ಲವಂಗವನ್ನು ನಮ್ಮ ದಿನ ನಿತ್ಯದ ಆಹಾರದಲ್ಲಿ ಶತಮಾನಗಳಿಂದ ಬಳಸಲಾಗುತ್ತದೆ. ಲವಂಗವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಇದು ಅನೇಕ ಔಷಧಿ ಗುಣಗಳನ್ನು ಸಹ ಹೊಂದಿದೆ, ಅಲ್ಲದೆ, ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇಂದು ನಾವು ಪುರುಷರು ಪ್ರತಿದಿನ 2 ಲವಂಗವನ್ನು ಸೇವಿಸಿದರೆ, ಅದರ ಪ್ರಯೋಜನಗಳು ಬಗ್ಗೆ ತಿಳಿಸಲಿದ್ದೇವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ :
ಪ್ರತಿ ದಿನ ಎರಡು ಲವಂಗವನ್ನು ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ(Immunity) ಬಲವಾಗುತ್ತದೆ. ಲವಂಗವು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವಿಶೇಷವಾಗಿ ಕರೋನಾ ಸಮಯದಲ್ಲಿ ಲವಂಗ ಸೇವನೆಯು ನಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಇದನ್ನೂ ಓದಿ : ಪ್ರತಿನಿತ್ಯ ಈ ರೀತಿ ಸೇವಿಸಿದರೆ ಅರಿಶಿನ ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್
ಮೂಳೆಗಳ ಬಲಿಷ್ಠತೆಗೆ ಪ್ರಯೋಜನಕಾರಿ ಲವಂಗ :
ಲವಂಗದಲ್ಲಿ ಫ್ಲೇವನಾಯ್ಡ್ಗಳು, ಮ್ಯಾಂಗನೀಸ್ ಮತ್ತು ಯುಜೆನಾಲ್ ಮುಂತಾದ ಅಂಶಗಳಿವೆ. ಇವು ಮೂಳೆಗಳ(Bones) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಲ್ಲದೆ, ಮ್ಯಾಂಗನೀಸ್ ಕೂಡ ನಮ್ಮ ಮೆದುಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಲವಂಗಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಸಹ ಕಂಡುಬರುತ್ತವೆ, ಇದು ಸೋಂಕಿನ ವಿರುದ್ಧ ಹೋರಾಡಲು ತುಂಬಾ ಸಹಾಯ ಮಾಡುತ್ತದೆ.
ಇದನ್ನೂ ಓದಿ : Is Hoarse Voice Corona Symptom?: ಗಂಟಲು ಹಿಡಿಯುವುದು ಕೂಡ ಕೊರೊನಾ ಲಕ್ಷಣವೇ? ನಿರ್ಲಕ್ಷಿಸಬೇಡಿ ತಕ್ಷಣ ಟೆಸ್ಟ್ ಮಾಡಿಸಿ
ಕ್ಯಾನ್ಸರ್ ವಿರುದ್ಧ ಹೋರಾಡಲು ಲವಂಗ :
ಲವಂಗವು ಕ್ಯಾನ್ಸರ್ ನಿಂದ ರಕ್ಷಿಸಲು ತುಂಬಾ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಕ್ಯಾನ್ಸರ್(Cancer) ಕೋಶಗಳ ರಚನೆಯನ್ನು ತಡೆಯುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಇದು ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
ಇದನ್ನೂ ಓದಿ : ಆಕ್ಸಿಮೀಟರ್ ಖರೀದಿಸುವ ಮುನ್ನ ಈ 8 ವಿಚಾರಗಳನ್ನು ತಿಳಿದುಕೊಳ್ಳಿ
ಜೀರ್ಣಕ್ರಿಯೆಯ ಸಾಮರ್ಥ್ಯ ಸುಧಾರಿಸುತ್ತದೆ :
ಲವಂಗ ಸೇವನೆಯು ನಮ್ಮ ದೇಹದಲ್ಲಿನ ಜೀರ್ಣಕಾರಿ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಮ್ಮ ಜೀರ್ಣಾಂಗ(Digestion) ವ್ಯವಸ್ಥೆಯು ಉತ್ತಮವಾಗುತ್ತದೆ. ಲವಂಗವನ್ನು ಬಳಸುವುದರಿಂದ ನಮ್ಮ ಹೊಟ್ಟೆಯ ಹುಣ್ಣುಗಳನ್ನೂ ಗುಣಪಡಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಲವಂಗ ಬಳಕೆಯಿಂದ ಹೊಟ್ಟೆಯಲ್ಲಿ ಅನಿಲ, ಅಜೀರ್ಣ ಇತ್ಯಾದಿಗಳ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಇದನ್ನೂ ಓದಿ : Ayurvedic Medicine To Cure Corona: Corona ಸೋಂಕಿನ ಸಾಮಾನ್ಯ-ಮಧ್ಯಮ ಲಕ್ಷಣಗಳಿಗೆ ಪರಿಣಾಮಕಾರಿ ಈ ಆಯುರ್ವೇದ ಔಷಧಿ!
ಹಲ್ಲುಗಳ ಸಮಸ್ಯೆಗೆ ತುಂಬಾ ಸಹಾಯಕಾರಿ ಲವಂಗ :
ಲವಂಗವನ್ನು ಸೇವಿಸುವುದರಿಂದ ಹಲ್ಲುನೋವು ಸಮಸ್ಯೆ ನಿವಾರಣೆಯಾಗುತ್ತದೆ. ನೀವು ದಂತವೈದ್ಯರ ಬಳಿಗೆ ಹೋಗುವವರೆಗೂ, ಎರಡು ಲವಂಗ(Cloves )ವನ್ನು ನಿಮ್ಮ ಹಲ್ಲುಗಳ ಕೆಳಗೆ ಒತ್ತುವುದರಿಂದ ನೋವಿನಿಂದ ಸಾಕಷ್ಟು ಪರಿಹಾರ ಸಿಗುತ್ತದೆ.
ಇದನ್ನೂ ಓದಿ : Coronavirus: Covishield ಬಳಿಕ ಇದೀಗ Covaxin ದರದಲ್ಲಿಯೂ ಇಳಿಕೆಯ ಘೋಷಣೆ ಮಾಡಿದ ಭಾರತ್ ಬಯೋಟೆಕ್
ಯಕೃತ್ತಿಗೆ ಪ್ರಯೋಜನಕಾರಿ ಲವಂಗ :
ಈಜಿಪ್ಟ್‌ನ ಕೈರೋ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ, ಲವಂಗವನ್ನು ಬಳಸುವುದರಿಂದ ನಮ್ಮ ದೇಹದಲ್ಲಿನ ಸೋಂಕು ಮತ್ತು ನೋವ(Pain)ನ್ನು ಗುಣಪಡಿಸುತ್ತದೆ. ಅಲ್ಲದೆ, ಲವಂಗವನ್ನು ಸೇವಿಸುವುದು ಯಕೃತ್ತಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಲವಂಗಗಳಲ್ಲಿ ಆಂಟಿ-ಆಕ್ಸಿಡೆಂಟ್ ಸಹ ಕಂಡುಬರುತ್ತವೆ, ಇದು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ.
ಇದನ್ನೂ ಓದಿ : Coconut Water Benefits In Covid Era: ಕರೋನಾ ಯುಗದಲ್ಲಿ ಎಳನೀರಿನ ಪ್ರಯೋಜನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.