WhatsApp Update- ಮೆಸೆಂಜರ್ ರೂಮ್ಸ್ ಶಾರ್ಟ್ಕಟ್ ವೈಶಿಷ್ಟ್ಯವನ್ನು ಕೈಬಿಟ್ಟ ವಾಟ್ಸಾಪ್

ವಾಟ್ಸಾಪ್ ಮೆಸೆಂಜರ್ ರೂಮ್ ಶಾರ್ಟ್‌ಕಟ್ ಅನ್ನು ಮೊದಲು ಮೇ 2020 ರಲ್ಲಿ ಪರಿಚಯಿಸಲಾಯಿತು. ಮೆಸೆಂಜರ್ ರೂಮ್ ಶಾರ್ಟ್‌ಕಟ್ ಅನ್ನು ಚಾಟ್ ಶೇರ್ ಶೀಟ್‌ಗೆ ಸೇರಿಸಿದ ಸುಮಾರು ಒಂದು ವರ್ಷದ ನಂತರ, WhatsApp ಈಗ ಶಾರ್ಟ್‌ಕಟ್ ಅನ್ನು ತೊಡೆದುಹಾಕಲು ಯೋಜಿಸುತ್ತಿದೆ.  

Written by - Yashaswini V | Last Updated : Sep 22, 2021, 11:10 AM IST
  • ವಾಟ್ಸಾಪ್ ಈಗ ಮೆಸೆಂಜರ್ ರೂಮ್ ಶಾರ್ಟ್ಕಟ್ ಅನ್ನು ಕೈ ಬಿಡಲು ಮುಂದಾಗಿದೆ
  • ಮೆಸೆಂಜರ್ ರೂಮ್‌ಗಳ ಶಾರ್ಟ್‌ಕಟ್ ಬಳಕೆದಾರರಿಗೆ ಮೆಸೆಂಜರ್‌ನಲ್ಲಿ ವೀಡಿಯೊ ಕರೆಗಳಿಗಾಗಿ ಗುಂಪನ್ನು ರಚಿಸಲು ಅನುಮತಿಸುತ್ತದೆ
  • ಈ ವೈಶಿಷ್ಟ್ಯವು WhatsApp ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ
WhatsApp Update- ಮೆಸೆಂಜರ್ ರೂಮ್ಸ್ ಶಾರ್ಟ್ಕಟ್ ವೈಶಿಷ್ಟ್ಯವನ್ನು ಕೈಬಿಟ್ಟ ವಾಟ್ಸಾಪ್  title=
Whatsapp New Update

