ಬೆಂಗಳೂರು : ಅಪರೂಪದ ಬಗೆಯ ಹೂವಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. ಈ ಹೂವುಗಳನ್ನ ನೋಡಿದ ಜನತೆ ಅಚ್ಚರಿಗೊಂಡಿದ್ದಾರೆ. ಈ ಫೋಟೋದಲ್ಲಿರುವ ಹೂವಿನ ಹೆಸರು 'ನೀಲಕುರಿಂಜಿ ಹೂ'(Neelakurinji Flowers) ಅಂತ ಇದು ಪ್ರತಿ 12 ವರ್ಷಗಳಿಗೊಮ್ಮೆ ಅರಳುವ ಹೂವುವಾಗಿದೆ. ಈ ವಿಶೇಷ ಹೂವುಗಳು ನಮ್ಮ ರಾಜ್ಯ (ಕರ್ನಾಟಕ)ದ ಕೊಡಗು ಜಿಲ್ಲೆಯ ಮಂಡಲಪಟ್ಟಿ ಬೆಟ್ಟದಲ್ಲಿ ಅರಳಿವೆ.
ಈ ಹೂವಿನ ಫೋಟೋಗಳನ್ನ ANI ಸುದ್ದಿ ಸಂಸ್ಥೆ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, "12 ವರ್ಷಗಳಿಗೊಮ್ಮೆ ಅರಳುವ ನೀಲಕುರಿಂಜಿ ಹೂವುಗಳು ಕೊಡಗು ಜಿಲ್ಲೆಯ ಮಂಡಲಪಟ್ಟಿ ಬೆಟ್ಟದಲ್ಲಿ(Mandalapatti hill in Kodagu district) ಅರಳಿವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : TB Test : ಕೊರೋನಾದಿಂದ ಗುಣಮುಖರಾದವರಿಗೆ 'TB ಟೆಸ್ಟ್' ಗೆ ಒಳಗಾಗುವಂತೆ ರಾಜ್ಯ ಸರ್ಕಾರ ಒತ್ತಾಯ!
ಈ ಫೋಟೋಗಳನ್ನ(Photos) ಆಗಸ್ಟ್ 18 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಸುಮಾರು 10,000 ಲೈಕ್ ಬಂದಿದೆ ಮತ್ತು ಸಾವಿರಾರು ಜನ ರೀ ಟ್ವೀಟ್ ಮಾಡಿದ್ದಾರೆ. ಈ ಹೂವಿನ ಫೋಟೋಗಳು ಜನರನ್ನ ಮಂತ್ರಮುಗ್ಧರನ್ನಾಗಿಸಿದೆ. ಇತರ ಸ್ಥಳಗಳಲ್ಲಿ ಹೂವುಗಳು ಅರಳುತ್ತಿರುವುದನ್ನು ಕೆಲವರು ಹೇಗೆ ನೋಡಿದ್ದಾರೆ ಎಂಬುದನ್ನೂ ಕೂಡ ಹಂಚಿಕೊಂಡಿದ್ದಾರೆ.
Karnataka | Neelakurinji flowers, which bloom once every 12 years, seen at Mandalapatti hill in Kodagu district. pic.twitter.com/DgpZaYoFQI
— ANI (@ANI) August 18, 2021
ಇದನ್ನೂ ಓದಿ : ಬದುಕಿದ್ದರೆ ಇದೇ ಅವಧಿಯಲ್ಲಿಯೇ ನಾನು ಸಿಎಂ ಆಗ್ತೀನಿ: ಉಮೇಶ್ ಕತ್ತಿ ಹೊಸ ಬಾಂಬ್..!
ಮಲಯಾಳಂ ಮತ್ತು ತಮಿಳಿನಲ್ಲಿ ಕುರಿಂಜಿ ಅಥವಾ ನೀಲಕುರಿಂಜಿ ಎಂದು ಕರೆಯಲ್ಪಡುವ ಸ್ಟ್ರೋಬಿಲೆಂಥೆಸ್ ಕುಂಥಿಯಾನವು(Strobilanthes kunthiana) ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳಲ್ಲಿ ಕಂಡುಬರುವ ಪೊದೆಸಸ್ಯವಾಗಿದೆ. ಭಾರತಕ್ಕೆ ಪ್ರಕೃತಿಯ ಸುಂದರ ಕೊಡುಗೆ, ”ಎಂದು ಟ್ವಿಟರ್ ಬಳಕೆದಾರರು ಹೂವುಗಳ ಬಗ್ಗೆ ವಿವರಿಸಿದ್ದಾರೆ "ವಾಹ್," ಎಂದು ಇನ್ನೊಬ್ಬ ಬಳೆಕೆದಾರರು ವ್ಯಕ್ತಪಡಿಸಿದ್ದಾರೆ. ಹೀಗೆ ಸವಿಚಾರರು ಕಾಮೆಂಟ್ ಗಳು ಬಂದಿವೆ.
ಇದನ್ನೂ ಓದಿ : ಸ್ವಾತಂತ್ರ್ಯ ದಿನದಂದೇ ದುರಂತ: ಧ್ವಜಸ್ತಂಬ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