Life Insurance : ಮಳೆಗಾಲದಲ್ಲಿ ಇರಲಿ ಈ 3 'ಜೀವ ವಿಮಾ' ಪಾಲಿಸಿಗಳು!

ಮಳೆಗಾಲದಲ್ಲಿ ನಿಮ್ಮ ಮನೆ, ವಾಹನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಮಾ ಪಾಲಿಸಿ ಮಾಡಿಸುವುದು ಮರೆಯಬೇಡಿ. ಇದಕ್ಕಾಗಿ ನಾವು ನಿಮಗಾಗಿ ಅಂತ ಕೆಲವುಂದಿಷ್ಟು ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

Last Updated : Jul 8, 2021, 11:44 AM IST
  • ಎಲ್ಲದ್ದಕ್ಕೂ ಭದ್ರತೆ ಅನ್ನೋದು ಇದ್ದಾಗ ಮಳೆಗಾಲದ ಖುಷಿಯನ್ನು ದುಪ್ಪಟಾಗಿಸುತ್ತದೆ
  • ಮಳೆಗಾಲದಲ್ಲಿ ನಿಮ್ಮ ಮನೆ, ವಾಹನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಮಾ ಪಾಲಿಸಿ
  • ಮಳೆಯ ಪ್ರವಾಹದ ಹಿನ್ನೆಲೆ ಉಂಟಾದ ಎಂಜಿನ್ ಭಾಗ ಮತ್ತು ಇನ್ನಿತರ ನಷ್ಟವನ್ನು ತುಂಬುತ್ತದೆ
Life Insurance : ಮಳೆಗಾಲದಲ್ಲಿ ಇರಲಿ ಈ 3 'ಜೀವ ವಿಮಾ' ಪಾಲಿಸಿಗಳು! title=

ನವದೆಹಲಿ : ಎಲ್ಲದ್ದಕ್ಕೂ ಭದ್ರತೆ ಅನ್ನೋದು ಇದ್ದಾಗ ಮಳೆಗಾಲದ ಖುಷಿಯನ್ನು ದುಪ್ಪಟಾಗಿಸುತ್ತದೆ. ಆದರೆ ಮಳೆಯಿಂದ ಸೃಷ್ಟಿ ಆಗುವ ಅವಘಡಗಳಿಗೆ ಆರ್ಥಿಕ ಸಮಸ್ಯೆ ಎದುರಾದ್ರೆ ಮುಗೀತು. ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕು. ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ನಿಮ್ಮ ಮನೆ, ವಾಹನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಮಾ ಪಾಲಿಸಿ ಮಾಡಿಸುವುದು ಮರೆಯಬೇಡಿ. ಇದಕ್ಕಾಗಿ ನಾವು ನಿಮಗಾಗಿ ಅಂತ ಕೆಲವುಂದಿಷ್ಟು ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಸಮಗ್ರ ಆರೋಗ್ಯ ವಿಮಾ ಪಾಲಿಸಿ ಖರೀದಿಸಿ : 'ಮಾನ್ಸೂನ್​ ಅಂದ್ರೆ ಮಳೆಗಾಲ(Rainy Season)ದ ಈ ಸಮಯದಲ್ಲಿ ಮಲೇರಿಯಾ, ಡೆಂಘಿ, ಸೊಳ್ಳೆಯಿಂದ ಹರಡುವ ಆರೋಗ್ಯ ಸಮಸ್ಯೆಗಳಿಗೆ ನಿರ್ದಿಷ್ಟ ಕವರೇಜ್​ಗಳಿವೆ. ಆದರೂ ಸಮಗ್ರ ಆರೋಗ್ಯ ಪಾಲಿಸಿ ಜೊತೆಗೆ ಟಾಪ್ ಅಪ್ ಪಾಲಿಸಿಗಳನ್ನು ಖರೀದಿಸಬಹುದು' ಎಂದು ಆಪ್ಟಿಮಾ ಮನಿ ಮ್ಯಾನೇಜರ್‌ಗಳ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮತ್​​ಪಾಲ್ ಹೇಳುತ್ತಾರೆ. ಸ್ವತಂತ್ರ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು ಖರೀದಿಸಲು ಮರೆಯಬೇಡಿ. ಇದು ತಾತ್ಕಾಲಿಕ ಅಂಗವೈಕಲ್ಯದ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ : Gold-Silver Rate : ಮೊದಲೇ ಚಿನ್ನ ಖರೀದಿಸಿದವರಿಗೆ ಭಾರೀ ಲಾಭ : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ 

ಗೃಹ ವಿಮಾ ಪಾಲಿಸಿ : ಗೃಹ ವಿಮಾ ಪಾಲಿಸಿ(Home Insurance)ಯಲ್ಲಿ ಮನೆಯ ಮೌಲ್ಯಯುತ ವಸ್ತುಗಳ ಪರಿಗಣನೆ ಇರಲಿ. ಪೋರ್ಟಬಲ್ ಎಲೆಕ್ಟ್ರಾನಿಕ್ ಉಪಕರಣ, ಆಭರಣ ಮತ್ತು ಬೆಲೆಬಾಳುವಂತಹ ವಸ್ತುಗಳ ಆಡ್ ಆನ್ ವಿಮೆಯನ್ನು ಹೆಚ್ಚಿಸಲು ಬಳಸಬಹುದು ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ : Petrol-Diesel Price : ಪೆಟ್ರೋಲ್ ಬೆಲೆ ಇಂದು ಮತ್ತೆ ಏರಿಕೆ : ರಾಜಸ್ಥಾನದದಲ್ಲಿ ಲೀಟರ್ ಗೆ 112 ರೂ. 

