Google New Security Update: ಈ ಕ್ರಮ ಅನುಸರಿಸಿ ನಿಮ್ಮ ಖಾತೆಯನ್ನು ಮತ್ತಷ್ಟು ಸುರಕ್ಷಿತಗೊಳಿಸಿ

Google Security Update - ಹೊಸ ಭದ್ರತಾ ವೈಶಿಷ್ಟ್ಯದಲ್ಲಿ, ಗೂಗಲ್ ಎರಡು ಅಂಶದ ದೃಢೀಕರಣ ಭದ್ರತಾ ವ್ಯವಸ್ಥೆಯನ್ನು ಈ ಮೊದಲು ಪರಿಚಯಿಸಿದೆ. ಎರಡು ಅಂಶಗಳ ದೃಢೀಕರಣದಿಂದ, ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಪಾಸ್‌ವರ್ಡ್ ಜೊತೆಗೆ ಮೊಬೈಲ್ ಹಾಗೂ ಇಮೇಲ್‌ನಲ್ಲಿ ಭದ್ರತಾ ಕೋಡ್ ಅನ್ನು ಪಡೆಯಲಿದ್ದಾರೆ. ಈ ಕೋಡ್ ನಮೂದಿಸಿದ  ನಂತರವೇ ಅವರು ತಮ್ಮ ಖಾತೆಯನ್ನು ಬಳಸಬಹುದು.

Written by - Nitin Tabib | Last Updated : Nov 21, 2021, 03:44 PM IST
  • ಗೂಗಲ್ ಹೊಸ ಭದ್ರತಾ ನವೀಕರಣ ಬಿಡುಗಡೆ ಮಾಡಿದೆ.
  • Google ಬಳಕೆದಾರರ ಖಾತೆಯನ್ನು ರಕ್ಷಿಸಲು ಈ ಭದ್ರತಾ ನವೀಕರಣವನ್ನು ಅಪ್ಡೇಟ್ ಮಾಡಲಾಗಿದೆ.
  • ಹೊಸ ಸೆಕ್ಯುರಿಟಿ ಅಪ್ ಡೇಟ್ ಮೂಲಕ ಬಳಕೆದಾರರು ತಮ್ಮ ಪಾಸ್ ವರ್ಡ್ ಗಳನ್ನು ಹ್ಯಾಕ್ ಆಗದಂತೆ ರಕ್ಷಿಸಿಕೊಳ್ಳಬಹುದು.
Google New Security Update: ಈ ಕ್ರಮ ಅನುಸರಿಸಿ ನಿಮ್ಮ ಖಾತೆಯನ್ನು ಮತ್ತಷ್ಟು ಸುರಕ್ಷಿತಗೊಳಿಸಿ title=
Google New Security Update (File Photo)

Google Security Update - ಗೂಗಲ್ ಹೊಸ ಭದ್ರತಾ ನವೀಕರಣ (Google New Security Update) ಬಿಡುಗಡೆ ಮಾಡಿದೆ. Google ಬಳಕೆದಾರರ ಖಾತೆಯನ್ನು ರಕ್ಷಿಸಲು ಈ ಭದ್ರತಾ ನವೀಕರಣವನ್ನು ಅಪ್ಡೇಟ್ ಮಾಡಲಾಗಿದೆ. ಹೊಸ ಸೆಕ್ಯುರಿಟಿ ಅಪ್ ಡೇಟ್ ಮೂಲಕ ಬಳಕೆದಾರರು ತಮ್ಮ ಪಾಸ್ ವರ್ಡ್ ಗಳನ್ನು ಹ್ಯಾಕ್ ಆಗದಂತೆ ರಕ್ಷಿಸಿಕೊಳ್ಳಬಹುದು. ಗೂಗಲ್‌ಗಿಂತ ಮೊದಲು, ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಿಗೆ ಎರಡು ಅಂಶದ ದೃಢೀಕರಣ (Two Step Verification) ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದ್ದವು.

Google ನ ಹೊಸ ಭದ್ರತಾ ನವೀಕರಣದೊಂದಿಗೆ, ಬಳಕೆದಾರರ ವೈಯಕ್ತಿಕ ಮಾಹಿತಿಯು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಈ ಭದ್ರತೆಯನ್ನು ಯಾವುದೇ ಹ್ಯಾಕರ್‌ಗಳು ಭೇದಿಸಲು ಸಾಧ್ಯವಿಲ್ಲ ಎಂದು ಗೂಗಲ್ ಹೇಳಿಕೊಂಡಿದೆ.

ನವೆಂಬರ್ 9 ರಿಂದ ಗೂಗಲ್ ಹೊಸ ಭದ್ರತಾ ನವೀಕರಣವನ್ನು ಬಿಡುಗಡೆ ಮಾಡಿದೆ. ಈ ಭದ್ರತೆಯ ನಂತರ, ನೀವು Google ಖಾತೆಗೆ ಲಾಗಿನ್ ಮಾಡಲು  ಟೂ ಫ್ಯಾಕ್ಟರ್ ಅಥಂಟಿಕೆಶನ್  (2 ಹಂತದ ದೃಢೀಕರಣ) ಬಳಸಬೇಕಾಗುತ್ತದೆ.

