ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಮತ್ತು ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿ(104) ಅವರು ಬೆಂಗಳೂರಿನಲ್ಲಿ ಇಂದು ನಿಧನರಾದರು. ಅವರು ಮೇ 12 ರಂದು COVID-19 ನಿಂದ ಚೇತರಿಸಿಕೊಂಡಿದ್ದರು, ಆದರೆ ಮತ್ತೆ ಅನಾರೋಗ್ಯದ ಹಿನ್ನಲೆಯಲ್ಲಿ ನಗರದ ಜಯದೇವ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿ ಅವರು ಹೃದಯಾಘಾತದಿಂದ ಇಂದು ಸುಮಾರು ಮಧ್ಯಾಹ್ನ 1.30ಕ್ಕೆ ಕೊನೆಯುಸಿರೆಳೆದಿದ್ದಾರೆ.
ಕಳೆದ 10 ವರ್ಷಗಳಿಂದ ಅವರಿಗೆ ವಾಲ್ವಾಲರ್ ಹೃದಯ ಕಾಯಿಲೆ ಇತ್ತು, ಹೀಗಾಗಿ ಅವರನ್ನು ಜಯದೇವ ಆಸ್ಪತ್ರೆಗೆ ಹಲವು ಬಾರಿ ದಾಖಲಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.ಈ ತಿಂಗಳ ಆರಂಭದಲ್ಲಿ ಅವರು ಕೊರೊನಾ ಸೋಂಕು ತಗಲಿತ್ತು ಅದರಿಂದ ಅವರು ಗುಣಮುಖರಾಗಿದ್ದರು. ತದನಂತರ ಅವರನ್ನು ಮೇ 14 ರಂದು ಪುನಃ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಇದನ್ನೂ ಓದಿ: Murugesh Nirani : 'ರಾಜ್ಯದಲ್ಲಿ ಹದಿನೈದು ದಿನದೊಳಗಾಗಿ ಹೊಸ ಮರಳು ನೀತಿ ಜಾರಿ'
ಏಪ್ರಿಲ್ 10, 1918 ರಂದು, ಹಿಂದಿನ ಮೈಸೂರು ಸಾಮ್ರಾಜ್ಯದ ಹಾರೊಹಳ್ಳಿ ಎಂಬ ಹಳ್ಳಿಯಲ್ಲಿ ಜನಿಸಿದ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರನ್ನು ಅವರ ಅಜ್ಜ ಬೆಳೆಸಿದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿಕೊಂಡರು.ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಮೈಸೂರು ರಾಜ್ಯದಲ್ಲಿನ ಪ್ರತಿಭಟನೆಗಳು ಮತ್ತು ಸಾಮಾನ್ಯ ಮುಷ್ಕರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.ಅವರು 1943 ರಿಂದ 1944 ರವರೆಗೆ 14 ತಿಂಗಳು ಕಾಲ ಜೈಲಿನಲ್ಲಿದ್ದರು. ಸ್ವಾತಂತ್ರ್ಯದ ನಂತರ ಭಾರತೀಯ ರಾಜ್ಯಕ್ಕೆ ಸೇರಲು ಮೈಸೂರು ಮಹಾರಾಜರನ್ನು ಒತ್ತಾಯಿಸಲು ಮೈಸೂರು ಚಲೋ ಚಳವಳಿಯಲ್ಲಿ ಭಾಗವಹಿಸಿದ್ದರು.
ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಚ್.ಎಸ್.ದೊರೆಸ್ವಾಮಿಯವರ ನಿಧನಕ್ಕೆ ಮುಖ್ಯಮಂತ್ರಿ @BSYBJP ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಿಂದ ಇತ್ತೀಚಿನ ಜನಪರ ಹೋರಾಟಗಳವರೆಗೂ ಅವರದ್ದು ಹೋರಾಟಗಳ ಬಹುಮುಖಿ ವ್ಯಕ್ತಿತ್ವ. ಗಾಂಧೀವಾದಿಗಳಾಗಿ ನಮ್ಮ ನಡುವೆ ಮಹಾತ್ಮ ಗಾಂಧಿಯವರ ಕೊನೆಯ ಕೊಂಡಿಯಂತಿದ್ದರು. (1/2)
— CM of Karnataka (@CMofKarnataka) May 26, 2021
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬ್ಯಾಚುಲರ್ ಆಫ್ ಸೈನ್ಸ್ ಪಡೆದ ದೊರೆಸ್ವಾಮಿಯವರು ಫ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಮತ್ತು ನಂತರ 'ಪೌರವಾಣಿ' ಎಂಬ ಪತ್ರಿಕೆ ಹೊರತರುವ ಮೂಲಕ ಪತ್ರಿಕೋದ್ಯಮಕ್ಕೆ ಕೈ ಹಾಕಿದರು.ಭೂದಾನ್ ಚಳುವಳಿ ಮತ್ತು ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಧುಮುಕಿದರು. ತುರ್ತು ಪರಿಸ್ಥಿತಿ ವಿರುದ್ಧ ಕರೆ ನೀಡಿದ್ದ ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. 1980 ರ ದಶಕದಲ್ಲಿ ಅವರು ರೈತರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡಿದರು.
