Bank Holiday : ಬ್ಯಾಂಕ್ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳಿ: ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ! 

ಆರ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 5 ದಿನಗಳವರೆಗೆ ಬ್ಯಾಂಕ್ ರಜೆ

Last Updated : Apr 25, 2021, 12:53 PM IST
  • ಕರೋನಾ ವೈರಸ್‌ನಿಂದಾಗಿ ಬ್ಯಾಂಕುಗಳಲ್ಲಿ ಜನ ಸಂಚಾರ ಸ್ವಲ್ಪ ಕಡಿಮೆ
  • ಮೇ ತಿಂಗಳಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕ್ ರಜೆ
  • ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಗಳಿಗೆ ವಿಭಿನ್ನ ನಿಯಮಗಳು

Trending Photos

Bank Holiday : ಬ್ಯಾಂಕ್ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳಿ: ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ!  title=

ನವದೆಹಲಿ: ಕರೋನಾ ವೈರಸ್‌ನಿಂದಾಗಿ ಬ್ಯಾಂಕುಗಳಲ್ಲಿ ಜನ ಸಂಚಾರ ಸ್ವಲ್ಪ ಕಡಿಮೆಯಾಗಿದೆ. ಇನ್ನೂ, ನೀವು ಬ್ಯಾಂಕ್ ನ ತುರ್ತು ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕೆಂದರೆ ಮೇ ತಿಂಗಳಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕ್ ರಜೆ ಇದೆ. ಮೇ 1 ರಂದು ಮಹಾರಾಷ್ಟ್ರ ದಿನ ಮತ್ತು ಇದೆ ದಿನ ಕಾರ್ಮಿಕ ದಿನ ಆಚರಿಸಲಾಗುತ್ತದೆ. ಈ ದಿನ ಕೆಲವು ರಾಜ್ಯಗಳ ಬ್ಯಾಂಕುಗಳು ರಜೆ ಇರುತ್ತವೆ. ಮೇ 2 ಭಾನುವಾರದ ಕಾರಣ ಬ್ಯಾಂಕುಗಳು ರಜೆ ಇರುತ್ತದೆ.

ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಗಳಿಗೆ ವಿಭಿನ್ನ ನಿಯಮಗಳು:

ಆರ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 5 ದಿನಗಳವರೆಗೆ ಬ್ಯಾಂಕ್ ರಜೆಗಳಿವೆ(May Month Bank Holiday). ಆರ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯಲ್ಲಿ, ಕೆಲವು ರಜಾದಿನಗಳು ರಾಜ್ಯ ಸ್ಥಳೀಯ ಸಂದರ್ಭಳಿಗೆ ಅನುಗುಣವಾಗಿ ಬ್ಯಾಂಕ್ ಗಳಿಗೆ ರಜೆ ನೀಡಲಾಗುತ್ತದೆ. 

ಇದನ್ನೂ ಓದಿ : Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ

ಈ ದಿನ ಬ್ಯಾಂಕ್ ಯಾವುದೇ ಕೆಲಸ ಇರುವುದಿಲ್ಲ:

ಬ್ಯಾಂಕ್ ಹಾಲಿಡೇ ಹೊರತುಪಡಿಸಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ(4th Saturday)ಗಳು ಮೇ 8 ಮತ್ತು 22 ರ ಈ ದಿನ ಬ್ಯಾಂಕುಗಳಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಇದಲ್ಲದೆ, ಮೇ 2, 9, 16, 23 ಮತ್ತು 30 ರಂದು ಭಾನುವಾರ ರಜಾದಿನಗಳಿವೆ.

ಇದನ್ನೂ ಓದಿ : Post Office Saving Schemes: ನಿಯಮಿತ ಆದಾಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಅಲ್ಪಾವಧಿಯಲ್ಲಿಯೇ ದ್ವಿಗುಣಗೊಳ್ಳುತ್ತೆ ಹಣ

ಬ್ಯಾಂಕುಗಳು ಕೇವಲ 4 ಗಂಟೆಗಳ ಕಾಲ ಮಾತ್ರ ಓಪನ್:

ದೇಶದಲ್ಲಿ ಕರೋನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳ ಸಂಘಟನೆ(Bank Union)ಯಾದ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಬ್ಯಾಂಕ್ ತೆರೆಯಲು ಸೂಚಿಸಿದೆ. ಆದ್ದರಿಂದ  ಸಾರ್ವಜನಿಕರ ಕೆಲಸಕ್ಕಾಗಿ ಬ್ಯಾಂಕುಗಳು ಕೇವಲ 4 ಗಂಟೆಗಳ ಕಾಲ ಮಾತ್ರ ತೆರೆಯುತ್ತವೆ. ಈ ನಿಟ್ಟಿನಲ್ಲಿ, ಐಬಿಎ ಎಲ್ಲಾ ರಾಜ್ಯದ ಬ್ಯಾಂಕಿಂಗ್ ಸಮಿತಿಗಳಿಗೆ ಮಾರ್ಗಸೂಚಿಗಳನ್ನು ಅನುಸರಿಸಲು ಹೇಳಿದೆ. ಕರೋನಾದ ಪರಿಸ್ಥಿತಿ ಹಿಡಿತಕ್ಕೆ ಬರುವವರೆಗೆ ಈ ವ್ಯವಸ್ಥೆಯು ಜಾರಿಯಲ್ಲಿರುತ್ತದೆ.

ಇದನ್ನೂ ಓದಿ : SBI Account Opening Through Video KYC - SBI ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಇನ್ಮುಂದೆ ಈ ಕೆಲಸಕ್ಕಾಗಿ ನೀವು ಬ್ಯಾಂಕ್ ಗೆ ಹೋಗಬೇಕಾಗಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News