ಜಾತಿ ಗಣತಿಗೆ ಬಿಹಾರ್ ಸಿಎಂ ನಿತೀಶ್ ಕುಮಾರ್ ಆಗ್ರಹ, ಶೀಘ್ರದಲ್ಲೇ ಸರ್ವಪಕ್ಷ ಸಭೆ

ಜಾತಿ ಗಣತಿಯು ಒಂದು ನ್ಯಾಯಸಮ್ಮತವಾದ ಬೇಡಿಕೆಯಾಗಿದ್ದು, ಅವರು ಈ ವಿಷಯದಲ್ಲಿ ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆಯುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಹೇಳಿದ್ದಾರೆ.

Written by - Zee Kannada News Desk | Last Updated : Sep 26, 2021, 05:27 PM IST
  • ಜಾತಿ ಗಣತಿಯು ಒಂದು ನ್ಯಾಯಸಮ್ಮತವಾದ ಬೇಡಿಕೆಯಾಗಿದ್ದು, ಅವರು ಈ ವಿಷಯದಲ್ಲಿ ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆಯುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಜಾತಿ ಗಣತಿಗೆ ಬಿಹಾರ್ ಸಿಎಂ ನಿತೀಶ್ ಕುಮಾರ್ ಆಗ್ರಹ, ಶೀಘ್ರದಲ್ಲೇ ಸರ್ವಪಕ್ಷ ಸಭೆ  title=

ನವದೆಹಲಿ: ಜಾತಿ ಗಣತಿಯು ಒಂದು ನ್ಯಾಯಸಮ್ಮತವಾದ ಬೇಡಿಕೆಯಾಗಿದ್ದು, ಅವರು ಈ ವಿಷಯದಲ್ಲಿ ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆಯುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

'ಜಾತಿ ಗಣತಿಯು ನ್ಯಾಯಸಮ್ಮತವಾದ ಬೇಡಿಕೆಯಾಗಿದೆ ಮತ್ತು ಇದು ಇಂದಿನ ಅಗತ್ಯವಾಗಿದೆ.ಇದು ಅಭಿವೃದ್ಧಿಯ ಪರವಾಗಿದೆ ಮತ್ತು ಹಿಂದುಳಿದ ಜಾತಿಗಳಿಗೆ ಉದ್ದೇಶಿತ ಕಲ್ಯಾಣ ನೀತಿಗಳನ್ನು ರೂಪಿಸಲು ನೀತಿ ನಿರೂಪಕರಿಗೆ ಸಹಾಯ ಮಾಡುತ್ತದೆ. ಜಾತಿ ಗಣತಿ ನಡೆಯಬೇಕು.ನಾವು ಬಿಹಾರದಲ್ಲಿ ಈ ವಿಷಯದ ಕುರಿತು ಸರ್ವಪಕ್ಷ ಸಭೆ ನಡೆಸುತ್ತೇವೆ' ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ ಬಿಹಾರ್ ಸಿಎಂ ನಿತೀಶ್ ಕುಮಾರ್, ಅವರ ಬೇಡಿಕೆ ಏನು ಗೊತ್ತಾ!

ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್‌ನಲ್ಲಿ ಗುರುವಾರ ಕೇಂದ್ರವು ಜಾತಿ ಗಣತಿಯನ್ನು ತಳ್ಳಿಹಾಕಿದ ನಂತರ ಕುಮಾರ್ ಅವರ ಈ ಹೇಳಿಕೆ ಬಂದಿದೆ.ಹಿಂದುಳಿದ ವರ್ಗಗಳ ಜಾತಿ ಗಣತಿಯು 'ಆಡಳಿತಾತ್ಮಕವಾಗಿ ಕಷ್ಟಕರ ಮತ್ತು ತೊಡಕಾಗಿದೆ" ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಮತ್ತು ಅಂತಹ ಮಾಹಿತಿಯನ್ನು ಜನಗಣತಿಯ ವ್ಯಾಪ್ತಿಯಿಂದ ಹೊರಗಿಡುವುದು ಪ್ರಜ್ಞಾಪೂರ್ವಕ ನೀತಿ ನಿರ್ಧಾರ ಎಂದು ಹೇಳಿದೆ.

