ನವದೆಹಲಿ: ಸೋಷಿಯಲ್ ಮೀಡಿಯಾ(Social Media)ದಲ್ಲಿ ಪ್ರತಿದಿನವೂ ಅನೇಕ ವೈರಲ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಬಹುತೇಕವು ನಗೆಯುಕ್ಕಿಸುವ ವಿಡಿಯೋಗಳಾಗಿರುತ್ತವೆ. ಕೆಲವು ವಿಡಿಯೋಗಳನ್ನು ನೋಡಿದರೆ ಸಾಕು ಮೈಜುಂ ಎನ್ನಿಸುವಂತಿರುತ್ತವೆ. ಅದೇ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ. ಈ ವಿಡಿಯೋದಲ್ಲಿ ದೈತ್ಯ ಹೆಬ್ಬಾವು ನೋಡುಗರ ಎದೆ ಝಲ್ ಎನ್ನಿಸುವಂತಿದೆ.
ಸದ್ಯ ಇಂಟರ್ ನೆಟ್ ಲೋಕದಲ್ಲಿ ಸಖತ್ ವೈರಲ್ (Viral Video) ಆಗಿರುವ ಭಾರೀ ಗಾತ್ರದ ಹೆಬ್ಬಾವು ಜೆಸಿಬಿಗೆ ನೇತು ಬಿದ್ದಿದ್ದು, ನೋಡುಗರನ್ನು ಹೌಹಾರುವಂತೆ ಮಾಡಿದೆ. ಬೃಹತ್ ಹಾವಿನ ಗಾತ್ರ ನೋಡಿ ಅನೇಕರು ಅಚ್ಚರಿ ಜೊತೆಗೆ ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಯಾವುದೋ ಒಂದು ಪ್ರದೇಶದಲ್ಲಿ ಈ ಬೃಹತ್ ಗಾತ್ರದ ಹೆಬ್ಬಾವು ಕಂಡುಬಂದಿದೆ. ಅಲ್ಲಿ ಸುತ್ತಮುತ್ತ ದಟ್ಟ ಕಾಡು ಇರುವಂತೆ ಕಾಣುತ್ತದೆ. ಜೆಸಿಬಿ ಮೂಲಕ ಹೆಬ್ಬಾವನ್ನು ಎತ್ತುವ ಪ್ರಯತ್ನ ಮಾಡಲಾಗಿದೆ.
Massive! It took a crane to shift this #python weighing 100 kg and measuring 6.1 m length, in Dhanbad, Jharkhand. #nature #wildlife #snakes #forests #India @wwfindia @natgeoindia pic.twitter.com/nZMNUtLkbv
— Parimal Nathwani (@mpparimal) October 18, 2021
ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮದುರಂತ: ದಾರಿತಪ್ಪಿದ್ದ 17 ಚಾರಣಿಗರಲ್ಲಿ 11 ಮಂದಿ ಶವವಾಗಿ ಪತ್ತೆ
ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಈ ಬೃಹತ್ ಹೆಬ್ಬಾವು(Giant Python) ಪತ್ತೆಯಾಗಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ಧನ್‌ಬಾದ್‌ನಲ್ಲಿ 100 ಕೆಜಿ ತೂಕದ ಮತ್ತು 6.1 ಮೀ ಉದ್ದದ ಈ ಬೃಹತ್ ಹೆಬ್ಬಾವನ್ನು ಸ್ಥಳಾಂತರಿಸಲು ಕ್ರೇನ್ ಬೇಕಾಯಿತು’ ಅಂತಾ ಕ್ಯಾಪ್ಶನ್ ನೀಡಲಾಗಿದೆ. ಬಳಿಕ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಈ ಹೆಬ್ಬಾವು ಪತ್ತೆಯಾಗಿರುವ ವಿಡಿಯೋ ಭಾರತದ್ದಲ್ಲ ಅಂತಾ ವಾದಿಸಿದ್ದಾರೆ.
ಅಸಲಿಗೆ ಈ ಹೆಬ್ಬಾವು ಪತ್ತೆಯಾಗಿರುವುದು ಡೊಮಿನಿಕಾ ಮಳೆಕಾಡಿನ ಪ್ರದೇಶ(Dominica rainforest)ದಲ್ಲಿ ಎಂದು ತಿಳಿದುಬಂದಿದೆ. ಕೆಲಸ ಮಾಡುತ್ತಿದ್ದ ಕಾರ್ಮಿಕರು ಇಷ್ಟು ಬೃಹತ್ ಗಾತ್ರದ ಹೆಬ್ಬಾವನ್ನು ಪತ್ತೆ ಹಚ್ಚಿ ಅದನ್ನು ಜೆಸಿಬಿ ಮೂಲಕ ಬೇರೆಡೆ ಸ್ಥಳಾಂತರಿಸಿದ್ದಾರಂತೆ. ಮೊದಲಿಗೆ ಈ ವಿಡಿಯೋವನ್ನು @fakrulazwa ಹೆಸರಿನ ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಬಳಿಕ ಅದು ವೈರಲ್ ಆಗಿ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸುತ್ತುತ್ತಿದೆ ಅಂತಾ ಹೇಳಲಾಗಿದೆ.
ಇದನ್ನೂ ಓದಿ: Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು 50 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿವೆ
ಏನೇ ಇರಲಿ ಇಷ್ಟು ದೊಡ್ಡ ಬೃಹತ್ ಗಾತ್ರದ ಹೆಬ್ಬಾವನ್ನು ಜೆಸಿಬಿ(JCB) ಮೂಲಕ ಬೇರೆಡೆ ಸ್ಥಳಾಂತರಿಸಲು ಪ್ರಯತ್ನಿಸಿದ್ದಾರಲ್ಲ ಅದನ್ನು ಮೆಚ್ಚಬೇಕು. ಒಂದಿಷ್ಟು ಹೆದರದೆ ಚಾಲಕ ಅದನ್ನು ಜೆಸಿಬಿಯಲ್ಲಿ ಎತ್ತಿಹಿಡಿದಿರುವುದು ನೋಡುಗರಿಗೆ ಬೆರಗುಗೊಳಿಸಿದೆ. ಬೃಹತ್ ಗಾತ್ರದ ಹೆಬ್ಬಾವು ಕಂಡು ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