ನವದೆಹಲಿ : ಪ್ರತಿಯೊಬ್ಬರೂ ಹೊಳೆಯುವ ಮೈಕಾಂತಿಯನ್ನ ಹೊಂದಲು ಬಯಸುತ್ತಾರೆ. ಬೇಸಿಗೆಯಲ್ಲಿ ಬಿಸಿಲ ಬೇಗೆ, ಬೆವರಿನಿಂದಾಗಿ ಇದು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಟ್ಯಾನಿಂಗ್, ಬೆವರುವುದು, ಬೆವರು ಗುಳ್ಳೆ ಇಂಥಹ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಬೇಸಿಗೆಯಲ್ಲಿ ಭರಪೂರವಾಗಿ ಸಿಗುವ ಹಣ್ಣು ಅಂದರೆ ಕಲ್ಲಂಗಡಿ. ಇದರಲ್ಲಿ ಶೇ 90 ರಷ್ಟು ನೀರು ಇರುತ್ತದೆ. ಹಾಗಾಗಿ ದೇಹವನ್ನು ಹೈಡ್ರೇಟ್ ಮಾಡಲು ಕಲ್ಲಂಗಡಿ ಹಣ್ಣನ್ನು (water melon) ತಿನ್ನಲು ಸಲಹೆ ನೀಡಲಾಗುತ್ತದೆ. ಈ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಮುಖದ ಸೌಂದರ್ಯ ವೃದ್ಧಿಗೂ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನ ಫೇಕ್ ಪ್ಯಾಕ್ (water melon face pack) ಅನ್ನು ಬಳಸಿದರೆ, ಹೊಳೆಯುವ ತ್ವಚೆಯನ್ನು ಪಡೆಯಬಹುದು.
ಹಾಗಿದ್ದರೆ ಕಲ್ಲಂಗಡಿ ಹಣ್ಣಿನ ಫೇಸ್ ಪ್ಯಾಕ್ ಮಾಡುವುದು ಹೇಗೆ ನೋಡೋಣ :
ಫೇಸ್ ಪ್ಯಾಕಿಗೆ ಬೇಕಾಗುವ ಸಾಮಗ್ರಿಗಳು:
- 1 ಟೀಸ್ಪೂನ್ ಕಡಲೆ ಹಿಟ್ಟು
- 1 ಟೀಸ್ಪೂನ್ ಮುಲ್ತಾನಿ ಮಿಟ್ಟಿ
- 1 ಟೀಸ್ಪೂನ್ ಶ್ರೀಗಂಧದ ಪುಡಿ
- 1 ಟೀಸ್ಪೂನ್ ಮೊಸರು (curd)
- ಕಲ್ಲಂಗಡಿ ರಸ (water melon juice)
ಇದನ್ನೂ ಓದಿ : Raw Rice: ಅಕ್ಕಿ ತಿನ್ನುವ ಅಭ್ಯಾಸ ನಿಮಗೂ ಇದೆಯೇ? ಭಾರೀ ತೊಂದರೆಯಾಗಬಹುದು ಎಚ್ಚರ
ಫೇಸ್ ಪ್ಯಾಕ್ ಮಾಡುವ ವಿಧಾನ :
ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷಗಳವರೆಗೆ ಹಾಗೇ ಬಿಡಿ. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಈಗ ಫೇಸ್ ಪ್ಯಾಕ್ (face pack) ಹಚ್ಚುವುದಕ್ಕೂ ಮುನ್ನ ಮತ್ತು ಪ್ಯಾಕ್ ಹಚ್ಚದ ನಂತರದ ತ್ವಚೆಯ ವ್ಯತ್ಯಾಸ ನಿಮಗೆ ತಿಳಿಯುತ್ತದೆ.
ಮಿಕ್ಸ್ಡ್ ಹಣ್ಣಿನ ಫೇಸ್ ಪ್ಯಾಕ್ :
ಬೇಕಾಗುವ ಸಾಮಗ್ರಿ
- ಕಲ್ಲಂಗಡಿ ರಸ
- ಅರ್ಧ ಬಾಳೆಹಣ್ಣು (banana)
- 1 ಟೀಸ್ಪೂನ್ ಶ್ರೀಗಂಧದ ಪುಡಿ
-1 ಟೀಸ್ಪೂನ್ ಅಕ್ಕಿ ಹಿಟ್ಟು
ಫೇಸ್ ಪ್ಯಾಕ್ ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮುಖಕ್ಕೆ ಹಚ್ಚಿ. 15 ರಿಂದ 20 ನಿಮಿಷಗಳ ಕಾಲ ಬಿಟ್ಟು ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
ಇದನ್ನೂ ಓದಿ : ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿ, ಖಂಡಿತಾ ಕಣ್ಣಲ್ಲಿ ನೀರು ಬರುವುದಿಲ್ಲ.
ಕಲ್ಲಂಗಡಿ ಫೇಸ್ ಪ್ಯಾಕಿನ ಪ್ರಯೋಜನಗಳು :
ಕಲ್ಲಂಗಡಿ ಹಣ್ಣಿನಲ್ಲಿ (water melon) ವಿಟಮಿನ್-ಎ, ವಿಟಮಿನ್-ಸಿ, ಐರನ್, ಪ್ರೋಟೀನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಗುಣಗಳಿರುತ್ತವೆ. ಇದು ಚರ್ಮವನ್ನು ಕಪ್ಪಾಗಲು ಬಿಡುವುದಿಲ್ಲ. ಅಲ್ಲದೆ, ಚರ್ಮದ ಹೊಳಪನ್ನು (glowing skin) ಹೆಚ್ಚಿಸುವುದರ ಜೊತೆಗೆ, ಮೊಡವೆ, ಗುಳ್ಳೆಗಳು ಮತ್ತು ಟ್ಯಾನಿಂಗ್ ಮುಂತಾದ ಸಮಸ್ಯೆಗಳಿಂದ ಚರ್ಮಕ್ಕೆ ತ್ವರಿತ ಪರಿಹಾರ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