Benefits of Flaxseeds: ಕೂದಲಿನ ಆರೋಗ್ಯಕ್ಕೆ ಅಗಸೆ ಬೀಜ : ಹೇಗೆ ಬಳಸಬೇಕು?

ಅಗಸೆ ಬೀಜಗಳು ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ.

Written by - Channabasava A Kashinakunti | Last Updated : Jul 29, 2021, 10:41 PM IST
  • ಕೂದಲು ಬೆಳವಣಿಗೆಗೆ ನಾವು ಸಾಕಷ್ಟು ಬಗೆಯ ಔಷಧ, ಎಣ್ಣೆ ಬಳಸುತ್ತೇವೆ
  • ಅಗಸೆ ಬೀಜ ನಮ್ಮ ಕೂದಲಿನ ಬೆಳವಣಿಗೆ ಮತ್ತು ಮೃದುತ್ವ ಕಾಪಾಡಲು
  • ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿನ ಕಂಡೀಷನರ್ ಉಪಯೋಗ
Benefits of Flaxseeds: ಕೂದಲಿನ ಆರೋಗ್ಯಕ್ಕೆ ಅಗಸೆ ಬೀಜ : ಹೇಗೆ ಬಳಸಬೇಕು? title=

ಕೂದಲು ಬೆಳವಣಿಗೆಗೆ ನಾವು ಸಾಕಷ್ಟು ಬಗೆಯ ಔಷಧ, ಎಣ್ಣೆ ಬಳಸುತ್ತೇವೆ. ಇದ್ರಲ್ಲಿ ನೈಸರ್ಗಿಕ ಎಣ್ಣೆ ಮತ್ತು ರಾಸಾಯನಿಕಯುಕ್ತ ಅಣ್ಣೆಗಳನ್ನ ನಾವು ಕೂದಲಿನ ಬೆಳವಣಿಗೆಗೆ ಮತ್ತೆ ಅದರ ಆರೋಗ್ಯಕ್ಕೆ ಉಪಯೋಗಿಸುತ್ತೇವೆ. ಆದ್ರೆ ಇಂದು ನಾವು ನಿಮಗೆ ಆಯುರ್ವೇದಿಕ ಆರೋಗ್ಯಕರ ಆಹಾರ ಪದಾರ್ಥವೆಂದರೆ ಅದು ಅಗಸೆ ಬೀಜ. ಅಗಸೆ ಬೀಜಗಳು ನಮ್ಮ ದೇಹದ ಆರೋಗ್ಯಕ್ಕೆ ಒಂದು ರೀತಿ ಕೆಲಸ ಮಾಡಿದರೆ ನಮ್ಮ ಕೂದಲಿನ ಬೆಳವಣಿಗೆ ಮತ್ತು ಮೃದುತ್ವ ಕಾಪಾಡುವಲ್ಲಿ ಇನ್ನೊಂದು ರೀತಿ ಕೆಲಸ ಮಾಡುತ್ತವೆ. ಇಂದು ನಾವು ನಿಮಗಾಗಿ ಈ ಸುದ್ದಿಯನ್ನ ತಂದಿದ್ದೇವೆ.

ಅಗಸೆ ಬೀಜ(Flaxseeds)ಗಳಲ್ಲಿ ನಮ್ಮ ದೇಹದ ಆರೋಗ್ಯಕ್ಕೆ ಬೇಕಾಗಿರುವ ಸಾಕಷ್ಟು ಪ್ರಮಾಣದ ಅತ್ಯಧಿಕ ಪೌಷ್ಟಿಕ ಸತ್ವಗಳು ಸುಲಭವಾಗಿ ಲಭ್ಯವಾಗುತ್ತವೆ. ಅವುಗಳೆಂದರೆ, ಅಗಸೆ ಬೀಜಗಳಲ್ಲಿ ಒಮೆಗಾ - 3 ಫ್ಯಾಟಿ ಆಸಿಡ್, ನಾರಿನ ಅಂಶ, ವಿಟಮಿನ್ ಬಿ, ಕ್ಯಾನ್ಸರ್ ವಿರುದ್ಧ ಹೋರಾಡುವ ಲಿಗ್ನಾನ್, ಆಂಟಿ - ಆಕ್ಸಿಡೆಂಟ್ ಅಂಶಗಳು ಕಂಡು ಬರುತ್ತವೆ.

