Matt Hancock : ಕಿಸ್‌ ಕೊಟ್ಟು ಕೆಲಸ ಕಳೆದುಕೊಂಡ ಆರೋಗ್ಯ ಸಚಿವ!

ಆರೋಗ್ಯ ಸಚಿವರೊಬ್ಬರು ಕೆಲಸ ಕಳೆದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ

Last Updated : Jun 27, 2021, 05:11 PM IST
  • ಸಹೋದ್ಯೋಗಿಯೊಬ್ಬರಿಗೆ ಕಚೇರಿಯಲ್ಲಿಯೇ ಮುತ್ತು ಕೊಟ್ಟು ಆರೋಗ್ಯ ಸಚಿವ
  • ಆರೋಗ್ಯ ಸಚಿವರೊಬ್ಬರು ಕೆಲಸ ಕಳೆದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ
  • ಆರೋಗ್ಯ ಸಚಿವರಾಗಿದ್ದಕೊಂಡು ಕರೊನಾ ಮಾರ್ಗಸೂಚಿ ಉಲ್ಲಂಘನೆ
Matt Hancock : ಕಿಸ್‌ ಕೊಟ್ಟು ಕೆಲಸ ಕಳೆದುಕೊಂಡ ಆರೋಗ್ಯ ಸಚಿವ! title=

ಲಂಡನ್ : ಸಹೋದ್ಯೋಗಿಯೊಬ್ಬರಿಗೆ ಕಚೇರಿಯಲ್ಲಿಯೇ ಮುತ್ತು ಕೊಟ್ಟು ಆರೋಗ್ಯ ಸಚಿವರೊಬ್ಬರು ಕೆಲಸ ಕಳೆದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.

ಮ್ಯಾಟ್ ಹಾನ್‌ಕಾಕ್(Matt Hancock) ಕಿಸ್ ಕೊಟ್ಟ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ ಇವರು ಎಲ್ಲರ ಎದುರು, ಕಚೇರಿಯ ಅವಧಿಯಲ್ಲಿ ಮುತ್ತು ಕೊಟ್ಟಿದ್ದಕ್ಕೆ ಈ ಶಿಕ್ಷೆಯಲ್ಲ, ಬದಲಿಗೆ ಕರೊನಾ ನಿಯಮ ಉಲ್ಲಂಘನೆ ಮಾಡಿದರು ಎನ್ನುವ ಕಾರಣಕ್ಕೆ! ಆರೋಗ್ಯ ಸಚಿವರಾಗಿದ್ದಕೊಂಡು ಕರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವರ ರಾಜೀನಾಮೆ ಪಡೆಯಲಾಗಿದೆ.

ಇದನ್ನೂ ಓದಿ : Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'

ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲರಿಗೂ ಬುದ್ಧಿಹೇಳುವ ಆರೋಗ್ಯ ಸಚಿವ(UK Health Minister)ರು ಹೀಗೆ ಮಾಡಿದ್ದು ತಪ್ಪು ಎನ್ನುವುದು ಇದಕ್ಕೆ ಕಾರಣ. ಈ ಸಚಿವರು ಚುಂಬಿಸಿದ ಫೋಟೋಗಳು ವೈರಲ್ ಆಗಿದ್ದವು. ನಂತರ ಈ ಬಗ್ಗೆ ಅವರಿಗೆ ಸಮಜಾಯಿಷಿ ಕೇಳಿದಾಗ ಕರೊನಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ನಂತರ ರಾಜೀನಾಮೆ ನೀಡಿದ್ದಾರೆ. ಇವರ ಜಾಗಕ್ಕೆ ಪಾಕಿಸ್ತಾನದ ಸಂಸತ್ ಸದಸ್ಯ ಸಾಜಿದ್ ಜಾವಿದ್ ಬ್ರಿಟನ್ ನೂತನ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News