Ind Vs Pak: Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?

T20 WORLD CUP 2021: ಈ ಪಂದ್ಯ ಸಾಮಾನ್ಯ ಪಂದ್ಯಗಳಂತಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ವಿರಾಟ್ ಕೊಹ್ಲಿ ಕೂಡ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪುನರುಚ್ಛರಿಸಿದ್ದಾರೆ. ಆದರೆ, ಈ ಪಂದ್ಯವು ಸಾಮಾನ್ಯ ಪಂದ್ಯವಲ್ಲ ಎಂದು ಸ್ವತಃ ವಿರಾಟ್ ಗೊತಿರಬೇಕು. ಸಹಜವಾಗಿ, ಟೀಮ್ ಇಂಡಿಯಾ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಶೇ. 100 ರಷ್ಟು ಗೆಲುವು ದಾಖಲಿಸಿದ ದಾಖಲೆಯನ್ನು ಹೊಂದಿದೆ.

Written by - Nitin Tabib | Last Updated : Oct 24, 2021, 02:44 PM IST
  • ಪಾಕ್ ವಿರುದ್ಧ ಟೀಂ ಇಂಡಿಯಾ ಶೇ.100ರಷ್ಟು ಗೆಲುವಿನ ದಾಖಲೆ ಹೊಂದಿದೆ.
  • ಟೀಂ ಇಂಡಿಯಾ ಪಾಳೆಯದಲ್ಲಿ ರೋಹಿತ್-ವಿರಾಟ್ ನಂತಹ ರತ್ನಗಳಿವೆ.
  • ಟಿ20 ವರ್ಲ್ಡ್ ಕಪ್ ನಲ್ಲಿ ಇದುವರೆಗೆ ಭಾರತ-ಪಾಕಿಸ್ತಾನ 5 ಬಾರಿ ಮುಖಾಮುಖಿಯಾಗಿವೆ.
Ind Vs Pak: Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ? title=
T20 World Cup 2021 (File Photo)

ದುಬೈ: India Vs Pakistan - 2021 ರ ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಮಹಾಸಮರ ನಡೆಯಲಿದೆ. ಇಡೀ ವಿಶ್ವದ ಕಣ್ಣು ಈ ಅಮೋಘ ಪಂದ್ಯದ ಮೇಲೆ ನೆಟ್ಟಿದೆ. ಈ ಪಂದ್ಯ ಸಂಜೆ 7:30 ರಿಂದ ದುಬೈ (UAE) ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ದಿಗ್ಗಜ ತಾರೆಗಳಿಂದ ಕಂಗೊಳಿಸುತ್ತಿರುವ ಭಾರತ ತಂಡ, ಅಪರಿಚಿತ ಮುಖಗಳಿರುವ ಪಾಕಿಸ್ತಾನ ತಂಡವನ್ನು ಮತ್ತೊಮ್ಮೆ ಸುತ್ತುವರೆಯಲು ಸಜ್ಜಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಎಂದಿಗೂ ಸೋತಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಟೀಂ ಇಂಡಿಯಾ ಶೇ.100ರಷ್ಟು ಗೆಲುವಿನ ದಾಖಲೆ ಹೊಂದಿದೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಆಗಾಗ ಒಂದು ಮಾತು ಕೇಳಿ ಬರುತ್ತಿರುತ್ತದೆ. ಅದೇನೆಂದರೆ, ಈ ಪಂದ್ಯವು ಸಾಮಾನ್ಯ ಪಂದ್ಯಗಳಂತೆ ಇರುತ್ತದೆ ಎಂಬುದು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಹಲವು ಬಾರಿ ಹೇಳಿದ್ದಾರೆ.  ಆದರೆ ಈ ಪಂದ್ಯವು ಸಾಮಾನ್ಯ ಪಂದ್ಯವಲ್ಲ ಎಂಬುದು ಸ್ವತಃ ವಿರಾಟ್ ಕೊಹ್ಲಿಗೂ (Virat Kohli) ಗೊತ್ತಿದೆ. ಖಂಡಿತವಾಗಿ, ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ  ಟೀಮ್ ಇಂಡಿಯಾ ಶೇಕಡಾ 100 ರಷ್ಟು ದಾಖಲೆಯನ್ನು ಹೊಂದಿದೆ, ಆದರೆ ವಾಸ್ತವದ ಮೈದಾನಕ್ಕಿಳಿದಾಗ ಆಕಾಶದೆತ್ತರದ ಅಂಕಿ-ಅಂಶಗಳಿಗೆ ಯಾವುದೇ ಮಹತ್ವ ಇರುವುದಿಲ್ಲ.

