PM Kisan: 8ನೇ ಕಂತು ಜಾರಿಗೊಳಿಸಿದ PM Modi, 9.5 ಕೋಟಿ ರೈತರ ಖಾತೆಗೆ 19 ಸಾವಿರ ಕೋಟಿ ವರ್ಗಾವಣೆ

PM Kisan Samman Nidhi 8th Installment: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಧಾಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8ನೇ ಕಂತನ್ನು ಜಾರಿಗೊಳಿಸಿದ್ದಾರೆ.  

Written by - Nitin Tabib | Last Updated : May 14, 2021, 03:12 PM IST
  • PM ಕಿಸಾನ್ ಸಮ್ಮಾನ್ ನಿಧಿಯ 8ನೇ ಕಂತು ಜಾರಿಗೊಳಿಸಿದ ಪ್ರಧಾನಿ ಮೋದಿ.
  • ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದ ಮೂಲಕ ಘೋಷಣೆ.
  • ಇಂದಿನಿಂದ ರೈತರ ಖಾತೆಗೆ 8ನೇ ಕಂತಿನ ರೂ.2000 ವರ್ಗಾವಣೆ.
PM Kisan: 8ನೇ ಕಂತು ಜಾರಿಗೊಳಿಸಿದ PM Modi, 9.5 ಕೋಟಿ ರೈತರ ಖಾತೆಗೆ 19 ಸಾವಿರ ಕೋಟಿ ವರ್ಗಾವಣೆ  title=
PM Kisan Samman Nidhi 8th Installment (Photo Courtesy: ANI)

ನವದೆಹಲಿ: PM Kisan Samman Nidhi 8th Installment - ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ರೈತರಿಗೆ ಎಂಟನೇ ಕಂತಿನ ಆರ್ಥಿಕ ಪ್ರಯೋಜನಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ 8 ನೇ ಕಂತಿನ ಆರ್ಥಿಕ ಪ್ರಯೋಜನಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ದೇಶದ 9.5 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 19 ಸಾವಿರ ಕೋಟಿ ರೂ. ವರ್ಗಾವಣೆಯಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೆಲ ಲಾಭಾರ್ಥಿ ರೈತರ ಜೊತೆಗೆ ಸಂವಾದ ಕೂಡ ನಡೆಸಿದ್ದಾರೆ.

ಪ್ರತಿ ರೈತರ ಖಾತೆಗೆ ರೂ.2000 ವರ್ಗಾವಣೆ
ಪಿಎಂ ಕಿಸಾನ್ ಯೋಜನೆಯ 8 ನೇ ಕಂತು (PM Kisan 8th Installment) ಬಿಡುಗಡೆಯಾದ ಹಿನ್ನೆಲೆ ಇಂದಿನಿಂದ ಎಲ್ಲಾ ಫಲಾನುಭವಿ ರೈತರ ಖಾತೆಗಳಲ್ಲಿ 2000 ರೂ. ವರ್ಗಾವಣೆಯಾಗಲು ಆರಂಭಗೊಂಡಿದೆ. ಈಗಾಗಲೇ ಎಲ್ಲಾ ರೈತರಿಗೆ 2000 ರೂಪಾಯಿಗಳ 7 ಕಂತುಗಳು ಲಭಿಸಿದೆ. ಇಂದು ಈ ಯೋಜನೆಯ 8 ನೇ ಕಂತು ಬಿಡುಗಡೆಯಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ (Video Conferencing) ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು 8ನೇ ಕಂತಿನ ಬಿಡುಗಡೆಯ ಕುರಿತು ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ರೈತರ ಮಹತ್ವದ ಕೊಡುಗೆಗಾಗಿ ಧನ್ಯವಾದಗಳನ್ನು ಕೂಡ ಹೇಳಿದ್ದಾರೆ.

