ನವದೆಹಲಿ: ಮುಂಬರುವ ಟಿ-20 ವಿಶ್ವಕಪ್ ಟೂರ್ನಿ(T20 World Cup 2021)ಗೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್(Shikhar Dhawan) ವಿಶ್ರಾಂತಿ ಪಡೆಯಲಿದ್ದಾರೆ. ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಮಾಧ್ಯಮಗಳಿಗೆ ದೃಢಪಡಿಸಿದ್ದು, ಶಿಖರ್ ಧವನ್ ಗೆ ಈ ಸಮಯದಲ್ಲಿ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಯುಎಇಯಲ್ಲಿ ಸೆ.19 ರಿಂದ ಪುನರಾರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಹೊಂದಿರುವ ಧವನ್(Shikhar Dhawan) ಅವರನ್ನು ಬುಧವಾರ ಟಿ-20 ವಿಶ್ವಕಪ್ ಗೆ ಘೋಷಿಸಿದ 15 ಜನರ ತಂಡದಿಂದ ಕೈಬಿಡಲಾಗಿದೆ. ‘ಶಿಖರ್ ಧವನ್ ನಮಗೆ ಬಹಳ ಮುಖ್ಯ ಆಟಗಾರ. ಅವರು ಶ್ರೀಲಂಕಾ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಯಾವ ವಿಚಾರವಾಗಿ ಅವರನ್ನು ಕೈಬಿಡಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಟೀಂ ಇಂಡಿಯಾಗೆ ಅವರ ಅವಶ್ಯಕತೆ ತುಂಬಾ ಇದೆ, ಆದರೆ ಈ ಸಮಯದಲ್ಲಿ ಧವನ್ಗೆ ಸ್ವಲ್ಪ ವಿಶ್ರಾಂತಿ ನೀಡಬೇಕಾಗಿದೆ’ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಸಾವಿರ ಪಟ್ಟು ಹೆಚ್ಚಾದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯ..!
The Squad is Out! 🙌
What do you make of #TeamIndia for ICC Men's T20 World Cup❓ pic.twitter.com/1ySvJsvbLw
— BCCI (@BCCI) September 8, 2021
ಟೀಂ ಇಂಡಿಯಾದಲ್ಲಿ ಈಗ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಕನ್ನಡಿಗ ಕೆ.ಎಲ್.ರಾಹುಲ್(KL Rahul) ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಮೂವರು ಆರಂಭಿಕ ಆಟಗಾರರಿದ್ದಾರೆ. ಆದಾಗ್ಯೂ ನಾಯಕ ವಿರಾಟ್ ಕೊಹ್ಲಿ ರೋಹಿತ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
‘ನಮ್ಮಲ್ಲಿ ಮೂವರು ಆರಂಭಿಕ ಆಟಗಾರರಿದ್ದಾರೆ. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ಇಶಾನ್ ಕಿಶನ್ ಅವರು ಆರಂಭಿಕರಾಗಿ ಬ್ಯಾಟಿಂಗ್ ಮಾಡಬಹುದು ಜೊತೆಗೆ ಮಧ್ಯಮ ಕ್ರಮಾಂಕಕ್ಕೆ ಹೊಂದಿಕೊಳ್ಳಬಹುದು. ಕಿಶನ್ ನಮಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತಿದ್ದಾರೆ. ಅಗತ್ಯವಿದ್ದಲ್ಲಿ ಅವರು ಏಕದಿನ ಪಂದ್ಯಗಳಲ್ಲಿ (ಶ್ರೀಲಂಕಾದಲ್ಲಿ) ಆಡಿದಂತೆ ಆಡಬಹುದು. ಅವರು ಮಧ್ಯಮ ಕ್ರಮಾಂಕದಲ್ಲಿಯೂ ಆಡಬಹುದು. ಏಕೆಂದರೆ ಅವರು ಉತ್ತಮ ಆಟಗಾರರಾಗಿದ್ದಾರೆ’ ಅಂತಾ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: England vs India, 4th Test: ಭಾರತದ ಬೌಲಿಂಗ್ ಕೈಚಳಕಕ್ಕೆ ಇಂಗ್ಲೆಂಡ್ ತತ್ತರ,157 ರನ್ ಗಳ ಜಯ
ಕೊಹ್ಲಿ ಆರಂಭಿಕರಾಗಿ ಬ್ಯಾಟಿಂಗ್ ಮಾಡಲು ಬಯಸಿದರೆ ಅದು ತಂಡದ ನಿರ್ವಹಣೆಗೆ ಬಿಟ್ಟಿದ್ದು. ಆದರೆ ನಾವು ಈವರೆಗೆ ಮೂವರು ಆರಂಭಿಕರನ್ನು ಆಯ್ಕೆ ಮಾಡಿದ್ದೇವೆ. ವಿರಾಟ್ ತಂಡಕ್ಕೆ ಆಸ್ತಿ. ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದಾಗ ತಂಡವು ಉತ್ತಮ ಸ್ಥಿತಿಯಲ್ಲಿರುತ್ತದೆ. ಮಧ್ಯಮ ಕ್ರಮಾಂಕದ ಟಿ-20 ಬ್ಯಾಟಿಂಗ್ನಲ್ಲಿ ಅವರು ಅದ್ಭುತ ದಾಖಲೆ ಹೊಂದಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ತಂಡದಲ್ಲಿ ಬದಲಾವಣೆಗಳಾಗಬಹುದು ಎಂದು ಅವರು ಹೇಳಿದ್ದಾರೆ.
ಶಿಖರ್ ಧವನ್ ಮತ್ತು ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ(Ayesha Mukherjee) 8 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ವಿಚ್ಛೇದನದ ಮೂಲಕ ಧವನ್ಅವರು ಆಯೇಷಾ ಮುಖರ್ಜಿಯಿಂದ ದೂರವಾಗಿದ್ದಾರೆ. ಈ ಬಗ್ಗೆ ಆಯೇಷಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಹೀಗಾಗಿ ಧವನ್ ತಮ್ಮ ಕೌಟುಂಬಿಕ ವಿಚಾರವಾಗಿ ಬೇಸರದಲ್ಲಿದ್ದಾರೆ. ಇದರಿಂದ ಹೊರಬರಲು ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.