ಕೋಲ್ಕತ್ತಾ: ಸಂಗೀತವು ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಮ್ಯೂಸಿಕ್ ಇಲ್ಲದೆ ಜೀವನವೇ ಖಾಲಿ ಖಾಲಿ ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಗೀತವು ಸಾಮಾನ್ಯರಿಗೂ ಖ್ಯಾತಿ ತಂದುಕೊಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ರಾತ್ರೋರಾತ್ರಿ ಅನೇಕರು ಫೇಮಸ್ ಆಗುತ್ತಿದ್ದಾರೆ. ರೈಲ್ವೆ ಸ್ಟೇಶನ್ ವೊಂದರಲ್ಲಿ ತಮ್ಮ ಮಧುರ ಧ್ವನಿಯಿಂದ ರಾನು ಮೊಂಡಲ್ ವೈರಲ್ ಆಗಿದ್ದರು. ‘ಬಚ್ಪನ್ ಕಾ ಪ್ಯಾರ್’ ಹಾಡು ಹಾಡುವ ಮೂಲಕ ಸಹದೇವ್ ಡಿರ್ಡೋ ಎಂಬ ಯುವಕ ಸಖತ್ ಸದ್ದು ಮಾಡಿದ್ದ. ಇದೀಗ ಕೋಲ್ಕತ್ತಾದ ಚಾಯ್ವಾಲಾ ಕೂಡ ಬಾಲಿವುಡ್ ಕ್ಲಾಸಿಕ್ ಹಾಡುಗಳ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.
ಹೌದು, ಹಿಂದಿ ಚಿತ್ರರಂಗದ ಪ್ರತಿಭಾವಂತ ಕಲಾವಿದ, ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಅವರ ಕ್ಲಾಸಿಕ್ ಹಾಡುಗಳನ್ನು ಹಾಡುವ ಮೂಲಕ ಕೋಲ್ಕತ್ತಾದ ಚಾಯ್ವಾಲಾ ಒಬ್ಬರು ಸಖತ್ ಸೌಂಡ್ ಮಾಡುತ್ತಿದ್ದಾರೆ. ತಮ್ಮ ಟೀ ಅಂಗಡಿಗೆ ಆಗಮಿಸುವ ಗ್ರಾಹಕರಿಗೆ ಕಿಶೋರ್ ಕುಮಾರ್ ಹಾಡುಗಳನ್ನು ಹಾಡುವ ಮೂಲಕ ಹೃದಪೂರ್ವಕ ಸ್ವಾಗತ ಕೋರುತ್ತಿದ್ದಾರೆ. ಕಿಶೋರ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು ಬಾಲಿವುಡ್ ಕ್ಲಾಸಿಕ್ ಹಾಡುಗಳನ್ನು ಹಾಡಿ ಗ್ರಾಹಕರ ಮೊಗದಲ್ಲಿ ನಗು ಮೂಡಿಸುತ್ತಿದ್ದಾರೆ.
#WATCH | West Bengal: A tea shop owner in Kolkata goes viral for entertaining customers by singing Kishore Kumar's songs.
"I have followed Kishore Kumar since I was 10 years old. I practiced his songs on Karaoke. He is my idol," says Paltan Nag, tea shop owner in Kolkata. pic.twitter.com/ng8CRZi8lU
— ANI (@ANI) August 8, 2021
ಇದನ್ನೂ ಓದಿ: Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್
ಉತ್ತರ ಕೋಲ್ಕತ್ತಾದ ಬೆನಿಯಾಟೊಲಾ ಲೇನ್ನಲ್ಲಿ ಟೀ ಸ್ಟಾಲ್ ಹಾಕಿರುವ ಪಾಲ್ತಾನ್ ನಾಗ್ ಕಿಶೋರ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಕಿಶೋರ್ ಕುಮಾರ್ ಅವರ ರೇಖಾಚಿತ್ರವಿರುವ ಹಳದಿ ಶರ್ಟ್ ಧರಿಸಿ ತಮ್ಮ ವಿಶಿಷ್ಟ ಕಂಠದಿಂದ ಕ್ಲಾಸಿಕ್ ಹಾಡುಗಳನ್ನು ಹಾಡುತ್ತಾರೆ. ಹಾಡು ಹಾಡುತ್ತಲೇ ಗ್ರಾಹಕರಿಗೆ ಚಹಾವನ್ನು ನೀಡುತ್ತಾರೆ. ಅನೇಕರು ಚಾಯ್ವಾಲಾ ನಾಗ್ ಅವರ ಹಾಡುಗಳಿಗೆ ಮನಸೋತಿದ್ದಾರೆ. ಕೆಲವರು ಅವರು ಹಾಡುತ್ತಿದ್ದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಶೇರ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ: Free Ration : ಕೋವಿಡ್ ಸಮಯದಲ್ಲಿ 80 ಕೋಟಿ ಭಾರತೀಯರಿಗೆ 'ಉಚಿತ ಪಡಿತರ' : ಪ್ರಧಾನಿ ಮೋದಿ
ತಮ್ಮ ಟೀ ಅಂಗಡಿಯನ್ನು ಕಿಶೋರ್ ಕುಮಾರ್ ಅವರ ಫೋಟೋಗಳಿಂದ ನಾಗ್ ಅಲಂಕರಿಸಿದ್ದಾರೆ. ‘ಆಗಸ್ಟ್ 4ರಂದು ಗ್ರಾಹಕರೊಂದಿಗೆ ಸೇರಿಕೊಂಡು ನಾನು ಕಿಶೋರ್ ಕುಮಾರ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇನೆ. ನನ್ನ ಹಾಡುಗಳನ್ನು ಅನೇಕ ಜನರು ಇಷ್ಟಪಟ್ಟಿದ್ದಾರೆ. ಕ್ಲಾಸಿಕ್ ಹಾಡುಗಳನ್ನು ಹಾಡುವುದು ನನ್ನ ಹವ್ಯಾಸ. ಕಿಶೋರ್ ಕುಮಾರ್ ನನ್ನ ಹೃದಯದಲ್ಲಿದ್ದಾರೆ, ಅವರು ನನ್ನ ದೇವರು. ಕೇಂದ್ರ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು’ ಅಂತಾ ನಾಗ್ ಒತ್ತಾಯಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಾಗ್ ಅವರ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅನೇಕರು ಅವರ ಹಾಡುಗಳನ್ನು ಮೆಚ್ಚಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