರದ ನಾಯಕಿ ಪ್ರಿಯಾ ಆನಂದ್ ಮತ್ತೊಮ್ಮೆ ಪುನೀತ್ ರಾಜಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕೊನೆಗೂ ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಬಿಡುಗಡೆ ದಿನಾಂಕ ಫಿಕ್ಸ್....!

ಜೊತೆಗೆ ಪುನೀತ್ ಅವರು ಫ್ಯಾಮಿಲಿ ಪ್ಯಾಕ್ ಎನ್ನುವ ಚಿತ್ರವನ್ನು ಕೂಡ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಪ್ರಮುಖ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 2021 ಪುನೀತ್ ರಾಜಕುಮಾರ್ ಅವರಿಗೆ ಬ್ಯುಸಿ ವರ್ಷವೆಂದೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News