Secrets: ಈ 5 ರಾಶಿಯವರ ಬಳಿ ಮರೆತೂ ಸಹ ನಿಮ್ಮ ರಹಸ್ಯ ಬಿಚ್ಚಿಡಬೇಡಿ

Secrets: ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಆ ರಾಶಿಗಳ ಸ್ವಭಾವವನ್ನೂ ತಿಳಿಸಲಾಗಿದೆ. ಅವುಗಳಲ್ಲಿ ಕೆಲವು ರಾಶಿಯವರನ್ನು ಸ್ವಭಾವತಃ ತುಂಬಾ ಚಂಚಲರು ಎಂದು ಹೇಳಲಾಗಿದೆ. ಈ ರಾಶಿಯವರು ಒಬ್ಬರು ಹೇಳಿದ ಗುಟ್ಟನ್ನು ಇತರರಿಗೆ ಹೇಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Nov 12, 2021, 08:51 AM IST
  • ಮೇಷ ಮತ್ತು ಮಿಥುನ ರಾಶಿಯ ಜನರ ಸ್ವಭಾವವು ತುಂಬಾ ಚಂಚಲವಾಗಿರುತ್ತದೆ
  • ಕರ್ಕಾಟಕ ಮತ್ತು ತುಲಾ ರಾಶಿಯ ಜನರೊಂದಿಗೆ ನಿಮ್ಮ ರಹಸ್ಯಗಳನ್ನು ಬುದ್ಧಿವಂತಿಕೆಯಿಂದ ಹಂಚಿಕೊಳ್ಳಿ
  • ಧನು ರಾಶಿಯವರಿಗೆ ವಿಷಯಗಳಲ್ಲಿನ ರಹಸ್ಯಗಳು ತಿಳಿದಿವೆ
Secrets: ಈ 5 ರಾಶಿಯವರ ಬಳಿ ಮರೆತೂ ಸಹ ನಿಮ್ಮ ರಹಸ್ಯ ಬಿಚ್ಚಿಡಬೇಡಿ title=
Bad Secret keeper

Secrets: ಜ್ಯೋತಿಷ್ಯದಲ್ಲಿ ದ್ವಾದಶ ರಾಶಿಗಳನ್ನು ಉಲ್ಲೇಖಿಸಲಾಗಿದೆ. ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಒಂದು ರಾಶಿ ಇದ್ದೇ ಇರುತ್ತದೆ. ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಮುನ್ನೋಟಗಳು ವಿಭಿನ್ನವಾಗಿವೆ ಮತ್ತು ಅದನ್ನು ರಾಶಿಚಕ್ರದ ಮೂಲಕವೂ ಅಂದಾಜು ಮಾಡಲಾಗುತ್ತದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಅದರ ಆಡಳಿತ ಗ್ರಹದಿಂದಾಗಿ ವಿಭಿನ್ನ ಸ್ವಭಾವವನ್ನು ಹೊಂದಿದೆ. ಅತ್ಯಂತ ಚಂಚಲ ಸ್ವಭಾವದ ಆ ರಾಶಿಚಕ್ರದ ಜನರ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಜನರು ಒಬ್ಬರ ರಹಸ್ಯವನ್ನು ಇನ್ನೊಬ್ಬರಿಗೆ ಹೇಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಿದ್ದರೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವ ವಿಷಯದಲ್ಲಿ ನೀವು ಯಾವ ರಾಶಿಯವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಯೋಣ.

ಮೇಷ ರಾಶಿ:
ಮೇಷ ರಾಶಿಯ (Zodiac Signs) ಜನರು ಉತ್ಸಾಹ ಮತ್ತು ಶಕ್ತಿಯಿಂದ ತುಂಬಿರುತ್ತಾರೆ. ಈ ರಾಶಿಚಕ್ರದ ಜನರೊಂದಿಗೆ ನಿಮ್ಮ ರಹಸ್ಯಗಳನ್ನು ಬುದ್ಧಿವಂತಿಕೆಯಿಂದ ಹಂಚಿಕೊಳ್ಳಿ. ಅವರು ಉತ್ಸುಕರಾಗಲು ಮತ್ತು ನಿಮ್ಮ ವಿಷಯಗಳನ್ನು ಇತರರಿಗೆ ಹೇಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೇಷ ರಾಶಿಯವರಿಗೆ ನಿಮ್ಮ ರಹಸ್ಯವನ್ನು ಹೇಳುವ ಮೊದಲು, ಎಚ್ಚರಿಕೆಯಿಂದ ಯೋಚಿಸಿ.