ಈ ರೀತಿ ಪರಿಶೀಲಿಸಿ
1. ಮೊದಲು ನೀವು PM Kisan ಯೋಜನೆಯ ಅಧಿಕೃತ ವೆಬ್ ಸೈಟ್ ಆಗಿರುವ https://pmkisan.gov.in ಗೆ ಭೇಟಿ ನೀಡಬೇಕು.
2. ಈ ವೆಬ್ ಸೈಟ್ ನ ಹೋಮ್ ಪೇಜ್ ನಲ್ಲಿರುವ Farmers Corner ಆಯ್ಕೆಯ ಮೇಲೆ ಕ್ಲಿಕ್ಕಿಸಿ.
3. ಈ ಸೆಕ್ಷನ್ ಒಳಗಡೆ Beneficiaries List ಆಯ್ಕೆಯ ಮೇಲೆ ಕ್ಲಿಕ್ಕಿಸಿ.
4. Beneficiaries List ಕ್ಲಿಕ್ಕಿಸಿದ ಬಳಿಕ ನೀವು ಡ್ರಾಪ್ ಡೌನ್ ಲಿಸ್ಟ್ ನಿಂದ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ , ಬ್ಲಾಕ್ ಹಾಗೂ ಗ್ರಾಮದ ಆಯ್ಕೆ ಮಾಡಬೇಕು.
5. ನಂತರ Get Report  ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ಮುಂದೆ ಲಾಭಾರ್ಥಿಗಳ ಸಂಪೂರ್ಣ ಪಟ್ಟಿ ತೆರೆದುಕೊಳ್ಳಲಿದೆ. ಇದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಇದನ್ನೂ ಓದಿ -Sputnik V Price In India: ರಷ್ಯಾ ಕೊರೊನಾ ಲಸಿಕೆ Sputnik V ಬೆಲೆ ಘೋಷಣೆ

ಈ ರೀತಿ ನಿಮ್ಮ ಕಂತಿನ ಸ್ಟೇಟಸ್ ಪರಿಶೀಲಿಸಿ  (Check your installment status)
ವೆಬ್ ಸೈಟ್ ನ ಫಾರ್ಮರ್ಸ್ ಕಾರ್ನರ್ ಗೆ ನೀವು ಭೇಟಿ ನೀಡಿದ ಬಳಿಕ. ಅಲ್ಲಿರುವ Farmers Status ಆಯ್ಕೆಯನ್ನು ಕ್ಲಿಕ್ಕಿಸಿ. ಈಗ ನಿಮ್ಮ ಮುಂದೆ ಹೊಸಪುಟವೊಂದು ತೆರೆದುಕೊಳ್ಳಲಿದೆ. ಬಳಿಕ ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಅಧಿಕೃತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮಗೆ ನಿಮ್ಮ ಸ್ಟೇಟಸ್ ಕುರಿತು ಸಂಪೂರ್ಣ ಮಾಹಿತಿ ಸಿಗಲಿದೆ. ಈ ಯೋಜನೆಗೆ ನೀವು ನಿಮ್ಮ ಮನೆಯಿಂದಲೇ ಹೆಸರನ್ನು ನೊಂದಾಯಿಸಬಹುದು. ಇದಕ್ಕಾಗಿ ನಿಮ್ಮ ಬಳಿ ಉಳಿಮೆಯ ಭೂಮಿ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಹೊಂದಿರಬೇಕು. ನಿಮ್ಮ ಹೆಸರನ್ನು ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಅಧಿಕೃತ ವೆಬ್ ಸೈಟ್ ಆಗಿರುವ pmkisan.nic.in ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ-Driving License ಸಂಬಂಧಿಸಿದ ಸಿಹಿ ಸುದ್ದಿ! ಮನೆಯಲ್ಲಿ ಕುಳಿತು ಮಾಡಿ DL, RC ಕೆಲಸ: ಇಲ್ಲಿವೆ ಹೊಸ

ಅವಿಭಕ್ತ ರೈತ ಕುಟುಂಬಕ್ಕೆ ಬದಲಾದ ನಿಯಮಗಳು (Changes for joint family farmers)
ಇದಲ್ಲದೆ ಸರ್ಕಾರ ಈ ಯೋಜನೆಯ ಅಡಿ ಅವಿಭಕ್ತ ಕುಟುಂಬದ ನಿಯಮಗಳಲ್ಲಿಯೂ ಸಹ ಬದಲಾವಣೆ ಮಾಡುವ ನಿರ್ಧಾರ ಕೈಗೊಂಡಿದೆ. ಇದುವರೆ ಈ ಯೋಜನೆಯ ಅಡಿ ಅಭಿಕ್ತ ಕುಟುಂಬದ ರೈತರಿಗೂ ಸಹ ಈ ಯೋಜನೆಯ ಲಾಭ ಸಿಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಇದೀಗ ಅಭಿಭಕ್ತ ಕುಟುಂಬಕ್ಕಾಗಿ ಇದ್ದ ಅರ್ಹತೆಗಳು ಹಾಗೂ ಷರತ್ತುಗಳಲ್ಲಿ ಬದಲಾವಣೆ ತಂದಿದೆ.

ಇದನ್ನೂ ಓದಿ-EPF : ನಿಮ್ಮ UAN ಮರೆತಿದ್ದರೆ ಕಂಡುಹಿಡಿಯಲು ಹೀಗೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News