ಇದನ್ನೂ ಓದಿ: K Sudhakar : 'ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ'
ಇತ್ತೀಚಿನ ಹೋರಾಟಗಳನ್ನು ಗಣನೆಗೆ ತೆಗೆದುಕೊಂಡಾಗ ಅಣ್ಣಾ ಹಜಾರೆ ಕರೆ ನೀಡಿದ್ದ ಭ್ರಷ್ಟಾಚಾರ ವಿರುದ್ಧ ಹೋರಾಟವಾಗಲಿ, ಅಥವಾ ಪೌರತ್ವ ವಿರೋಧಿ ಹೋರಾಟಗಳಲ್ಲಿ ಅವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ತಮ್ಮ ಜೀವನದ ಕೊನೆಯ ದಿನಗಳವರೆಗೆ ಯಾವುದೇ ಸಾಮಾಜಿಕ ಆಂದೋಲನಗಳು ನಡೆಯಲಿ ಅದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು.
ಹಿಂದುಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಎಚ್.ಎಎಸ್ ದೊರೆಸ್ವಾಮಿ (HS Doreswamy) ಯವರು ಮಾತನಾಡುತ್ತಾ" ನನ್ನನ್ನು ಬಂಧಿಸಿದಾಗ ನನಗೆ 23 ವರ್ಷ. ಆಗ ನಾನು ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಹೊಸ ಕೆಲಸ ಪಡೆದಿದ್ದೆ. ನಾನು ಜೂನ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಆದರೆ ಆ ಹೊತ್ತಿಗೆ, ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾಯಿತು. ಮೈಸೂರು ರಾಜ್ಯದಾದ್ಯಂತದ ಗಿರಣಿಗಳಲ್ಲಿ 14 ದಿನಗಳ ಮುಷ್ಕರವನ್ನು ಆಯೋಜಿಸಲು ನಾನು ಸಹಾಯ ಮಾಡಿದ್ದೇನೆ. ಬ್ರಿಟಿಷ್ ಸರ್ಕಾರದ ದೈನಂದಿನ ಕಾರ್ಯಚಟುವಟಿಕೆಯನ್ನು ಅಡ್ಡಿಪಡಿಸುವುದು ನಮ್ಮ ಉದ್ದೇಶವಾಗಿತ್ತು. ಡಿಸೆಂಬರ್ ವೇಳೆಗೆ, ನನ್ನನ್ನು ಬಂಧಿಸಲಾಯಿತು, ಮತ್ತು ನಾನು ನನ್ನ ಕೆಲಸವನ್ನು ಸಹ ಕಳೆದುಕೊಂಡೆ ”ಎಂದು ಸಂದರ್ಶನದಲ್ಲಿ ತಿಳಿಸಿದ್ದರು.
ಇದನ್ನೂ ಓದಿ: Sadananda Gowda : ಬ್ಲಾಕ್ ಫಂಗಸ್ ಸೋಂಕಿಗೆ ರಾಜ್ಯಕ್ಕೆ 1,600 ಬಾಟಲಿ ಔಷಧಿ..!
ದೊರೆಸ್ವಾಮಿ ಅವರು ಜಲಮಂಡಳಿಗಳ ಅತಿಕ್ರಮಣ ಮತ್ತು ಬೆಂಗಳೂರಿನಲ್ಲಿ ಮತ್ತು ಹೊರಗಿನ ಬಡ ಪ್ರದೇಶಗಳ ಬಳಿ ಕಸವನ್ನು ಎಸೆಯುವುದರ ವಿರುದ್ಧ ಕೆಲಸ ಮಾಡುವ ಹಲವಾರು ಆಂದೋಲನಗಳು ಮತ್ತು ಸಮಿತಿಗಳಲ್ಲಿ ಅವರು ಭಾಗಿಯಾಗಿದ್ದರು. ಅಕ್ಟೋಬರ್ 2014 ರಲ್ಲಿ, ರಾಜ್ಯ ಸರ್ಕಾರವು ಭೂ ಕಬಳಿಕೆ ನಿಷೇಧ ಕಾಯ್ದೆ 2007 ಅನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಅತಿಕ್ರಮಣ ವಿರೋಧಿ ಪ್ರತಿಭಟನೆ ನಡೆಸಿದರು. ಕೊಡಗು ಜಿಲ್ಲೆಯ ಆದಿವಾಸಿಗಳನ್ನು ತಮ್ಮ ಬುಡಕಟ್ಟು ಜಮೀನುಗಳಿಂದ ಹೊರಹಾಕುವ ವಿರುದ್ಧ ಆಂದೋಲನಗಳಲ್ಲಿ ಭಾಗಿಯಾಗಿದ್ದರು. ಈಗ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.