HBD Rakshit Shetty: ಪಂಚ ಭಾಷೆಗಳಲ್ಲಿ ಬಿಡುಗಡೆಯಾದ 777 Charlie teaser

ನಟ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿನ ಬಹುಮುಖ ಪ್ರತಿಭೆ, ಅದು ಅವರ ನಟನೆಯಾಗಿರಬಹುದು ಅಥವಾ ನಿರ್ದೇಶನವಾಗಿರಬಹುದು ಅವರದ್ದು ಮಿಸ್ಟರ್ ಪರ್ಪೆಕ್ಟ್ ವರ್ಕ್ ಆಗಿರುತ್ತದೆ.ಅಷ್ಟರ ಮಟ್ಟಿಗೆ ಅವರು ಪ್ರತಿ ಕೆಲಸದಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುತ್ತಾರೆ.

Written by - Zee Kannada News Desk | Last Updated : Jun 6, 2021, 04:41 PM IST
  • ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿನ ಬಹುಮುಖ ಪ್ರತಿಭೆ, ಅದು ಅವರ ನಟನೆಯಾಗಿರಬಹುದು ಅಥವಾ ನಿರ್ದೇಶನವಾಗಿರಬಹುದು ಅವರದ್ದು ಮಿಸ್ಟರ್ ಪರ್ಪೆಕ್ಟ್ ವರ್ಕ್ ಆಗಿರುತ್ತದೆ.
  • ಪೃಥ್ವಿರಾಜ್, ನಾನಿ, ನಿವಿನ್ ಪೌಲಿ, ಅನ್ನಾ ಬೆನ್, ಪ್ರಕಾಶ್ ರಾಜ್ ಮತ್ತು ಕಾರ್ತಿಕ್ ಸುಬ್ಬರಾಜ್ ಇತರರು 777 ಚಾರ್ಲಿ ಟೀಸರ್ ನ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದಾರೆ.
HBD Rakshit Shetty: ಪಂಚ ಭಾಷೆಗಳಲ್ಲಿ ಬಿಡುಗಡೆಯಾದ 777 Charlie teaser  title=
Photo Courtesy: Twitter

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿನ ಬಹುಮುಖ ಪ್ರತಿಭೆ, ಅದು ಅವರ ನಟನೆಯಾಗಿರಬಹುದು ಅಥವಾ ನಿರ್ದೇಶನವಾಗಿರಬಹುದು ಅವರದ್ದು ಮಿಸ್ಟರ್ ಪರ್ಪೆಕ್ಟ್ ವರ್ಕ್ ಆಗಿರುತ್ತದೆ.ಅಷ್ಟರ ಮಟ್ಟಿಗೆ ಅವರು ಪ್ರತಿ ಕೆಲಸದಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುತ್ತಾರೆ.

ಇದನ್ನು ಓದಿ- ಗಣರಾಜ್ಯೋತ್ಸವದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸುವುದು ಅನುಮಾನ

ಈಗ ರಕ್ಷಿತ್ ಶೆಟ್ಟಿ (Rakshit Shetty) ತಮ್ಮ 38 ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮುಂಬರುವ ಬಹುನಿರೀಕ್ಷಿತ ಚಿತ್ರ 777 ಚಾರ್ಲಿಯ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಅನಾವರಣಗೊಳಿಸಿದ್ದಾರೆ. ಅವರು ಕನ್ನಡದ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದರೆ, ಪೃಥ್ವಿರಾಜ್, ನಾನಿ, ನಿವಿನ್ ಪೌಲಿ, ಅನ್ನಾ ಬೆನ್, ಪ್ರಕಾಶ್ ರಾಜ್ ಮತ್ತು ಕಾರ್ತಿಕ್ ಸುಬ್ಬರಾಜ್ ಇತರರು 777 ಚಾರ್ಲಿ ಟೀಸರ್ ನ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದಾರೆ.

ಕೆ ಕಿರಣ್‌ರಾಜ್ ನಿರ್ದೇಶನದ ಈ ಚಿತ್ರವು ದಾರಿತಪ್ಪಿದ ನಾಯಿಯ ಕಥೆಯನ್ನು ಅನುಸರಿಸುತ್ತದೆ. ಟೀಸರ್ ಹೃದಯಸ್ಪರ್ಶಿಯಾಗಿದ್ದು,  ನಿಮಗೆ ಹೊಸ ಬಗೆಯ ಅನುಭವನ್ನು ಕೊಡುತ್ತದೆ.ಈಗಾಗಲೇ ತಮ್ಮ ಗಟ್ಟಿಯಾದ ಚಿತ್ರಕತೆಗಳ ಮೂಲಕವೇ ಕನ್ನಡದಲ್ಲಿ ವಿಶಿಷ್ಟ ನಟ ನಿರ್ದೇಶಕರಾಗಿ ರೂಪುಗೊಂಡಿರುವ ರಕ್ಷಿತ್ ಶೆಟ್ಟಿ, ಈಗ ಮತ್ತೊಂದು ಪಾನ್ ಇಂಡಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ: ನವರಸನಾಯಕ ಜಗ್ಗೇಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ ಪರಿ..

ಈಗ ಚಿತ್ರದ ಟೀಸರ್ ಹಂಚಿಕೊಂಡು ಅವರು 'ನಮ್ಮ ಪ್ರೀತಿಯ ಶ್ರಮವನ್ನು ನೀವು ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News