ಪಂದ್ಯ ಸಾಮಾನ್ಯವಾಗಿಲ್ಲ
ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಎಷ್ಟೇ ಹೇಳಿದರೂ ಇಡೀ ವಿಶ್ವದ ಕಣ್ಣು ಒಂದೇ ಪಂದ್ಯದ ಮೇಲೆ ನೆಟ್ಟಿರುವಾಗ ಪಂದ್ಯದ ಸಮಯಕ್ಕೆ ತಕ್ಕಂತೆ ಜನರು ತಮ್ಮ ದಿನದ ಕೆಲಸವನ್ನು ನಿರ್ಧರಿಸಬೇಕು ಎಂಬ ಮಾತುಗಳು ರಸ್ತೆಯಲ್ಲಿ ಕೇಳಿಬರುತ್ತಿವೆ.  ಆಗ ಈ ಪಂದ್ಯ ಸಾಮಾನ್ಯ ಉಳಿಯುವುದಿಲ್ಲ.  ಭಾರತ ಮತ್ತು ಪಾಕಿಸ್ತಾನ ಎರಡು ತಂಡಗಳನ್ನು ತಕ್ಕಡಿಯಲ್ಲಿ ತೂಗುವುದಾದರೆ, ಖಂಡಿತಾ ಟೀಮ್ ಇಂಡಿಯಾದತ್ತ ತಕ್ಕಡಿಯ ಸೂಜಿ ವಾಲುತ್ತದೆ, ಆದರೆ T20 ಪಂದ್ಯ ಎಂದರೆ ರಾಜನಿಗೆ  ಗುಲಾಮನಾಗಲು ಹಾಗೂ ಗುಲಾಮನಿಗೆ ರಾಜನಾಗಲು ತಡ ಉಂಟಾಗುವುದಿಲ್ಲ. ಇದು ಕೇವಲ 40 ಓವರ್‌ಗಳ ವಿಷಯವಾಗಿದೆ, ಯಾವುದೇ ತಂಡವು ಪ್ರಾಬಲ್ಯ ಸಾಧಿಸಿದರೆ, ಫಲಿತಾಂಶಗಳು ಆಶ್ಚರ್ಯರ ರೀತಿಯಲ್ಲಿ ಹೊರಬೀಳಬಹುದು.

ಭಾರತದ ಬಳಿ ಈ ರತ್ನಗಳಿವೆ
ಈ ಬಾರಿ ಟೀಂ ಇಂಡಿಯಾದ ಬಳಿ ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಬಾಣಗಳಿವೆ, ಪಾಕಿಸ್ತಾನವು ಇಮಾದ್ ವಾಸಿಮ್, ಶಾಹೀನ್ ಶಾ ಅಫ್ರಿದಿ, ಹಾರಿಸ್ ರೌಫ್, ಶಾದಬ್ ಖಾನ್ ಮತ್ತು ಹಸನ್ ಅಲಿಯಂತಹ ದಾಲಿಕೊರರನ್ನು ಒಳಗೊಂಡಿದೆ.  ಭಾರತಬಳಿ  ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ಗಳಂತಹ ವೇಗಿಗಳಿದ್ದರೆ,  ಪಾಕಿಸ್ತಾನದಲ್ಲಿ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಶೋಯೆಬ್ ಮಲಿಕ್ ಮತ್ತು ಮೊಹಮ್ಮದ್ ಹಫೀಜ್ ಮುಂತಾದ ಸ್ಟಾರ್ ಆಟಗಾರರಿದ್ದಾರೆ. ಹೀಗಾಗಿ ಗೆಲುವು ಭಾರತೀಯ ದಿಗ್ಗಜರ ಹೆಸರಿನಲ್ಲಿದೆಯೇ ಅಥವಾ ಪಾಕಿಸ್ತಾನದ ಪರಾಕ್ರಮ ನೋಡಲು ಸಿಗಲಿದೆಯೇ ಎಂಬುದು ಕಾಲವೇ ನಿರ್ಧರಿಸಲಿದೆ.

