NPS Rule Change: NPS ನಿಯಮಗಳಲ್ಲಿ ಭಾರಿ ಬದಲಾವಣೆ

NPS Rule Change - ಪಿಂಚಣಿ ನಿಧಿ ನಿಯಂತ್ರಕ PFRDA ರಾಷ್ಟ್ರೀಯ ಪಿಂಚಣಿ ಯೋಜನೆಯ (National Pension Scheme) ಪ್ರವೇಶ ವಯೋಮಿತಿಯನ್ನು 65 ರಿಂದ 70 ವರ್ಷಗಳಿಗೆ  ಹೆಚ್ಚಿಸಿದೆ. NPS ಖಾತೆಯನ್ನು 65-70 ವರ್ಷ ವಯಸ್ಸಿನಲ್ಲಿ ತೆರೆದರೆ, ಅದನ್ನು ನೀವು 75 ವರ್ಷಗಳವರೆಗೆ ನಿರ್ವಹಿಸಬಹುದು.

Written by - Nitin Tabib | Last Updated : Aug 29, 2021, 05:35 PM IST
  • NPS ನಿಯಮಗಳಲ್ಲಿ ಬದಲಾವಣೆ
  • ಯೋಜನೆಯ ಎಂಟ್ರಿ ವಯಸ್ಸು 65 ರಿಂದ 70ಕ್ಕೆ ಏರಿಕೆ.
  • ಇತರ ಯಾವ ಯಾವ ಬದಲಾವಣೆಗಳಾಗಿವೆ ತಿಳಿಯಲು ಸುದ್ದಿ ಓದಿ.
NPS Rule Change: NPS ನಿಯಮಗಳಲ್ಲಿ ಭಾರಿ ಬದಲಾವಣೆ  title=
NPS Rules Changed(File Photo)

ನವದೆಹಲಿ: NPS Rule Change - ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಪಾಲಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಪಿಂಚಣಿ ನಿಧಿ ನಿಯಂತ್ರಕ PFRDA ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಪ್ರಮುಖ ಬದಲಾವಣೆಗಳನ್ನು ಮಾಡಿದೆ. PFRDA ರಾಷ್ಟ್ರೀಯ ಪಿಂಚಣಿ ಯೋಜನೆಗೆ (National Pension Scheme) ಪ್ರವೇಶ ಮತ್ತು ನಿರ್ಗಮನ ವಯಸ್ಸಿನ ಮಿತಿಯನ್ನು ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ ಇದೀಗ, ಒಬ್ಬರು 70 ವರ್ಷ ವಯಸ್ಸಿನವರೆಗೆ ಪಿಂಚಣಿ ಯೋಜನೆಗೆ ಸೇರಬಹುದಾಗಿದೆ. ಮೊದಲು ಈ ಮಿತಿಯು 65 ವರ್ಷಗಳಾಗಿತ್ತು.

ಯಾವ ಯಾವ ಬದಲಾವಣೆಗಳಾಗಿವೆ?
PFRDAಯ ಪರಿಷ್ಕೃತ ಸುತ್ತೋಲೆಯ ಪ್ರಕಾರ, ಯಾವುದೇ ಭಾರತೀಯ ನಾಗರಿಕ ಅಥವಾ ಭಾರತದ ಸಾಗರೋತ್ತರ ನಾಗರಿಕ (Over Sea Citizen Of India) ಅವರ ವಯಸ್ಸು 65-70 ವರ್ಷ ವಯಸ್ಸಿನವರಾಗಿದ್ದರೂ ಕೂಡ ಎನ್‌ಪಿಎಸ್‌ಗೆ ಸೇರಬಹುದು. ಅವರು ಈ ಯೋಜನೆಯನ್ನು 75 ವರ್ಷಗಳವರೆಗೆ ಮುಂದುವರಿಸಬಹುದು. ಇದರೊಂದಿಗೆ ಪಿಂಚಣಿ ನಿಧಿ ನಿಯಂತ್ರಕರು ತಮ್ಮ NPS ಖಾತೆಯನ್ನು ಮುಚ್ಚಿರುವ ಚಂದಾದಾರರು ಕೂಡ ಬದಲಾದ ನಿಯಮದ ಲಾಭವನ್ನು ಪಡೆದು ಮತ್ತೆ ಹೊಸ ಪಿಂಚಣಿ ಖಾತೆಯನ್ನು ತೆರೆಯಬಹುದು. ಅಂದರೆ, 65 ವರ್ಷಗಳ ನಂತರ 70 ವರ್ಷಗಳವರೆಗೆ ಅವರು ಹೊಸ NPS ಖಾತೆಯನ್ನು ಸಹ ತೆರೆಯಬಹುದು.