ಇದನ್ನೂ ಓದಿ- Flick Eye: ಕಣ್ಣುಗಳು ಏಕೆ ಅದರುತ್ತವೆ? ಇದರ ಒಳ್ಳೆಯ ಅಥವಾ ಕೆಟ್ಟ ಸಂಕೇತಗಳನ್ನು ತಿಳಿಯಿರಿ

ಮಿಥುನ ರಾಶಿ: 
ಜ್ಯೋತಿಷ್ಯ ಶಾಸ್ತ್ರದ (Aastrology) ಪ್ರಕಾರ ಮಿಥುನ ರಾಶಿಯ ಮೇಲೆ ಬುಧ ಗ್ರಹದ ಪ್ರಭಾವವಿದೆ. ಈ ರಾಶಿಚಕ್ರದ ಜನರು ತುಂಬಾ ಸ್ನೇಹಪರರಾಗಿದ್ದಾರೆ ಮತ್ತು ಯಾವುದೇ ರೀತಿಯ ಪರಿಸರದಲ್ಲಿ ತ್ವರಿತವಾಗಿ ಹೊಂದಿಕೊಳ್ಳುತ್ತಾರೆ. ಅವರಿಗೂ ಗಾಸಿಪ್‌ಗೂ ವಿಶೇಷವಾದ ಬಾಂಧವ್ಯವಿದೆ. ಈ ರಾಶಿಯವರಿಗೆ ನಿಮ್ಮ ಗುಟ್ಟನ್ನು ಹೇಳುವ ಮೊದಲು ಸ್ವಲ್ಪ ಯೋಚಿಸಿ. ಯಾವುದೇ ಸಮಯದಲ್ಲಿ ನಿಮ್ಮ ರಹಸ್ಯವು ಅನೇಕ ಜನರಿಗೆ ತಲುಪಬಹುದು.

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯ ಜನರು ತುಂಬಾ ಚಂಚಲ ಸ್ವಭಾವದವರು. ಅನೇಕ ಬಾರಿ ಅವರು ಮಾತನಾಡಬಾರದಂತಹ ವಿಷಯಗಳನ್ನು ಇತರರ ಮುಂದೆ ಮಾತನಾಡುತ್ತಾರೆ. ನಂತರ ಅವರು ವಿಷಾದಿಸಿದರೂ, ಆ ಹೊತ್ತಿಗೆ ವಿಷಯವು ಸಾಕಷ್ಟು ಮುಂದುವರೆದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದ ಜನರು ನಿಮ್ಮ ಸ್ನೇಹಿತರಾಗಿದ್ದರೆ, ನಿಮ್ಮ ರಹಸ್ಯ ವಿಷಯಗಳನ್ನೂ ಮಾತನಾಡುವಾಗ ಎಚ್ಚರಿಕೆಯಿಂದಿರಿ.

ಇದನ್ನೂ ಓದಿ- ಈ ಕಾರಣಗಳಿಗಾಗಿ ಚಂದ್ರಗ್ರಹಣದ ವೇಳೆ ಆಹಾರ ಸೇವನೆ ನಿಷೇಧ

ತುಲಾ ರಾಶಿ:
ಶುಕ್ರ ಗ್ರಹವು ತುಲಾ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ರಾಶಿಯ ಜನರು ಸಂಭಾಷಣೆಯಲ್ಲಿ ಬಹಳ ಪ್ರವೀಣರು. ಈ ಜನರು ತಮ್ಮ ಮಾತುಗಳಲ್ಲಿ ಜನರನ್ನು ಸಿಕ್ಕಿಹಾಕಿಸುತ್ತಾರೆ. ಈ ಜನರು ಇತರರ ವಿಷಯಗಳನ್ನು ಯಾವುದೇ ಮೂರನೇ ವ್ಯಕ್ತಿಗೆ ಹೇಳಲು ಹಿಂಜರಿಯುವುದಿಲ್ಲ.

ಧನು ರಾಶಿ:
ಧನು ರಾಶಿಯ ಜನರ ಮೇಲೆ ಗುರುವಿನ ಪ್ರಭಾವವಿದೆ. ಕ್ಷಣದಲ್ಲಿ ಯಾರನ್ನಾದರೂ ತಮ್ಮದಾಗಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ. ಈ ಜನರು ತಮಗರಿವಿಲ್ಲದೆಯೇ  ನಿಮ್ಮ ರಹಸ್ಯಗಳನ್ನು ಮಾತುಕತೆಗಳಲ್ಲಿ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಧನು ರಾಶಿಯವರಿಗೆ ನಿಮ್ಮ ರಹಸ್ಯಗಳನ್ನು ಬಹಿರಂಗಪಡಿಸುವ ಮೊದಲು, ಒಮ್ಮೆ ಯೋಚಿಸಿ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News