BIG NEWS: CBSE 10ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್ ಹೀಗೆ ಚೆಕ್ ಮಾಡಿ…

 CBSE 10ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.

Written by - Zee Kannada News Desk | Last Updated : Aug 3, 2021, 06:41 PM IST
  • ಸಿಬಿಎಸ್​ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ.
  • ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಅಂಕ ನೀಡಲಾಗಿದೆ.
  • ಕೊರೊನಾ ಹಿನ್ನೆಲೆ CBSE 10ನೇ ತರಗತಿಯ ಪರೀಕ್ಷೆ ರದ್ದು ಮಾಡಲಾಗಿತ್ತು
BIG NEWS: CBSE 10ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್ ಹೀಗೆ ಚೆಕ್ ಮಾಡಿ… title=
CBSE 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ

ನವದೆಹಲಿ: ಇನ್ನು ಕೆಲವೇ ಹೊತ್ತಲ್ಲಿ ಸಿಬಿಎಸ್​ಇ 10ನೇ ತರಗತಿಯ ಫಲಿತಾಂಶ(CBSE 10th Result) ಪ್ರಕಟವಾಗಲಿದೆ. ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಮೇ 4ರಿಂದ ಜೂನ್ 7ರವರೆಗೆ ನಡೆಯಬೇಕಿದ್ದ ಈ ವರ್ಷದ ಸಿಬಿಎಸ್​ಇ 10ನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Jammu-Kashmir : 10 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ

ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ಫಲಿತಾಂಶಕ್ಕಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)ಯ ಅಧಿಕೃತ ವೆಬ್‌ಸೈಟ್‌ಗಳಾದ https://cbseresults.nic.in ಅಥವಾ https://cbse.nic.in ಗೆ ಭೇಟಿ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಬಹುದು.

CBSE 10ನೇ ತರಗತಿ ಫಲಿತಾಂಶ ಹೀಗೆ ವೀಕ್ಷಿಸಿ…  

  • ವಿದ್ಯಾರ್ಥಿಗಳು ಮೊದಲು CBSE ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in ಅಥವಾ cbse.nic.in ಗೆ ಭೇಟಿ ನೀಡಬೇಕು.
  • ಮುಂದಿನ ಪುಟದ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪರೀಕ್ಷಾ ವಿವರಗಳಾದ ರೋಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.
  • ವಿವರಗಳನ್ನು ಸಲ್ಲಿಸಿದ ಬಳಿಕ ನಿಮ್ಮ10ನೇ ತರಗತಿಯ CBSE ಬೋರ್ಡ್ ಫಲಿತಾಂಶವನ್ನು ಪರಿಶೀಲಿಸಿ
  • ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ
  • ಡೌನ್‌ಲೋಡ್ ಮಾಡಿ ಮತ್ತು ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ

ವಿದ್ಯಾರ್ಥಿಗಳು ಮೊಬೈಲ್ ಮತ್ತು ಇಮೇಲ್ ಐಡಿಗಳಲ್ಲಿ SMS ಮೂಲಕವೂ ಫಲಿತಾಂಶ(CBSC Result) ಪಡೆದುಕೊಳ್ಳಬಹುದು. SMS ಮೂಲಕ ಫಲಿತಾಂಶ ಪಿರಿಶೀಲಿಸಬೇಕಾದರೆ ವಿದ್ಯಾರ್ಥಿಗಳು- CBSE 10th Roll Number, Date of Birth, School Number, Centre Number ಅನ್ನು 7738299899 ಗೆ ಸೆಂಡ್ ಮಾಡಬೇಕು. ಬಳಿಕ ನಿಮ್ಮ ಮೊಬೈಲ್ ಗೆ SMS ಫಲಿತಾಂಶ ಬರಲಿದೆ.

ಇದನ್ನೂ ಓದಿ: viral video : ಮದುವೆ ಶಾಸ್ತ್ರ ನಡೆಯುತ್ತಿರುವಾಗ ಇದ್ದಕ್ಕಿದಂತೆ ವರ ಹೀಗೆ ಮಾಡಿದ್ದೇಕೆ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News