ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಡಿಯಲ್ಲಿರುವ ಯುವತಿ ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ವಿಡಿಯೋ(Video)ದಲ್ಲಿ ಯುವತಿ ಮೊದಲು ತನ್ನ ತಂದೆ-ತಾಯಿಗಳಿಗೆ ರಕ್ಷಣೆ ನೀಡಿ. ಅವರಿಗೆ ರಕ್ಷಣೆ ನೀಡಿದ್ದು ಖಚಿತವಾದರೆ ನಾನು ಬಂದು ಎಸ್ಐಟಿ ಮುಂದೆ ನನ್ನ ಹೇಳಿಕೆ ನೀಡುತ್ತೇನೆ ಎಂದು ಹೇಳಿದ್ದಾಳೆ.
COVID -19 ನಿಯಮಗಳನ್ನು ಮೀರಿದರೆ ಬೀಳಲಿದೆ ಭಾರೀ ದಂಡ ..!
'ಅಲ್ಲದೇ ಮಾರ್ಚ್ 12ರಂದು ನಾನು ಕಮೀಷನರ್ ಆಫೀಸಿಗೆ ಒಂದು ವಿಡಿಯೋ ಮಾಡಿ ಕಳುಹಿಸಿದ್ದೆ. ಆದರೆ ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ(Ramesh Jarkiholi) ದೂರು ದಾಖಲಿಸಿದ್ದು, ದೂರು ದಾಖಲಾದ ಅರ್ಧಗಂಟೆಯಲ್ಲೇ ನನ್ನ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದರಿಂದ ಏನಾಗುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಎಸ್ಐಟಿ ಅವರು ಯಾರ ಪರ ಕೆಲಸ ಮಾಡುತ್ತಿದ್ದರೆ ಎಂಬುದೇ ನನಗೆ ತಿಳಿಯುತ್ತಿಲ್ಲ' ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.
"ಸಚಿವ ಡಾ.ಸುಧಾಕರ್ ಉದ್ದಟತನದ ಹೇಳಿಕೆಯಿಂದ 225 ಶಾಸಕರ ಮಾನಹಾನಿ"
ನನ್ನ ತಂದೆ - ತಾಯಿ ಮಗಳು ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದ್ದಾರೆ. ದೂರಿನ ಬಳಿಕ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ ನನ್ನ ತಂದೆ-ತಾಯಿ ಸ್ವ ಇಚ್ಛೆಯಿಂದ ದೂರು ನೀಡಿಲ್ಲ. ಅವರಿಗೆ ಗೊತ್ತು ನಾನು ಏನೂ ತಪ್ಪು ಮಾಡಿಲ್ಲ ಎಂದು ಅಂದ ಮೇಲೆ ಅವರು ಹೆದರುವ, ದೂರು ನೀಡುವ ಅಗತ್ಯವಿಲ್ಲ. ಹಾಗಾಗಿ ನಾನು ಮಹಿಳಾ ಸಂಘಟನೆಗಳು, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್(DK Shivakumar), ರಮೇಶ್ ಕುಮಾರ್ ಹಾಗೂ ಎಲ್ಲರಲ್ಲಿ ಕೇಳಿಕೊಳ್ಳುವುದು ಇಷ್ಟೇ. ಮೊದಲು ನನ್ನ ಅಪ್ಪ-ಅಮ್ಮನಿಗೆ ರಕ್ಷಣೆ ನೀಡಿ. ಅವರಿಗೆ ರಕ್ಷಣೆ ನೀಡಿದ್ದು ಖಚಿತವಾದರೆ ನಾನು ಬಂದು ಎಸ್ಐಟಿ ಮುಂದೆ ಹೇಳಿಕೆ ದಾಖಲಿಸುತ್ತೇನೆ ಎಂದು ತಿಳಿಸಿದ್ದಾಳೆ.
K Sudhakar: ರಾಜ್ಯದಲ್ಲಿ ಮತ್ತೆ 'ಲಾಕ್ಡೌನ್ ಎಚ್ಚರಿಕೆ' ನೀಡಿದ ಆರೋಗ್ಯ ಸಚಿವ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.ಡಿ.