Viral Video: 2021 ರಲ್ಲಿ Pawsome ವೀಡಿಯೊಗಳು ನಮಗೆ ಸಾಕಷ್ಟು ಮನರಂಜನೆ ನೀಡುತ್ತಿವೆ. ಸಾಕು ಪ್ರಾಣಿಗಳು ಎಂದರೆ ಹಲವರಿಗೆ ಹುಚ್ಚು ಪ್ರೀತಿ. ಬಹಳಷ್ಟು ಮಂದಿ ಸಾಕು ಪ್ರಾಣಿಗಳಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ ನೋಡಲು ಇಷ್ಟಪಡುತ್ತಾರೆ. ಸಾಕು ಪ್ರಾಣಿಗಳು ಎಂದೊಡನೆ ಮೊದಲು ನೆನಪಾಗುವುದು ನಾಯಿ. ಆಗಾಗ್ಗೆ ನಾಯಿಯ ವಿಡಿಯೋಗಳು ವೈರಲ್ ಆಗುವುದನ್ನು ನೋಡಿರುತ್ತೇವೆ. ಇದೀಗ ಮತ್ತೊಮ್ಮೆ ನಾಯಿಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ, ಈ ವೀಡಿಯೋದಲ್ಲಿ ನಾಯಿ ಜನರನ್ನು ಹೆದರಿಸಿದ್ದು ಮಾತ್ರವಲ್ಲದೆ ಗೊಂದಲವನ್ನೂ ಮೂಡಿಸಿದೆ. ಈ ವಿಡಿಯೋವನ್ನು ನೆಟಿಜನ್‌ಗಳು ತುಂಬಾ ಮೆಚ್ಚಿಕೊಂಡಿದ್ದಾರೆ.
ವಾಸ್ತವವಾಗಿ, ಸಿಂಹದ ವೇಷ ಧರಿಸಿದ್ದ ನಾಯಿಯೊಂದು (Dog In Lion Costume) ಇದ್ದಕ್ಕಿದ್ದಂತೆ ಉದ್ಯಾನವನವನ್ನು ಪ್ರವೇಶಿಸಿತು. ಅದನ್ನು ನೋಡಿದ ಕೂಡಲೇ ಸಿಂಹ ಎಂದು ಭಾಸವಾಗುತ್ತದೆ. ಇದನ್ನು ಕಂಡೊಡನೆ ಇದು ನಾಯಿಯೋ? ಅಥವಾ ಸಿಂಹವೋ? ಎಂಬ ಗೊಂದಲ ಜನರಲ್ಲಿ ಮೂಡಿತ್ತು.
ಇದನ್ನೂ ಓದಿ- Wedding Video: ವಧುವಿನ ಮುಂದೆ ನಕರ ತೋರಿಸಿದ ವರ, ಮುಂದೇನಾಯ್ತು ಈ ವಿಡಿಯೋ ನೋಡಿ
ಸಿಂಹದ ವೇಷಭೂಷಣ ಧರಿಸಿದ್ದ ನಾಯಿ:
ಇತ್ತೀಚಿಗೆ ಸೋಶಿಯಲ್ ಮಿಡಿಯಾದಲ್ಲಿ (Social Media) ವೈರಲ್ ಆಗಿರುವ ವಿಡಿಯೋದಲ್ಲಿ ಸಿಂಹದ ವೇಷದಲ್ಲಿರುವ ನಾಯಿಯನ್ನು ಕಾಣಬಹುದು. ವೀಡಿಯೊದಲ್ಲಿ, ನಾಯಿಯು ಡಿಸೈನರ್ ವೇಷಭೂಷಣವನ್ನು ಧರಿಸಿರುವುದು ಕಂಡುಬರುತ್ತದೆ. ವೇಷಭೂಷಣ ಧರಿಸಿದ ಬಳಿಕ ನಾಯಿ ಸಿಂಹದ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಜನರ ಕಣ್ಣಿಗೆ ಮಣ್ಣೆರಚುತ್ತಿದೆ. 12 ಸೆಕೆಂಡ್ ಗಳ ವಿಡಿಯೋದಲ್ಲಿ ನಾಯಿಯ ಕೊರಳಿಗೆ ಕಟ್ಟಿರುವ ಉದ್ದ ಕೂದಲಿನ ವೇಷಭೂಷಣ ಜನರನ್ನು ಕಂಗೆಡಿಸುತ್ತಿದೆ. ಈ ನಾಯಿ ಉದ್ಯಾನದಲ್ಲಿ ಸಾರ್ವಜನಿಕರ ನಡುವೆ ತಿರುಗಾಡಲು ಪ್ರಾರಂಭಿಸಿದ ತಕ್ಷಣ, ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ನಾಯಿ ಪಾರ್ಕ್‌ನಲ್ಲಿ ಸದ್ದಿಲ್ಲದೆ ನಡೆದುಕೊಂಡು ಹೋಗುತ್ತಿದ್ದು, ಜನರು ಆಶ್ಚರ್ಯಚಕಿತರಾಗಿ ಇದನ್ನು ನೋಡುತ್ತಿದ್ದಾರೆ.
ಇದನ್ನೂ ಓದಿ- Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ
ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಈ ರೀತಿ ಪ್ರತಿಕ್ರಿಯಿಸಿದ್ದಾರೆ
ಈ ವೀಡಿಯೊವನ್ನು @dailygameofficial ಹ್ಯಾಂಡಲ್ ಮೂಲಕ Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದ ಶೀರ್ಷಿಕೆಯು 'ಓ ದೇವರೇ, ಇದು ಏನು' ಎಂದು ಬರೆಯಲಾಗಿದೆ. ವೀಡಿಯೊದ ಕಾಮೆಂಟ್ ಬಾಕ್ಸ್‌ನಲ್ಲಿ ಬಳಕೆದಾರರ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಈ ನಾಯಿಯ ಮಿಶ್ರ ಹೆಸರನ್ನು ಸಹ ಇಡಲಾಗುತ್ತಿದೆ. ಬಳಕೆದಾರರು ಈ ನಾಯಿಗೆ 'ಡಾಗ್ಲಿ' ಮತ್ತು 'ಲಿಡಾಗ್' ಎಂದು ಹೆಸರಿಸಲು ಪ್ರಸ್ತಾಪಿಸಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು 'ಲೋ ಬಜೆಟ್ ಲಯನ್' ಎಂದು ತಮಾಷೆ ಮಾಡಿದ್ದಾರೆ.
ಇನ್ನೊಬ್ಬ ನೆಟ್ಟಿಗರು, ನಾಯಿಯನ್ನು ವಿಚಿತ್ರವಾಗಿ ಹೋಲಿಸಿದ್ದಾರೆ. ಅವರು ಇದನ್ನು ಆಂಡ್ರಾಯ್ಡ್ ಫೋನ್‌ನೊಂದಿಗೆ ಐಫೋನ್ ರಿಂಗ್‌ಟೋನ್ ಎಂದು ವಿವರಿಸಿದರು. ವೈರಲ್ ವೀಡಿಯೊವನ್ನು ಕಳೆದ ವಾರ ಅಪ್‌ಲೋಡ್ ಮಾಡಲಾಗಿದೆ ಮತ್ತು ಇದುವರೆಗೆ Instagram ನಲ್ಲಿ ಈ ವಿಡಿಯೋವನ್ನು 4 ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