ಈ ಕಾರಣಗಳಿಗಾಗಿ ಚಂದ್ರಗ್ರಹಣದ ವೇಳೆ ಆಹಾರ ಸೇವನೆ ನಿಷೇಧ

 ಧರ್ಮಗ್ರಂಥಗಳ ಪ್ರಕಾರ, ಚಂದ್ರಗ್ರಹಣವನ್ನು ಪರಿವರ್ತನೆಯ ಅಗ್ರಧೂತ ಮತ್ತು ಕೆಟ್ಟ ಶಕುನದ ಸಮಯವೆಂದು ಪರಿಗಣಿಸಲಾಗುತ್ತದೆ. 

Written by - Ranjitha R K | Last Updated : Nov 11, 2021, 06:27 PM IST
  • ಗ್ರಹಣದ ಸಮಯದಲ್ಲಿ ಪರಿಸರದಲ್ಲಿ ಬದಲಾವಣೆ
  • ಶಕ್ತಿಯ ಚಕ್ರಗಳ ಮೇಲೆ ಪರಿಣಾಮ
  • ಆಹಾರವನ್ನು ಸಂರಕ್ಷಿಸಲು ತುಳಸಿ ಎಲೆಗಳನ್ನು ಹಾಕಿಡಿ
 ಈ ಕಾರಣಗಳಿಗಾಗಿ ಚಂದ್ರಗ್ರಹಣದ ವೇಳೆ ಆಹಾರ ಸೇವನೆ ನಿಷೇಧ  title=
ಗ್ರಹಣದ ಸಮಯದಲ್ಲಿ ಪರಿಸರದಲ್ಲಿ ಬದಲಾವಣೆ (file photo)

ನವದೆಹಲಿ : ಚಂದ್ರಗ್ರಹಣದ (Chandra Grahan) ಸಮಯದಲ್ಲಿ ಆಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಆಹಾರ ಸೇವನೆ  ಹಾನಿಕಾರಕ ಎನ್ನುವುದು ನಂಬಿಕೆ. ಚಂದ್ರಗ್ರಹಣದ (Lunar eclipse) ಸಮಯದಲ್ಲಿ ಏನನ್ನೂ ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ ಇದರ ಹಿಂದಿರುವ ಕಾರಣ ತಿಳಿದಿದೆಯಾ? 

ವಾಸ್ತವವಾಗಿ, ಇದರ ಹಿಂದೆ ವಿಶೇಷ ಕಾರಣವಿದೆ. ಧರ್ಮಗ್ರಂಥಗಳ ಪ್ರಕಾರ, ಚಂದ್ರಗ್ರಹಣವನ್ನು (Chandra Grahan) ಪರಿವರ್ತನೆಯ ಅಗ್ರಧೂತ ಮತ್ತು ಕೆಟ್ಟ ಶಕುನದ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಗ್ರಹಣ ಕಾಲದಲ್ಲಿ (grahana time) ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ಚಂದ್ರನ ಕಿರಣಗಳನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಕಾಲದಲ್ಲಿ  ಏನನ್ನಾದರೂ ಸೇವಿಸಿದರೆ ಅದು ನಿಮ್ಮ ದೇಹದ ಮೇಲೆ ನಕಾರಾತ್ಮಕ ಪರಿಣಾಮ (Negetive impact) ಬೀರುತ್ತದೆ ಎನ್ನುವುದು ನಂಬಿಕೆ. 

ಇದನ್ನೂ ಓದಿ : Guru Rashi Parivartan 2021: ಕುಂಭ ರಾಶಿ ಪ್ರವೇಶಿಸಲಿರುವ ಗುರು ಗ್ರಹ , ಹೊಳೆಯಲಿದೆ ಈ ನಾಲ್ಕು ರಾಶಿಯವರ ಅದೃಷ್ಟ

