International Yoga Day 2021: ಇಂದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ, ಯೋಗಕ್ಕಾಗಿ ಇಡೀ ವಿಶ್ವವನ್ನೇ ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎಂ-ಯೋಗ ಆ್ಯಪ್ (mYoga App) ಅನ್ನು ಬಿಡುಗಡೆ ಮಾಡಿದ್ದಾರೆ. ಈ ಅಪ್ಲಿಕೇಶನ್, ವೀಡಿಯೊಗಳ ಮೂಲಕ ಒಂದೇ ವೇದಿಕೆಯಲ್ಲಿ ಎಲ್ಲಾ ರೀತಿಯ ಯೋಗ ಕ್ರಿಯೆಗಳು ಮತ್ತು ಅವುಗಳ ವಿಧಾನಗಳ ಬಗ್ಗೆ ಜನರಿಗೆ ಪ್ರಮುಖ ಮಾಹಿತಿಯನ್ನು ಒದಗಿಸಲಿದೆ. ಆಯುಷ್ ಸಚಿವಾಲಯ (AYUSH Ministry) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ ಅಭಿವೃದ್ಧಿಪಡಿಸಿರುವ mYoga App, ಯೋಗ ಉತ್ಸಾಹಿಗಳಿಗೆ ಯೋಗ ತರಬೇತಿ ಮತ್ತು ವಿವಿಧ ಅವಧಿಯ ಅಭ್ಯಾಸದ ಕ್ರಮಣಿಕೆಗಳನ್ನು ಒದಗಿಸಲಿದೆ.
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವಕ್ಕೆ mYoga App ಶಕ್ತಿ ಸಿಗಲಿದೆ. myYoga ಆಪ್ ನಲ್ಲಿ ವಿಶ್ವಾದ್ಯಂತ ಇರುವ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗದ ತರಬೇತಿ ಹಾಗೂ ಪ್ರ್ಯಾಕ್ಟಿಸ್ ಸೆಶನ್ ಗಳು ಸಿಗಲಿವೆ ಮತ್ತು ಇದರಿಂದ ‘One World, One Health’ ಉದ್ದೇಶ ಸಾಕಾರಗೊಳ್ಳಲು ಸಹಕಾರ ಸಿಗಲಿದೆ ಎಂದು ಅವರು ಹೇಳಿದ್ದಾರೆ.
mYoga ಡೀಟೇಲ್ಸ್ ಇಲ್ಲಿವೆ
mYoga App ಅನ್ನು ವಿಶೇಷವಾಗಿ 12-65 ವರ್ಷದೊಳಗಿನವರಿಗಾಗಿ ನಿರ್ಮಿಸಲಾಗಿದೆ. ಈ ಆಪ್ ನಿಮ್ಮ ನಿತ್ಯದ 'ಯೋಗ ಸಾಥಿ (Yoga Buddy)' ರೂಪದಲ್ಲಿ ಕಾರ್ಯನಿರ್ವಹಿಸಲಿದೆ.ಇದರಿಂದ ಜನರಿಗೆ ಅವರ ಸ್ಮಾರ್ಟ್‌ಫೋನ್‌ಗಳ ಮೂಲಕ ಗುಣಮಟ್ಟದ ಯೋಗಾಭ್ಯಾಸ ಮಾಡಲು ಪ್ರೋತ್ಸಾಹಿಸಲಾಗುವುದು. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ mYoga ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ-International Yoga Day 2021: ಇಂದು ಯೋಗ ದಿನ, ಕರೋನಾದಲ್ಲೂ ಉತ್ಸಾಹ ಕಡಿಮೆಯಾಗಿಲ್ಲ ಎಂದ ಪಿಎಂ ಮೋದಿ
mYoga App ಒಂದು ಸುರಕ್ಷಿತ ಆಪ್ ಆಗಿದೆ
mYoga App ಒಂದು ಸುರಕ್ಷಿತ ಆಪ್ ಆಗಿದೆ ಹಾಗೂ ಇದು ಬಳಕೆದಾರರಿಂದ ಯಾವುದೇ ದತ್ತಾಂಶಗಳನ್ನು ಪಡೆದುಕೊಳ್ಳುವುದಿಲ್ಲ.
ಈ ಕೆಳಗಿನ ಭಾಷೆಗಳಲ್ಲಿ ಆ ಆಪ್ ಲಭ್ಯವಿದೆ
ಪ್ರಸ್ತುತ ಈ ಆಪ್ ಫ್ರೆಂಚ್, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಇದಕ್ಕೆ ಇನ್ನೂ ಹಲವು ಭಾಷೆಗಳನ್ನು ಜೋಡಿಸಲಾಗುತ್ತಿದೆ.
ಇದನ್ನೂ ಓದಿ-International Yoga Day 2021: ಲಡಾಖ್‌ನಲ್ಲಿ 18000 ಅಡಿ ಎತ್ತರದಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ ಪ್ರದರ್ಶನ
ನಿಮ್ಮ ಫೋನ್ ನಲ್ಲಿ ಇದಕೆಷ್ಟು ಜಾಗ ಬೇಕಾಗಲಿದೆ
mYoga ಆಪ್ ಅನ್ನು ಇದುವರೆಗೆ ಸಾಕಷ್ಟು ಜನರು ಡೌನ್ ಲೋಡ್ ಮಾಡಿದ್ದು, Google Play Store ನಲ್ಲಿ ಇದಕ್ಕೆ 4.5 ರೇಟಿಂಗ್ ದೊರೆತಿದೆ. ಜೂನ್ 17 ರಂದು ಈ ಆಪ್ ಅನ್ನು ಕೊನೆಯ ಬಾರಿಗೆ ಅಪ್ಡೇಟ್ ಮಾಡಲಾಗಿದೆ. ಈ ಆಪ್ ಅನ್ನು ನಿಮ್ಮ ಫೋನ್ ನಲ್ಲಿ ಡೌನ್ ಲೋಡ್ ಮಾಡಲು ನಿಮಗೆ 12 MB ಸ್ಪೇಸ್ ಬೇಕಾಗಲಿದೆ.
ಇದನ್ನೂ ಓದಿ-ಸುಖ, ಶಾಂತಿಗಾಗಿ ಮನೆಯಲ್ಲಿರಬೇಕು ಬುದ್ದನ ಮೂರ್ತಿ..ಆದರೆ ಎಲ್ಲಿ ಇಡಬೇಕು.?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.