ಹೊಸ ಭದ್ರತಾ ವೈಶಿಷ್ಟ್ಯದಲ್ಲಿ, ಗೂಗಲ್ ಎರಡು ಅಂಶದ ದೃಢೀಕರಣ ಭದ್ರತಾ ವ್ಯವಸ್ಥೆಯನ್ನು ಪರಿಚಯಿಸಿದೆ. ಎರಡು ಅಂಶಗಳ ದೃಢೀಕರಣದ ಕಾರಣ, ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಪಾಸ್‌ವರ್ಡ್ ಜೊತೆಗೆ ಮೊಬೈಲ್ ಹಾಗೂ ಇಮೇಲ್‌ನಲ್ಲಿ ಭದ್ರತಾ ಕೋಡ್ ಅನ್ನು ಪಡೆಯಲಿದ್ದಾರೆ. ಅದನ್ನು ಅವರ ಖಾತೆಗೆ ಅನ್ವಯಿಸಿದ ನಂತರವಷ್ಟೇ ಖಾತೆಯನ್ನು ಬಳಸಬಹುದು

Google Chrome ಬ್ರೌಸರ್‌ನ ಈ ಭದ್ರತಾ ವೈಶಿಷ್ಟ್ಯದಿಂದ  ಖಾತೆಗೆ ಬಳಸಲಾದ  ಪಾಸ್‌ವರ್ಡ್ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಸಹ ಕಂಡುಹಿಡಿಯಬಹುದು. ಬಳಕೆದಾರರು ಹೊಂದಿಸಿರುವ ಪಾಸ್‌ವರ್ಡ್ ಅನ್ನು ಎಷ್ಟು ಬಾರಿ ಬಳಸಲಾಗಿದೆ ಎಂಬುದನ್ನು ಸಹ ಕಂಡುಹಿಡಿಯಬಹುದು?

ಈ ಸೆಕ್ಯುರಿಟಿ ಫೀಚರ್ ಮೂಲಕ ಬಳಕೆದಾರರ ಪಾಸ್ ವರ್ಡ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ  ಎಂಬುದನ್ನು ಸಹ  ಕಂಡುಹಿಡಿಯಬಹುದು.

ಇದನ್ನೂ ಓದಿ-ಹೀಗೆ ಮಾಡಿದರೆ ಕ್ಷಣಾರ್ಧದಲ್ಲಿ ಹೆಚ್ಚಿಸಬಹುದು ಮೊಬೈಲ್ ಸ್ಟೋರೇಜ್

ಫೇಸ್ ಬುಕ್ ಹೊಸ ಫೀಚರ್
ಕಳೆದ ವರ್ಷ, ಕ್ವೈಟ್ ಮೋಡ್ ಎಂದು ಕರೆಯಲ್ಪಡುವ ಅಪ್ಲಿಕೇಶನ್‌ಗೆ ಫೇಸ್‌ಬುಕ್ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಈ ವೈಶಿಷ್ಟ್ಯದ ವಿಶೇಷತೆ  ಎಂದರೆ, ಇದರ ಮೂಲಕ ಬಳಕೆದಾರರು ತಮ್ಮ ಸಮಯವನ್ನು ಸುಲಭವಾಗಿ ನಿರ್ವಹಿಸಬಹುದು. ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಬಳಕೆದಾರರು ಫೇಸ್‌ಬುಕ್‌ನ ಎಲ್ಲಾ ಅಧಿಸೂಚನೆಗಳನ್ನು ಒಂದೇ ಬಾರಿಗೆ ಮ್ಯೂಟ್ ಮಾಡಬಹುದು.

ಇದನ್ನೂ ಓದಿ-Realme 5G Smartphone: ಕಡಿಮೆ ಬೆಲೆಯಲ್ಲಿ ಖರೀದಿಸಿ Realme 5G ಸ್ಮಾರ್ಟ್‌ಫೋನ್, ಭರ್ಜರಿ ಆಫರ್ ಲಭ್ಯ

ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದಾಗ, ಫೇಸ್‌ಬುಕ್‌ನಲ್ಲಿ ಬರುವ ಪುಶ್ ನೋಟಿಫಿಕೆಶನ್ ಗಳನ್ನು  ಮ್ಯೂಟ್ ಮಾಡಲಾಗುತ್ತದೆ. ಬಳಕೆದಾರರು ಬಯಸಿದರೆ, ಅವರು ಫೇಸ್‌ಬುಕ್ ಕ್ವೈಟ್ ಮೋಡ್‌ನ ವೈಶಿಷ್ಟ್ಯವನ್ನು ಎಷ್ಟು ಸಮಯದವರೆಗೆ ಇರಿಸಿಕೊಳ್ಳಬೇಕು ಎಂಬ ಸಮಯವನ್ನು ನಿಗದಿಪಡಿಸಬಹುದು.

ಇದನ್ನೂ ಓದಿ-Knowledge Story: ಬಾವಿ ವೃತ್ತಾಕಾರದಲ್ಲಿಯೇ ಏಕೆ ಇರುತ್ತದೆ, ಇದರ ಹಿಂದಿನ ವಿಜ್ಞಾನ ನಿಮಗೆ ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News