ಟಿ20 ವರ್ಲ್ಡ್ ಕಪ್ ನಲ್ಲಿ ಭಾರತೀಯ ತಂಡದ ರಿಕಾರ್ಡ್ 
ಭಾರತೀಯ ತಂಡ ವರ್ಷ 2007ರಲ್ಲಿ ಟಿ20 ವರ್ಲ್ಡ್ ಕಪ್ ನಲ್ಲಿ ಏಶಿಯನ್ ನಲ್ಲಿ ಚಾಂಪಿಯನ್ ಆಗಿತು. ಈ ವೇಳೆ ಭಾರತ ಪಾಕಿಸ್ತಾನ ತಂಡವನ್ನು 5 ರನ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡಿತ್ತು. ಒಟ್ಟು ನಡೆದ 33 ಪಂದ್ಯಗಳ ಪೈಕಿ ಟೀಂ ಇಂಡಿಯಾ 21 ಪಂದ್ಯಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. 2016ರಲ್ಲಿ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿತ್ತು. ಆದರೆ, ನಟರ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೋಲನ್ನು ಅನುಭವಿಸಿತ್ತು.

ಟಿ20 ವರ್ಲ್ಡ್ ಕಪ್ ನಲ್ಲಿ ಪಾಕಿಸ್ತಾನದ ರಿಕಾರ್ಡ್ ಹೇಗಿದೆ?
ಪಾಕಿಸ್ತಾನ 2009ರಲ್ಲಿ ಟಿ20 ಟ್ರೋಫಿಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಆ ಸಂದರ್ಭದಲ್ಲಿ ಪಾಕ್ ತನ್ನ ಶ್ರೀಲಂಕಾ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿತ್ತು. ಪಾಕ್ ಇದುವರೆಗೆ ಒಟ್ಟು 34 ಟಿ20 ವರ್ಲ್ಡ್ ಕಪ್ ಪಂದ್ಯಗಳನ್ನಾಡಿದ್ದು, 19 ಪಂದ್ಯಗಳಲ್ಲಿ ಜಯ ದಾಖಲಿಸಿ ಒಟ್ಟು 15 ಪಂದ್ಯಗಳಲ್ಲಿ ಸೋಲನ್ನುಂಡಿದೆ.

ವಿರಾಟ್ Vs ಬಾಬರ್ 
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಇದುವರೆಗೆ, ಅವರು 89 ಪಂದ್ಯಗಳನ್ನು ಆಡಿದ್ದಾರೆ, ಅಲ್ಲಿ ಅವರು 139.04 ಸ್ಟ್ರೈಕ್ ರೇಟ್‌ನಲ್ಲಿ 3159 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಬಾಬರ್ ಅಜಮ್ (Babar Azam) ಪ್ರತಿ ಫಾರ್ಮ್ಯಾಟ್ ನಲ್ಲಿಯೂ ಬಲವಾದ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ. ಟಿ 20 ಯಲ್ಲಿ, ಅವರು 61 ಪಂದ್ಯಗಳಲ್ಲಿ ಒಟ್ಟು 2204 ರನ್ ಗಳಿಸಿದ್ದಾರೆ, ಅಲ್ಲಿ ಅವರ ಸರಾಸರಿ 46.89 ಆಗಿದೆ. ಅವರು ತಮ್ಮ ಹೆಸರಿಗೆ ಒಟ್ಟು 20 ಅರ್ಧ ಶತಕಗಳನ್ನು ಮತ್ತು ಟಿ 20 ಅಂತರಾಷ್ಟ್ರೀಯ ಶತಕವನ್ನು ಹೊಂದಿದ್ದಾರೆ. ಈ ರೂಪದಲ್ಲಿ, ಅವರು 2000 ಕ್ಕಿಂತ ಹೆಚ್ಚು ರನ್ ಗಳಿಸಿದ ಪಾಕಿಸ್ತಾನದ ಮೂವರು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸೇರಿದ್ದಾರೆ. ಇದರಲ್ಲಿ ಮೊಹಮ್ಮದ್ ಹಫೀಜ್ (2429) ಮತ್ತು ಶೋಯೆಬ್ ಮಲಿಕ್ (2335) ಸೇರಿದ್ದಾರೆ.