ಶಕ್ತಿಯ ಚಕ್ರಗಳ ಮೇಲೆ ಪರಿಣಾಮ :
ಗರ್ಭಿಣಿಯರೂ ವಿಶೇಷವಾಗಿ ಈ ಸಮಯದಲ್ಲಿ ಹಾನಿಕಾರಕ ವಸ್ತುಗಳಿಂದ ದೂರವಿರಬೇಕು ಎಂದು ವಿಶೇಷವಾಗಿ ಹೇಳಲಾಗುತ್ತದೆ. ನಂಬಿಕೆಗಳ ಪ್ರಕಾರ, ಚಂದ್ರನ ಚಕ್ರಗಳು ನಮ್ಮ ದೇಹದ ಮೇಲೆ ವೈಜ್ಞಾನಿಕ ಮತ್ತು ಮಾನಸಿಕ ಪರಿಣಾಮವನ್ನು ಬೀರುತ್ತವೆ. ಇದು ನಮ್ಮ ಶಕ್ತಿ ಚಕ್ರಗಳ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಗ್ರಹಣದ ಸಮಯದಲ್ಲಿ ಹಣ್ಣುಗಳು (Fruits) ಅಥವಾ ಸಲಾಡ್‌ಗಳನ್ನು (Salad) ಕೂಡಾ ತಿನ್ನಬಾರದು ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ವಸ್ತುವನ್ನು ತಿಂದರೂ ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುವುದರಿಂದ ಏನನ್ನೂ ತಿನ್ನದಂತೆ ಸೂಚಿಸಲಾಗುತ್ತದೆ. 

ಗ್ರಹಣದ ಸಮಯದಲ್ಲಿ ಪರಿಸರದಲ್ಲಿ ಬದಲಾವಣೆ :
ಚಂದ್ರಗ್ರಹಣದ ಸಮಯದಲ್ಲಿ, ಶಕ್ತಿಯಲ್ಲಿ ಬದಲಾವಣೆ ಕಂಡುಬರುತ್ತದೆ ಮತ್ತು ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಣದ ಸಮಯದಲ್ಲಿ ಪರಿಸರದಲ್ಲಿನ ಬದಲಾವಣೆಗಳು ಮತ್ತು ಯುವಿ ಕಿರಣಗಳಿಂದ, ಬೇಯಿಸಿದ ಆಹಾರವು ಹಾಳಾಗಬಹುದು. ಈ ಕಿರಣಗಳು ಬೇಯಿಸಿದ ಆಹಾರದಲ್ಲಿ (Food) ಬಿದ್ದಾಗ, ಆಹಾರವು ಕಲುಷಿತವಾಗುತ್ತದೆ.

ಇದನ್ನೂ ಓದಿ : Vastu Tips for Married People: ಪತಿ-ಪತ್ನಿ ನಡುವಿನ ವೈಮನಸ್ಯ ದೂರಮಾಡಲು ಈ ವಾಸ್ತು ಸಲಹೆ ಅನುಸರಿಸಿ

ಆಹಾರವನ್ನು ಸಂರಕ್ಷಿಸಲು ತುಳಸಿ ಎಲೆಗಳನ್ನು ಹಾಕಿಡಿ :
ಧರ್ಮಗ್ರಂಥಗಳ ಪ್ರಕಾರ, ಚಂದ್ರಗ್ರಹಣವು ಸೂಕ್ಷ್ಮಜೀವಿಗಳ ಸಾವಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಈ ಸಮಯದಲ್ಲಿ ಊಟ, ಮಾಡುವುದು, ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ನೀವು ಬೇಯಿಸಿದ ಆಹಾರವನ್ನು ಸಂರಕ್ಷಿಸಲು ಬಯಸಿದರೆ, ತುಳಸಿ ಎಲೆಗಳನ್ನು (Tulsi leaves) ಅದರಲ್ಲಿ ಹಾಕಿಡಬೇಕು. ಇದು ವಿಕಿರಣವನ್ನು ತೆಗೆದುಹಾಕುತ್ತದೆ ಮತ್ತು ಆಹಾರವನ್ನು ವಿಷವಾಗಿ ಪರಿವರ್ತಿಸುವುದನ್ನು ತಡೆಯುತ್ತದೆ ಎಂದು ನಂಬಲಾಗಿದೆ. ಗ್ರಹಣದ ಸಮಯದಲ್ಲಿ ತುಳಸಿ ಬೆರೆಸಿದ ಹಾಲನ್ನು ಸೇವಿಸುವುದು ಒಳ್ಳೆಯದೆಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News