UPI Payment Without Internet: ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಮಾಡಲು ಸುಲಭ ಮಾರ್ಗ, ಒಂದೇ ಕ್ಲಿಕ್‌ನಲ್ಲಿ ಮಾಡಿ ಹಲವು ಕೆಲಸ

UPI Payment Without Internet: ಹಲವು ಸಂದರ್ಭಗಳಲ್ಲಿ ನಾವು ಕೈಯಲ್ಲಿ ಹಣ ಇಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಬಹುದು ಎಂಬ ಧೈರ್ಯದಲ್ಲಿ ಏನಾದರೂ ಖರೀದಿಸುತ್ತೇವೆ. ಆದರೆ ಬಹುತೇಕ ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ನೆಟ್‌ವರ್ಕ್ ನಿಧಾನವಾಗಬಹುದು ಅಥವಾ ಹಲವು ವೇಳೆ ಇಂಟರ್ನೆಟ್ ಖಾಲಿಯೂ ಆಗಿರಬಹುದು. ಈ ವೇಳೆ ಯುಪಿಐ ಪಾವತಿ ಮಾಡುವುದು ಕಷ್ಟವಾಗುತ್ತದೆ. ಆದರೆ ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Sep 23, 2021, 08:07 AM IST
  • ಯುಪಿಐ ಪಾವತಿಯನ್ನು ಇಂಟರ್ನೆಟ್ ಇಲ್ಲದೆಯೂ ಮಾಡಬಹುದು
  • *99# USSD ಕೋಡ್ ಅನ್ನು ಫೋನಿನ ಡಯಲರ್‌ನಲ್ಲಿ ಬಳಸಬೇಕು
  • ಸ್ಮಾರ್ಟ್ಫೋನ್ ಬಳಕೆದಾರರಿಗೆ, ಇದು *99# ತುರ್ತು ವೈಶಿಷ್ಟ್ಯವಾಗಿದೆ
UPI Payment Without Internet: ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಮಾಡಲು ಸುಲಭ ಮಾರ್ಗ, ಒಂದೇ ಕ್ಲಿಕ್‌ನಲ್ಲಿ ಮಾಡಿ ಹಲವು ಕೆಲಸ title=
UPI Payment Without Internet: ಮೊಬೈಲ್ ಡೇಟಾ ಮುಗಿದಿದೆಯೇ? ಇಂಟರ್ನೆಟ್ ಇಲ್ಲದೆ ಈ ರೀತಿ ಮಾಡಿ ಯುಪಿಐ ಪೇಮೆಂಟ್

UPI Payment Without Internet: ಡಿಜಿಟಲ್ ಯುಗದಲ್ಲಿ ಎಲ್ಲಾ ಸಂದರ್ಭಗಳಲ್ಲೂ ನಮ್ಮ ಕೈ ಯಲ್ಲಿ ಹಣ ಇರಲೇಬೇಕು ಎಂಬ ಅಗತ್ಯವಿಲ್ಲ. ಎಲ್ಲೆಡೆ ಸುಲಭವಾಗಿ ಯುಪಿಐ ಪೇಮೆಂಟ್ ಮಾಡಬಹುದು. ಆದರೆ ಯುಪಿಐ ಪಾವತಿ  ಮಾಡಲು ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ, ಏಕೆಂದರೆ ಆನ್‌ಲೈನ್‌ನಲ್ಲಿ ವಹಿವಾಟು ಮಾಡಲಾಗುತ್ತದೆ. ನೀವು ಇಂಟರ್ನೆಟ್ ಇಲ್ಲದ ಸ್ಥಳದಲ್ಲಿದ್ದರೆ ಅಥವಾ ನೆಟ್‌ವರ್ಕ್ ಸ್ಲೋ ಇದ್ದರೆ ಯುಪಿಐ ಪೇಮೆಂಟ್ ಕಷ್ಟವಾಗಬಹುದು.  ಆದರೆ ನೀವು ಇಂಟರ್ನೆಟ್ ಇಲ್ಲದೆ ಯುಪಿಐ ಅನ್ನು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? ನೀವು ಮಾಡಬೇಕಾಗಿರುವುದು ನಿಮ್ಮ ಫೋನಿನ ಡಯಲರ್‌ನಲ್ಲಿ *99# USSD ಕೋಡ್ ಅನ್ನು ಬಳಸುವುದು.

ಈ *99# ಸೇವೆಯನ್ನು ಸ್ಮಾರ್ಟ್ ಫೋನ್ ಅಲ್ಲದ ಬಳಕೆದಾರರು ಸೇರಿದಂತೆ ಎಲ್ಲಾ ಮೊಬೈಲ್ ಫೋನ್ ಬಳಕೆದಾರರಿಗಾಗಿ ಭಾರತದಲ್ಲಿ ಪರಿಚಯಿಸಲಾಯಿತು. ಸ್ಮಾರ್ಟ್ಫೋನ್ ಬಳಕೆದಾರರಿಗೆ, ಈ *99# ತುರ್ತು ಸೌಲಭ್ಯವಾಗಿದ್ದು, ಅವರು ಇಂಟರ್ನೆಟ್ ಹೊಂದಿಲ್ಲದಿದ್ದರೂ ಯಾವುದೇ UPI (UPI Payment Without Internet) ಸೌಲಭ್ಯವನ್ನು ಪ್ರವೇಶಿಸುವ ಏಕೈಕ ಮಾರ್ಗವಾಗಿದೆ.

