Partial Lunar Eclipse 2021: ನವೆಂಬರ್ 19ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ, 600 ವರ್ಷಗಳ ಬಳಿಕ ಈ ಯೋಗ ಸೃಷ್ಟಿ

Longest Lunar Eclipse 2021: ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಗೋಚರಿಸಲಿದೆ. ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ಚಂದ್ರಗ್ರಹಣ ಸಂಭವಿಸಲಿದೆ. ಧಾರ್ಮಿಕ ದೃಷ್ಟಿಯಿಂದ ಈ ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದೆ. ಇದು ಕೇವಲ ರಾಶಿಚಕ್ರದ (Astrology) ಚಿಹ್ನೆಗಳ (Zodiac Signs) ಮೇಲೆ ತನ್ನ ಪ್ರಭಾವವನ್ನು ಮಾತ್ರ ತೋರಿಸದೆ, 

Written by - Nitin Tabib | Last Updated : Nov 12, 2021, 08:53 PM IST
  • ನವೆಂಬರ್ 19ಕ್ಕೆ ಈ ವರ್ಷದ ಅಂತಿಮ ಚಂದ್ರಗ್ರಹಣ.
  • 600 ವರ್ಷಗಳ ಬಳಿಕ ಈ ಸುದೀರ್ಘ ಚಂದ್ರಗ್ರಹಣ.
  • ಇಂತಹ ಮುಂದಿನ ಚಂದ್ರಗ್ರಹಣ ಫೆಬ್ರುವರಿ 8, 2629 ರಲ್ಲಿ ಗೋಚರಿಸಲಿದೆ.
Partial Lunar Eclipse 2021: ನವೆಂಬರ್ 19ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ, 600 ವರ್ಷಗಳ ಬಳಿಕ ಈ ಯೋಗ ಸೃಷ್ಟಿ  title=
Longest Lunar Eclipse 2021 (File Photo)

Longest Lunar Eclipse 2021: ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಗೋಚರಿಸಲಿದೆ. ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ಚಂದ್ರಗ್ರಹಣ ಸಂಭವಿಸಲಿದೆ. ಧಾರ್ಮಿಕ ದೃಷ್ಟಿಯಿಂದ ಈ ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದೆ. ಇದು ಕೇವಲ ರಾಶಿಚಕ್ರದ (Astrology) ಚಿಹ್ನೆಗಳ (Zodiac Signs) ಮೇಲೆ ತನ್ನ ಪ್ರಭಾವವನ್ನು ಮಾತ್ರ ತೋರಿಸದೆ,  600 ವರ್ಷಗಳ ನಂತರ ಮಹತ್ವದ  ಕಾಕತಾಳೀಯವನ್ನು ಕೂಡ ನಿರ್ಮಿಸುತ್ತಿದೆ. ಈ  ಚಂದ್ರಗ್ರಹಣವು ಭಾರತದಲ್ಲಿ ಮಾತ್ರವಲ್ಲದೆ ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ಭಾಗಗಳಲ್ಲಿ ವಿಕ್ಷೀಸಬಹುದು. 

ವರ್ಷದ ಕೊನೆಯ ಚಂದ್ರಗ್ರಹಣ (Lunar Eclipse 2021 In India) ನವೆಂಬರ್ 19 ರಂದು ಸಂಭವಿಸಲಿದೆ. ಕಳೆದ 600 ವರ್ಷಗಳ ನಂತರ ಇಂತಹ ಸುದೀರ್ಘ ಚಂದ್ರಗ್ರಹಣ ಸಂಭವಿಸುತ್ತಿದೆ ಎಂದು ಹೇಳಲಾಗುತ್ತಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಪ್ರಕಾರ, ನವೆಂಬರ್ 18 ಮತ್ತು 19 ರಂದು ರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತಿದೆ.

ಹವಾಮಾನಕ್ಕೆ ಅನುಗುಣವಾಗಿ ಯಾವುದೇ ಸ್ಥಳದಿಂದ ಗ್ರಹಣ ಗೋಚರಿಸಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ತಿಳಿಸಿದೆ. ಸಮಯ ವಲಯವನ್ನು ಅವಲಂಬಿಸಿ ಸಂಜೆ ಮೊದಲು ಅಥವಾ ನಂತರ ಇದನ್ನು ನೀವು ನೋಡಬಹುದು.

ಪ್ರೆಸ್ ಇನ್ಫಾರ್ಮಶನ್ ಬ್ಯೂರೂ  ವಿಜ್ನಪ್ತಿಯ ಪ್ರಕಾರ, ಭಾಗಶಃ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:48 ಕ್ಕೆ ಆರಂಭಗೊಂಡು, ಸಂಜೆ 4:17 ಕ್ಕೆ ಕೊನೆಗೊಳ್ಳಲಿದೆ. PIB ಪ್ರಕಾರ, "ಗ್ರಹಣದ ಭಾಗಶಃ ಹಂತವು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಈಶಾನ್ಯ ಭಾಗಗಳಲ್ಲಿ ಚಂದ್ರೋದಯದ ನಂತರ ಮುಕ್ತಾಯಗೊಳ್ಳಲಿದೆ"

ಇದನ್ನೂ ಓದಿ-Kartik Purnima 2021: ಕಾರ್ತಿಕ ಹುಣ್ಣಿಮೆ ದಿನ ಮಾಡುವ ಈ ತಪ್ಪುಗಳು ಭಾರೀ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ

ಅರ್ಥ್ ಸ್ಕೈ ವೆಬ್‌ಸೈಟ್‌ನ ಪ್ರಕಾರ, ಕೊನೆಯ ಬಾರಿಗೆ ಫೆಬ್ರವರಿ 18, 1440 ರಂದು ಇಂತಹ ದೀರ್ಘ ಕಾಲದ ಭಾಗಶಃ ಚಂದ್ರಗ್ರಹಣ (Longest Lunar Eclipse 2021) ಸಂಭವಿಸಿತ್ತು ಮತ್ತು ಮುಂದೆ ಫೆಬ್ರವರಿ 8, 2669 ರಂದು ಇದನ್ನು ವಿಕ್ಷೀಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-Secrets: ಈ 5 ರಾಶಿಯವರ ಬಳಿ ಮರೆತೂ ಸಹ ನಿಮ್ಮ ರಹಸ್ಯ ಬಿಚ್ಚಿಡಬೇಡಿ

ಚಂದ್ರಗ್ರಹಣವು ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಮೂರನ್ನೂ ಸರಳ ರೇಖೆಯಲ್ಲಿ ಜೋಡಿಸಿದಾಗ. ಸಂಪೂರ್ಣ ಚಂದ್ರಗ್ರಹಣವು ಭೂಮಿಯ ನೆರಳಿನ ಅಡಿಯಲ್ಲಿ ಬಂದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ ಮತ್ತು ಚಂದ್ರನ ಒಂದು ಭಾಗವು ಭೂಮಿಯ ನೆರಳಿನ ಅಡಿಯಲ್ಲಿದ್ದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.

ಇದನ್ನೂ ಓದಿ-ಈ ಕಾರಣಗಳಿಗಾಗಿ ಚಂದ್ರಗ್ರಹಣದ ವೇಳೆ ಆಹಾರ ಸೇವನೆ ನಿಷೇಧ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News