ಇದನ್ನೂ ಓದಿ-Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಆಟೋ ಚಾಯಿಸ್ ನಲ್ಲಿ ಇಕ್ವಿಟಿಯಲ್ಲಿ ಗರಿಷ್ಟ ಶೇ.15 ರಷ್ಟು ಮಾತ್ರ ಹೂಡಿಕೆಗೆ ಅವಕಾಶ
65 ವರ್ಷಗಳ ನಂತರ ಚಂದಾದಾರರು NPS ಖಾತೆಯನ್ನು ತೆರೆದರೆ, ಅವರು ತಮ್ಮ ಆಟೋ ಚಾಯ್ಸ್ (Auto Choice) ಅಡಿಯಲ್ಲಿ ತನ್ನ ನಿಧಿಯ ಗರಿಷ್ಠ ಶೇ.15 ರಷ್ಟನ್ನು  ಮಾತ್ರ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು ಎಂದು PFRDA ಸ್ಪಷ್ಟಪಡಿಸಿದೆ. ವಾಸ್ತವದಲ್ಲಿ ಆಟೋ ಚಾಯ್ಸ್ ಅಡಿಯಲ್ಲಿ ಸರ್ಕಾರ್ ಸಿಕ್ಯೋರಿಟಿ ಗಳಲ್ಲಿ ಶೇ.75 ರಿಂದ ಶೇ.90 ರಷ್ಟು ಹೂಡಿಕೆ ಮಾಡಲಾಗುತ್ತದೆ. ಇದೆ ರೀತಿ ಹೂಡಿಕೆಯ ಇನ್ನೊಂದು ಆಯ್ಕೆ ಎಂದರೆ ಅದು Active Choice. ಇದರಲ್ಲಿ ಇಕ್ವಿಟಿಗಳಲ್ಲಿ ಗರಿಷ್ಟ ಶೇ.50 ರಷ್ಟು ಹೂಡಿಕೆ ಮಾಡಬಹುದು. ಉಳಿದ ಹಣ ಕಾರ್ಪೋರೆಟ್ ಬಾಂಡ್ ಅಥವಾ ಗವರ್ನಮೆಂಟ್ ಸಿಕ್ಯೋರಿಟಿಗಳಲ್ಲಿ ಜಮಾ ಮಾಡಬಹುದು.

ಇದನ್ನೂ ಓದಿ-SBI ಗ್ರಾಹಕರ ಗಮನಕ್ಕೆ! ನೀವು ATM Card ಹೊಂದಿದ್ದರೆ ಎಚ್ಚರ : ಬ್ಯಾಂಕ್ ಪ್ರಮುಖ ಮಾಹಿತಿಯೊಂದನ್ನ ನೀಡಿದೆ 

Active Choiceನಲ್ಲಿ ಹೂಡಿಕೆಯ ಹೆಚ್ಚು ಆಯ್ಕೆಗಳಿವೆ
ಚಂದಾದಾರರ ವಯಸ್ಸಿಗೆ ಅನುಗುಣವಾಗಿ, ಆಟೋ ಚಾಯ್ಸ್‌ನಲ್ಲಿನ ನಿಧಿಯ ಹಣವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮತ್ತು ನಿಗದಿತ ಪ್ರಮಾಣದಲ್ಲಿ ಠೇವಣಿ ಮಾಡಲಾಗುತ್ತದೆ. ಇದೇ ವೇಳೆ ಆಕ್ಟಿವೆ ಚಾಯ್ಸ್ ನಲ್ಲಿ, ಚಂದಾದಾರರು ಉತ್ತಮ ಹೂಡಿಕೆ ಆಯ್ಕೆಯನ್ನು ಹೊಂದಿದ್ದಾರೆ. ಪಿಂಚಣಿ ನಿಧಿಯ ಹಣವನ್ನು ಈಕ್ವಿಟಿ ಮಾರುಕಟ್ಟೆಗಳು, ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಭದ್ರತೆಗಳು ಮತ್ತು ಇತರ ಹೂಡಿಕೆ ಮಾರ್ಗಗಳಲ್ಲಿ ಠೇವಣಿ ಮಾಡಲಾಗುತ್ತದೆ.

ಇದನ್ನೂ ಓದಿ-Changes from 1 September : ಸೆ.1 ರಿಂದ PF ಬ್ಯಾಂಕ್ ಬಡ್ಡಿ, LPG ಸೇರಿದಂತೆ ಹಲವು ನಿಯಮಗಳಲ್ಲಿ ಭಾರೀ ಬದಲಾವಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

Trending News