ಇದನ್ನೂ ಓದಿ-ICC T20 World Cup 2021: Ind vs Pak ಪಂದ್ಯಕ್ಕೂ ಮುನ್ನ ಬೋಲ್ಡ್ ಹೇಳಿಕೆ ನೀಡಿದ ಪಾಕ್ ಪಿಎಂ!

ನಾಯಕತ್ವದಲ್ಲಿ ಕಿಂಗ್ ಯಾರು?
ಕೊಹ್ಲಿ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 45 ಟಿ 20 ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದಾರೆ ಮತ್ತು ಭಾರತ ಅವರ ನಾಯಕತ್ವದ ಅಡಿ 29 ಪಂದ್ಯಗಳನ್ನು ಗೆದ್ದು 14ರಲ್ಲಿ ಸೋಲು ಕಂಡಿದೆ. ಇನ್ನೊಂದೆಡೆ ಬಾಬರ್ ಆಜಂ ಪಾಕಿಸ್ತಾನದ ಪರ 28 ಪಂದ್ಯಗಳ ನಾಯಕತ್ವ ವಹಿಸಿದ್ದಾರೆ, ಅದರಲ್ಲಿ ಅವರು 15ರಲ್ಲಿ  ಗೆಲುವು ಸಾಧಿಸಿ ಮತ್ತು 8 ರಲ್ಲಿ ಸೋತಿದ್ದಾರೆ.

ಇದನ್ನೂ ಓದಿ-T20 WORLD CUP 2021: India-Pakistan ಪಂದ್ಯಕ್ಕೂ ಮುನ್ನವೇ ಸೋಲೊಪ್ಪಿಕೊಂಡ Shahid Afridi, ಹೇಳಿದ್ದೇನು?

ಪಾಕಿಸ್ತಾನ ಒಂದು ಬಾರಿಯೂ ಕೂಡ ವಿರಾಟ್ ವಿಕೆಟ್ ಪಡೆದಿಲ್ಲ
ಪಾಕ್ ಬೌಲರ್ ಗಳು ತಮ್ಮನ್ನು ಒಮ್ಮೆಯೂ ಕೂಡ ಔಟ್ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲು ವಿರಾಟ್ ಯತ್ನಿಸಲಿದ್ದಾರೆ. ದಾಖಲೆಗಳ ಪ್ರಕಾರ ವಿರಾಟ್ ಇದುವರೆಗೆ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ದ ಒಟ್ಟು ಮೂರು ಇನ್ನಿಂಗ್ಸ್ ಆಡಿದ್ದಾರೆ. ಈ ಮೂರೂ ಪಂದ್ಯಗಳಲ್ಲಿ ವಿರಾಟ್ 78, 36, ಹಾಗೂ 55 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

ಇದನ್ನೂ ಓದಿ-T20 World Cup, Ind vs Pak: ಪಾಕ್ ವಿರುದ್ಧ ಜೈತ್ರಯಾತ್ರೆ ಮುಂದುವರೆಸುವುದೇ ಭಾರತ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News