ಈ ಮೊದಲು, ನಿತೀಶ್ ಕುಮಾರ್ (CM Nitish Kumar) ನೇತೃತ್ವದ ಬಿಹಾರದ ಸರ್ವಪಕ್ಷ ನಿಯೋಗವು ಜಾತಿ ಗಣತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು.ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, 2011 ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯಲ್ಲಿ ಜಾತಿ ಗಣತಿ ದೋಷಗಳಿಂದ ಕೂಡಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ದೇಶ ಮತ್ತು ಪಕ್ಷದ ಒಳಿತಿಗಾಗಿ ನಾನು ಸರಿ ಎನಿಸಿದ್ದನ್ನು ಮಾತನಾಡುತ್ತಲೇ ಇರುತ್ತೇನೆ- ಪವನ್ ವರ್ಮಾ

ಏತನ್ಮಧ್ಯೆ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಅವರು ದೇಶದ ಜನಗಣತಿಯ ವಿಚಾರವಾಗಿ ದೇಶದ 33 ಉನ್ನತ ನಾಯಕರಿಗೆ ಪತ್ರ ಬರೆದಿದ್ದಾರೆ, ಐಎಎನ್ಎಸ್ ವರದಿಯ ಪ್ರಕಾರ ಮೋದಿ ಸರ್ಕಾರ ಜಾತಿ ಗಣತಿ ಮಾಡಲು ನಿರಾಕರಿಸಿದೆ.

'ಕೇಂದ್ರ ಸರ್ಕಾರವು ಜಾತಿ ಆಧಾರಿತ ಜನಗಣತಿಯ ಮೇಲೆ ನಕಾರಾತ್ಮಕ ಮಾರ್ಗವನ್ನು ಆರಿಸಿಕೊಂಡಿದೆ.ಸಮಾಜದ ಕೊನೆಯ ಸಾಲಿನಲ್ಲಿ ಕುಳಿತಿರುವ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ದೇಶದಲ್ಲಿ ಇದು ಅಗತ್ಯವಾಗಿದೆ. ಏಕೆ ಎಂಬುದಕ್ಕೆ ಬಿಜೆಪಿಗೆ ಒಂದೇ ಒಂದು ತಾರ್ಕಿಕ ಕಾರಣವಿಲ್ಲ. ಇದು ಜಾತಿ ಆಧಾರಿತ ಜನಗಣತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಬಾಯ್ಲರ್ ಸ್ಫೋಟಗೊಂಡು ಮೂವರ ಸಾವು

ಈಗಾಗಲೇ ತೇಜಸ್ವಿ ಯಾದವ್ ಅವರು ಸೊನಿಯಾ ಗಾಂಧಿ, ಪ್ರಕಾಶ್ ಸಿಂಗ್ ಬಾದಲ್, ಅರವಿಂದ ಕೇಜ್ರಿವಾಲ್, ಶರದ್ ಪವಾರ್, ಓಂ ಪ್ರಕಾಶ್ ಚೌತಾಳ, ವೈಎಸ್ ಜಗನ್ ಮೋಹನ್ ರೆಡ್ಡಿ, ಎಂ.ಕೆ ಸ್ಟಾಲಿನ್, ಫಾರೂಕ್ ಅಬ್ದುಲ್ಲಾ, ದೀಪಂಕರ್ ಭಟ್ಟಾಚಾರ್ಯ, ಹೇಮಂತ್ ಸೊರೆನ್, ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಕೆ. ಚಂದ್ರಶೇಖರ್ ರಾವ್, ಅಶೋಕ್ ಗೆಹ್ಲೋಟ್, ಚರಣಜೀತ್ ಸಿಂಗ್ ಚನ್ನಿ, ಓ ಪನ್ನೀರ್ ಸೆಲ್ವಂ, ಚಂದ್ರಶೇಖರ್ ಆಜಾದ್, ಅಖಿಲೇಶ್ ಯಾದವ್, ಮಾಯಾವತಿ, ಸೀತಾರಾಂ ಯೆಚೂರಿ, ಡಿ ರಾಜ, ನವೀನ್ ಪಟ್ನಾಯಕ್, ನಿತೀಶ್ ಕುಮಾರ್, ಜಿತನ್ ರಾಮ್ ಮಾಂಜಿ, ಮುಖೇಶ್ ಸಹಾನಿ, ಚಿರಾಗ್ ಪಾಸ್ವಾನ್, ಓಂ ಪ್ರಕಾಶ್ ರಾಜವೀರ್, ಅಖ್ತರುಲ್ ಇಮಾಮ್, ಜಯಂತ್ ಚೌಧರಿ, ಮೌಲಾನಾ ಬದ್ರುದ್ದೀನ್, ಪಿ ವಿಜಯನ್, ಭೂಪೇಶ್ ಬಘೇಲ್ ಮತ್ತು ಮೆಹಬೂಬ ಮುಫ್ತಿ ಅವರಿಗೆ ಪತ್ರ ಬರೆದಿದ್ದಾರೆ.

 

Trending News