ಮೋಟಾರ್ ಮತ್ತು ಗೃಹ ವಿಮಾ ಪಾಲಿಸಿ : ಮೋಟಾರು ವಿಮಾ(Vehicle Insurance) ಪಾಲಿಸಿ ಮಳೆಯ ಪ್ರವಾಹದ ಹಿನ್ನೆಲೆ ಉಂಟಾದ ಎಂಜಿನ್ ಭಾಗ ಮತ್ತು ಇನ್ನಿತರ ನಷ್ಟವನ್ನು ತುಂಬುತ್ತದೆ. ಆದರೆ ನೀವು ಪ್ರವಾಹದ ಸ್ಥಳದಲ್ಲಿ ಕಾರನ್ನು ಚಲಿಸಿದರೆ ಅದರ ನಷ್ಟಕ್ಕೆ ಹಣ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : SBI ಗ್ರಾಹಕರಿಗೆ ಎಚ್ಚರಿಕೆ : ಈ Mobile Number ನಿಂದ SMS / ಕರೆ ಸ್ವೀಕರಿಸಿದ್ರೆ ಕಾಲಿ ಆಗುತ್ತೆ ಬ್ಯಾಂಕ್ ಬ್ಯಾಲೆನ್ಸ್!

ಈ ನಿಟ್ಟಿನಲ್ಲಿ ಹೊಸ ಕಾರು ಖರೀದಿಸುವಾಗ ಸುರಕ್ಷತೆ ಸಲುವಾಗಿ ಎಂಜಿನ್ ಪ್ರೊಟೆಕ್ಷನ್ ರೈಡರ್ ಜೊತೆಗೆ ಶೂನ್ಯ-ಸವಕಳಿ ಮೋಟಾರ್ ವಿಮಾ ಪಾಲಿಸಿಯನ್ನು ಖರೀದಿಸಿ. ಮಳೆಯಿಂದ ಉಂಟಾದ ನೀರಿನ ರಸ್ತೆಯಲ್ಲಿ ಚಲಿಸುವಾಗ ನಿಧಾನವಾಗಿ ಚಲಿಸಿ ಇದರಿಂದ ಎಂಜಿನ್​​ನಲ್ಲಿ ನೀರು(Water) ಸೇರುವ ಸಾಧ್ಯತೆ ತಪ್ಪಿಸಬಹುದು. ನೀರಿನಲ್ಲಿ ಸಿಲುಕಿಕೊಂಡರೆ ಕ್ರ್ಯಾಂಕ್ ಮಾಡಬಾರದು. ಇದರಿಂದ ಎಂಜಿನ್​ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಎಂಜಿನ್ ಪ್ರೊಟೆಕ್ಟ್ ಆಡ್-ಆನ್ ರೈಡರ್ ಪಾಲಿಸಿ ತೆಗೆದುಕೊಂಡರೆ ನೀರಿನ ಪ್ರವೇಶ ಮತ್ತು ಆಯಿಲ್ ಲೀಕೇಜ್​ ನಷ್ಟವನ್ನು ತುಂಬಿಕೊಡಲಾಗುತ್ತೆ.

ಇದನ್ನೂ ಓದಿ : Gold-Silver Rate : ತಡಮಾಡದೆ ಚಿನ್ನ ಖರೀದಿಸಿ : ಮತ್ತೆ ಏರಿಕೆಯಾಗುತ್ತಿದೆ ಚಿನ್ನದ ಬೆಲೆ!

ತಪ್ಪದೇ ಈ ನಿಯಮ ಪಾಲಿಸಿ : ಮಳೆ(Rain) ಬರುವ ಸಂದರ್ಭದಲ್ಲಿ ಶಿಥಿಲಗೊಂಡ ಕಟ್ಟಡ, ಮರದ ಕೆಳಗೆ ವಾಹನ ನಿಲ್ಲಿಸಬಾರದು.ವಿಮಾ ವೆಚ್ಚ ಸಿಗಬಹುದು. ಆದರೆ ಸಂಪೂರ್ಣ ನಿಮ್ಮ ವಾಹನ ಬದಲಾಗುವುದಿಲ್ಲ. ಇದು ಸಂಕಟಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ : Petrol-Diesel Prices: ದೆಹಲಿಯಲ್ಲಿ ಶತಕ ಭಾರಿಸಿದ ಪೆಟ್ರೋಲ್ ಬೆಲೆ : ನಿಮ್ಮ ನಗರದಲ್ಲಿನ ದರ ಪರಿಶೀಲಿಸಿ!

ಹಾನಿಯ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿ ಇಡಿ : ಮಳೆಯಿಂದ ಮನೆ ಹಾನಿಯಾಗಿದ್ದರೆ, ಮೊಬೈಲ್(Mobile) ಬಳಸಿ ನೀರಿನ ಮಟ್ಟ ಮತ್ತು ಹಾನಿಯನ್ನು ವಿಡಿಯೋ ಮಾಡಿಟ್ಟುಕೊಳ್ಳಿ. ಇದು ಕಡ್ಡಾಯವಲ್ಲ. ಆದರೂ ಗೃಹ ವಿಮಾ ಹಕ್ಕು ಹಾನಿ ಸಾಬೀತು ಮಾಡಲು ನೆರವಾಗುತ್ತದೆ ಎಂದು ಸತ್ಪತಿ ಅಭಿಪ್ರಾಯ ಪಡುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News