ನವದೆಹಲಿ: WhatsApp Update- ಪ್ರಮುಖ ಬೆಳವಣಿಗೆಯಲ್ಲಿ, ಫೇಸ್‌ಬುಕ್ ಒಡೆತನದ ಇನ್‌ಸ್ಟಂಟ್ ವಾಟ್ಸಾಪ್ ಈಗ ತನ್ನ ಜನಪ್ರಿಯ ವೈಶಿಷ್ಟ್ಯಗಳಲ್ಲಿ ಒಂದನ್ನು ತೆಗೆದುಹಾಕಿದೆ. ವಾಟ್ಸಾಪ್ ಮೆಸೆಂಜರ್ ರೂಮ್ ಶಾರ್ಟ್‌ಕಟ್ (Messenger Rooms shortcut)  ವೈಶಿಷ್ಟ್ಯವನ್ನು ತೆಗೆದುಹಾಕಿದೆ. ಇದನ್ನು ಕಳೆದ ವರ್ಷ (2020) ಮೇ ತಿಂಗಳಿನಲ್ಲಿ ಆಪ್‌ಗೆ ಸೇರಿಸಲಾಗಿತ್ತು. ಮೆಸೆಂಜರ್ ರೂಮ್ ಶಾರ್ಟ್‌ಕಟ್ ಅನ್ನು ಚಾಟ್ ಶೇರ್ ಶೀಟ್‌ಗೆ ಸೇರಿಸಿದ ಸುಮಾರು ಒಂದು ವರ್ಷದ ನಂತರ, WhatsApp ಈಗ ಶಾರ್ಟ್‌ಕಟ್ ಅನ್ನು ಕೈಬಿಡಲು ಚಿಂತಿಸಿದೆ. ಮೆಸೆಂಜರ್ ರೂಮ್‌ಗಳ ಶಾರ್ಟ್‌ಕಟ್ ಬಳಕೆದಾರರಿಗೆ ಮೆಸೆಂಜರ್‌ನಲ್ಲಿ ವೀಡಿಯೊ ಕರೆಗಳಿಗಾಗಿ ಗುಂಪನ್ನು ರಚಿಸಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು WhatsApp ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ನೀವು ಶಾರ್ಟ್ಕಟ್ ಅನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮನ್ನು ಮೆಸೆಂಜರ್ಗೆ ನಿರ್ದೇಶಿಸಲಾಗುತ್ತದೆ. ನಿರೀಕ್ಷೆಯಂತೆ, ವೈಶಿಷ್ಟ್ಯವು ಅದರ ಮಿತಿಗಳಿಂದಾಗಿ ಸಾಕಷ್ಟು ಮನ್ನಣೆ ಪಡೆಯಲಿಲ್ಲ. ಇದು ಫೇಸ್‌ಬುಕ್‌ನಲ್ಲಿರುವ ಜನರಿಗೆ ಮಾತ್ರ ಉಪಯುಕ್ತವಾಗಿದೆ. ಅಲ್ಲದೆ, ವಾಟ್ಸಾಪ್ ಈಗಾಗಲೇ ಅದನ್ನು ಹೊಂದಿರುವಾಗ ಪ್ರತ್ಯೇಕ ವೀಡಿಯೊ ಕರೆ ಮಾಡುವ ವೈಶಿಷ್ಟ್ಯದ ಅವಶ್ಯಕತೆಯಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಮೆಸೆಂಜರ್ ಶಾರ್ಟ್ಕಟ್ ಅನ್ನು ತೆಗೆದುಹಾಕುವ ಯೋಜನೆಯನ್ನು ವಾಟ್ಸಾಪ್ (WhatsApp) ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ವಾಟ್ಸಾಪ್ ಫೀಚರ್ಸ್ ಟ್ರ್ಯಾಕರ್ WABetaInfo ವೆಬ್‌ಸೈಟ್‌ ಈ ವರದಿಯನ್ನು ಹಂಚಿಕೊಂಡಿದೆ. ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ವಾಟ್ಸಾಪ್ ಬೀಟಾದಲ್ಲಿನ ಕರೆ ವಿಭಾಗವನ್ನು ತನ್ನ ಚಾಟ್ ಶೇರ್ ಶೀಟ್ ಮತ್ತು ಕರೆಗಳ ವಿಭಾಗದಿಂದ ವಾಟ್ಸಾಪ್ ಅಂತಿಮವಾಗಿ ತೆಗೆದುಹಾಕುತ್ತಿದೆ ಎಂದು ವರದಿ ಹೇಳುತ್ತದೆ. ಈ ವೈಶಿಷ್ಟ್ಯವನ್ನು ಫೇಸ್‌ಬುಕ್ ಒಂದು ವರ್ಷದ ಹಿಂದೆಯೇ ಪರಿಚಯಿಸಿತ್ತು. ಇದು ಫೇಸ್‌ಬುಕ್‌ನಲ್ಲಿ ಗ್ರೂಪ್ ಕರೆಗೆ ಸೇರಲು 50 ಜನರು ಭಾಗವಹಿಸಲು ಅವಕಾಶ ನೀಡುತ್ತದೆ. 

ಇದನ್ನೂ ಓದಿ- WhatsAppನಲ್ಲಿನ ಹೊಸ ಹಗರಣವು ನಿಮ್ಮ ಬ್ಯಾಂಕ್ ಖಾತೆಯನ್ನೇ ಖಾಲಿ ಮಾಡುತ್ತೆ ಹುಷಾರ್!