ಇದನ್ನೂ ಓದಿ- IRCTC iPay: ಐಆರ್‌ಸಿಟಿಸಿ ಪಾವತಿ ಗೇಟ್‌ವೇ ಬಳಸುವುದು ಹೇಗೆ? ಅದರ ಪ್ರಯೋಜನಗಳೇನು?

ಇಂಟರ್ನೆಟ್ ಇಲ್ಲದೆ UPI ಪಾವತಿ ಮಾಡುವುದು ಹೇಗೆ (How to make UPI Payment without Internet) ?
1. ನಿಮ್ಮ ಫೋನಿನಲ್ಲಿ ಡಯಲರ್ ತೆರೆಯಿರಿ ಮತ್ತು *99#ಎಂದು ಟೈಪ್ ಮಾಡಿ. ಮುಂದೆ 'ಕಾಲ್' ಬಟನ್ ಮೇಲೆ ಟ್ಯಾಪ್ ಮಾಡಿ
2. ಹಣವನ್ನು ಕಳುಹಿಸಲು ಒಂದನ್ನು ಒಳಗೊಂಡಂತೆ ಹಲವಾರು ಆಯ್ಕೆಗಳೊಂದಿಗೆ ಒಂದು ಮೆನು ಪಾಪ್ ಅಪ್ ಅನ್ನು ನೀವು ನೋಡುತ್ತೀರಿ. '1' ಅನ್ನು ಟ್ಯಾಪ್ ಮಾಡಿ ಮತ್ತು ನಂತರ ಕಳುಹಿಸು ಅನ್ನು ಟ್ಯಾಪ್ ಮಾಡಿ.
3. ಮುಂದೆ, ಪಾವತಿಯನ್ನು ಸ್ವೀಕರಿಸುವ ವ್ಯಕ್ತಿಯಿಂದ ನಿಮ್ಮಲ್ಲಿರುವ ಮಾಹಿತಿಯನ್ನು ಆಯ್ಕೆ ಮಾಡಿ - ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ನಂತರ ಕಳುಹಿಸು ಅನ್ನು ಟ್ಯಾಪ್ ಮಾಡಿ.
4. ವ್ಯಾಪಾರಿಯ UPI ಖಾತೆಗೆ (UPI Payment) ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಳುಹಿಸು ಅನ್ನು ಟ್ಯಾಪ್ ಮಾಡಿ.
5. ನೀವು ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು ನಂತರ ಕಳುಹಿಸು ಆಯ್ಕೆಯನ್ನು ಒತ್ತಿರಿ.
6. ಅದರ ನಂತರ ನೀವು ರಿಮಾರ್ಕ್ ಬರೆಯಬಹುದು. ಆದ್ದರಿಂದ ನೀವು ಯಾಕೆ ಪಾವತಿ ಮಾಡಿದ್ದೀರಿ ಎಂಬುದರ ಬಗ್ಗೆ ನಿಮಗೆ ಬೇಕಾದಾಗ ಮಾಹಿತಿ ಸಿಗಲಿದೆ. ಉದಾಹರಣೆಗೆ, ಪಡಿತರ.
7. ವಹಿವಾಟು ಪೂರ್ಣಗೊಳಿಸಲು ನಿಮ್ಮ UPI ಪಿನ್ ನಮೂದಿಸಿ.

ಇದನ್ನೂ ಓದಿ- Card Tokenisation Rules: ಆರ್‌ಬಿಐ ಕಾರ್ಡ್ ಟೋಕನೈಸೇಶನ್ ನಿಯಮ, ಜನವರಿ 1 ರಿಂದ ಬದಲಾಗಲಿದೆ Card Payment Method

*99# ಸೇವೆಯೊಂದಿಗೆ UPI ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
1. ಡಯಲರ್ ತೆರೆಯಿರಿ ಮತ್ತು *99# ಎಂದು ನಮೂದಿಸಿ.
2. ಮೆನುವಿನಿಂದ ಆಯ್ಕೆ 4 ಅನ್ನು ಆಯ್ಕೆ ಮಾಡಿ.
3. ಸಂಖ್ಯೆ 7 ಅನ್ನು ಟೈಪ್ ಮಾಡಿ ಮತ್ತು UPI ನಿಂದ ನೋಂದಣಿ ರದ್ದುಗೊಳಿಸಲು ಕಳುಹಿಸು ಅನ್ನು ಟ್ಯಾಪ್ ಮಾಡಿ.
4. ನೀವು UPI ನೊಂದಿಗೆ ನೋಂದಣಿ ರದ್ದುಗೊಳಿಸಲು ಬಯಸುತ್ತೀರೆಂದು ಖಚಿತಪಡಿಸಲು 1 ಒತ್ತಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News