ಇದನ್ನೂ ಓದಿ : Retro Walking Benefits : 'ರೆಟ್ರೊ ವಾಕಿಂಗ್' ಆರೋಗ್ಯೆಕ್ಕೆ ತುಂಬಾ ಪ್ರಯೋಜನಕಾರಿ : ಹೇಗೆ? ಇಲ್ಲಿದೆ ನೋಡಿ

ಕೂದಲಿನ ಆರೋಗ್ಯಕ್ಕೆ ಅಗಸೆ ಬೀಜ : 

ಅಗಸೆ ಬೀಜಗಳು ಕೇವಲ ನಮ್ಮ ದೇಹದ ಆಂತರಿಕ ಆರೋಗ್ಯ(Health)ವನ್ನು ಕಾಪಾಡಿ ನಮ್ಮನ್ನು ಹಲವಾರು ಬಗೆಯ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಅಗಸೆ ಬೀಜಗಳು ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ನಮ್ಮ ನೆತ್ತಿ ಹಾಗೂ ತಲೆಯ ಸಂಪೂರ್ಣ ಭಾಗದಲ್ಲಿ ಕೂದಲಿಗೆ ಮಸಾಜ್ ಮಾಡಿದರೆ ನಮ್ಮ ತಲೆ ಕೂದಲು ಸಾಕಷ್ಟು ಸದೃಢವಾಗುವುದರೊಂದಿಗೆ ತುಂಬಾ ಮೃದುವಾಗಿ ಮತ್ತು ಹೊಳಪಾಗಿ ಕಾಣಿಸುತ್ತದೆ.

ಇದರ ಜೊತೆಗೆ ಕೂದಲಿನ ಸಮಸ್ಯೆಗಳಾದ ಕೂದಲು(Hair) ಉದುರುವಿಕೆ, ತಲೆ ಹೊಟ್ಟು ನಿವಾರಣೆ ಇತ್ಯಾದಿಗಳಲ್ಲಿ ಅಗಸೆ ಬೀಜಗಳು ಮಹತ್ವದ ಪಾತ್ರ ಬೀರುತ್ತವೆ. ಅಗಸೆ ಬೀಜಗಳಲ್ಲಿ ಕಂಡು ಬರುವ ಪೌಷ್ಟಿಕಾಂಶಗಳು ನಮ್ಮ ಕೂದಲಿಗೆ ಯಾವ ರೀತಿ ಸಹಾಯ ಮಾಡುತ್ತವೆ ಎಂಬುದನ್ನು ಒಂದೊಂದಾಗಿ ನೋಡುವುದಾದರೆ.

ಇದನ್ನೂ ಓದಿ : Herbs For Monsoon : ಮಳೆಗಾಲದಲ್ಲಿ ಖಂಡಿತಾ ತಿನ್ನಲೇಬೇಕು ಈ ಆಹಾರ

​ಕೂದಲಿನ ಆರೋಗ್ಯಕ್ಕೆ ಅಗಸೆ ಬೀಜಗಳ ಬಳಕೆ ಹೇಗೆ ?

ಅಗಸೆ ಬೀಜಗಳನ್ನು ಬಹಳಷ್ಟು ಬಗೆಗಳಲ್ಲಿ ಕೂದಲಿನ ಆರೋಗ್ಯ(Hair Health)ಕ್ಕೆ ಸಹಕಾರಿಯಾಗುವಂತೆ ಬಳಕೆ ಮಾಡಬಹುದು. ಅವುಗಳಲ್ಲಿ ಕೆಲವನ್ನು ನೋಡುವುದಾದರೆ.

ಅಗಸೆ ಬೀಜದ ಎಣ್ಣೆ :

ಮಾರುಕಟ್ಟೆಯಲ್ಲಿ ಸುಲಭವಾಗಿ ನಮಗೆ ಅಗಸೆ ಬೀಜದ ಎಣ್ಣೆ(Flaxseeds Oil) ಲಭ್ಯವಾಗುತ್ತದೆ. ಇದನ್ನು ಮನೆಗೆ ತಂದು ನಮ್ಮ ತಲೆ ಕೂದಲಿಗೆ ಹೇರ್ ಮಾಸ್ಕ್ ರೀತಿ ಬಳಸಬಹುದು. ನೀವು ಇದುವರೆಗೂ ತಲೆಗೆ ಕೊಬ್ಬರಿ ಎಣ್ಣೆ ಅಥವಾ ಆಲ್ಮಂಡ್ ಆಯಿಲ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡುತ್ತಿದ್ದ ರೀತಿಯಲ್ಲಿ ಅಗಸೆ ಬೀಜದ ಎಣ್ಣೆಯನ್ನು ಸಹ ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ ನಿಮ್ಮ ಕೂದಲನ್ನು ಆಯುರ್ವೇದ ಶಾಂಪೂ ಬಳಸಿ ತೊಳೆದುಕೊಳ್ಳಬಹುದು.

ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿನ ಕಂಡೀಷನರ್(Conditione) ಆಗಿ ಕೂಡ ಉಪಯೋಗಿಸಬಹುದು. ನಿಮ್ಮ ಕೂದಲು ಒಂದು ವೇಳೆ ತುಂಬಾ ಒರಟಾಗಿದ್ದರೆ, ನೀವು ಶಾಂಪೂ ಬಳಸಿ ತಲೆ ಸ್ನಾನ ಮಾಡಿದ ನಂತರ ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಿಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದು.

ಇದನ್ನೂ ಓದಿ : Salt For Skin Problems: ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ ಉಪ್ಪು

ಅಗಸೆ ಬೀಜದ ಹೇರ್ ಮಾಸ್ಕ್ :

ಅಗಸೆ ಬೀಜಗಳನ್ನು ನಿಮ್ಮ ತಲೆ ಕೂದಲಿಗೆ ಮೊದಲೇ ಹೇಳಿದಂತೆ ಹೇರ್ ಮಾಸ್ಕ್(Hair Mask) ರೀತಿಯಲ್ಲಿ ಕೂಡ ಬಳಸಬಹುದು. ಇದಕ್ಕಾಗಿ ಮೊದಲು ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಒಂದು ಮಿಕ್ಸರ್ ಗ್ರೈಂಡರ್ ನಲ್ಲಿ ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಹೀಗೆ ತಯಾರಾದ ಅಗಸೆ ಬೀಜಗಳ ಪೇಸ್ಟ್ ಗೆ ಸ್ವಲ್ಪ ಜೇನು ತುಪ್ಪ ಮತ್ತು ತಾಜಾ ನಿಂಬೆ ಹಣ್ಣಿನ ರಸ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ತಲೆ ಕೂದಲಿಗೆ ಎಲ್ಲಾ ಕಡೆ ಹರಡುವಂತೆ ಹಚ್ಚಿ ಸುಮಾರು 30 ರಿಂದ 45 ನಿಮಿಷಗಳು ಹಾಗೆ ಇರಲು ಬಿಡಿ. ವಾರಕ್ಕೆ ಒಂದು ಬಾರಿ ನೀವು ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಅತ್ಯಂತ ಮೃದುವಾಗಿ ಮತ್ತು ಹೊಳಪಿನಿಂದ ಕೂಡಿರುತ್ತದೆ.

ನಿಮ್ಮ ಕೂದಲಿನ ಸೌಂದರ್ಯ ಮತ್ತು ಕಾಂತಿ ಹೆಚ್ಚಿಸಲು ಕೇವಲ ಅಗಸೆ ಬೀಜಗಳನ್ನು ಮೇಲಿನ ವಿಧಾನಗಳಲ್ಲಿ ತಲೆ ಕೂದಲಿಗೆ ಹಚ್ಚುವುದು ಮಾತ್ರವಲ್ಲದೆ ನಿಮ್ಮ ಆಹಾರ ಪದ್ಧತಿಯಲ್ಲಿ ಸಹ ನೀವು ತಯಾರು ಮಾಡುವ ಅಡುಗೆಗಳಲ್ಲಿ ಮಿಶ್ರಣ ಮಾಡಿ ಸೇವಿಸಬೇಕು. ಇದು ನಿಮ್ಮ ದೇಹದಲ್ಲಿ ಪೌಷ್ಟಿಕ ಸತ್ವಗಳನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ ಕೂದಲಿನ ಬೇರುಗಳಿಗೆ ಅಗತ್ಯ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ನಿಮ್ಮ ಕೂದಲ ಬೆಳವಣಿಗೆ ನಿಮ್ಮ ಊಹೆಗೂ ಮೀರಿ ಅತ್ಯಂತ ಸೊಂಪಾಗಿ ಮತ್ತು ಮೃದುವಾಗಿ ನೋಡಲು ಚೆನ್ನಾಗಿ ಕಾಣುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News