ವಾಟ್ಸಾಪ್ (WhatsApp) ಸಾಮಾನ್ಯವಾಗಿ ಬಳಕೆದಾರರಿಂದ ಹೆಚ್ಚು ಮನ್ನಣೆ ಪಡೆಯದ ವೈಶಿಷ್ಟ್ಯಗಳನ್ನು ತೆಗೆದುಹಾಕುತ್ತದೆ ಎಂದು ವರದಿ ಹೇಳುತ್ತದೆ. ವಾಟ್ಸಾಪ್ ತಮ್ಮ ಬಳಕೆದಾರರು ಯಾವ ವೈಶಿಷ್ಟ್ಯಗಳನ್ನು ಬಳಸುತ್ತಾರೆ ಎಂಬುದನ್ನು ಆಗಾಗ್ಗೆ ಪರಿಶೀಲಿಸುತ್ತಲೇ ಇರುತ್ತದೆ. ಯಾವುದೇ ವೈಶಿಷ್ಟ್ಯವು ಯಶಸ್ಸನ್ನು ಸಾಧಿಸದಿದ್ದರೆ, ಅದನ್ನು ಮಾರ್ಪಡಿಸುವ ಕ್ಷಣ ಇದು ಎಂದರ್ಥ. ಬಹುಶಃ ಮುಂದಿನ ನವೀಕರಣಗಳಿಗೆ ಉತ್ತಮ ಬದಲಿಯಾಗಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಟ್ಸಾಪ್ ಮೆಸೆಂಜರ್ ರೂಮ್ ಆಯ್ಕೆಯನ್ನು (Messenger Rooms shortcut)  ತೆಗೆಯಲು ಆರಂಭಿಸಿದೆ. ಆದರೆ ನೀವು ಅದನ್ನು ನಿಮ್ಮ ಆಪ್ ನಲ್ಲಿ ಈಗಲೂ ಕಂಡುಕೊಂಡರೆ, ನೀವು ಐಒಎಸ್ 2.21.190.11 ಗಾಗಿ ವಾಟ್ಸಾಪ್ ಬೀಟಾ ಮತ್ತು ಆಂಡ್ರಾಯ್ಡ್ 2.21.19.15 ಗೆ ವಾಟ್ಸಾಪ್ ಬೀಟಾಗೆ ಅಪ್‌ಗ್ರೇಡ್ ಮಾಡಬೇಕಾಗಬಹುದು. ಮೆಸೇಜಿಂಗ್ ಆಪ್‌ನ ಬೀಟಾ ಆವೃತ್ತಿಗಳಲ್ಲಿ ಬದಲಾವಣೆಗಳು ಮೊದಲು ಗೋಚರಿಸುತ್ತವೆ, ಪೋಸ್ಟ್ ಮಾಡಿದ ನಂತರ ಬೀಟಾ-ಅಲ್ಲದ ಬಳಕೆದಾರರಿಗೆ ವಾಟ್ಸಾಪ್ ಐಕಾನ್ ಅನ್ನು ತೆಗೆದುಹಾಕಬಹುದು ಎಂದೂ ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ- ಈಗ ಇನ್ನೂ ಹೆಚ್ಚು ಜನ ವೀಕ್ಷಿಸಬಹುದು ನಿಮ್ಮ whatsaap ಸ್ಟೇಟಸ್, ಬಂದಿದೆ ಹೊಸ ಫೀಚರ್

ವಾಟ್ಸಾಪ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಇನ್ನೊಂದು ವೈಶಿಷ್ಟ್ಯವು ನಿಮ್ಮ ಗ್ರೂಪ್ ಐಕಾನ್ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಸಾಕಷ್ಟು ಸಂಬಂಧ ಹೊಂದಿದೆ. Wabetainfo ಸಂದೇಶ ಕಳುಹಿಸುವಿಕೆ ಆಪ್ ಗ್ರೂಪ್ ಐಕಾನ್ ಎಡಿಟರ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ವರದಿ ಆಗಿದೆ. ಇದು ಬಳಕೆದಾರರಿಗೆ ಗ್ರೂಪ್ ಐಕಾನ್‌ನ ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ, ಬಳಕೆದಾರರು ಫೀಚರ್ ಅನ್ನು ಅಭಿವೃದ್ಧಿಪಡಿಸಿದ ನಂತರ ಎಮೋಜಿಗಳು ಮತ್ತು ಸ್ಟಿಕ್ಕರ್‌ಗಳನ್ನು ಗ್ರೂಪ್ ಐಕಾನ್‌ನಲ್ಲಿ ಇರಿಸಬಹುದು. ವೈಶಿಷ್ಟ್ಯವು ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ. ಈ ಕುರಿತಂತೆ ಮೆಸೇಜಿಂಗ್ ಅಪ್ಲಿಕೇಶನ್ ಇನ್ನೂ ಅಧಿಕೃತ ದೃಢೀಕರಣವನ್ನು ಮಾಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News