ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾದರೆ ಬಿಜೆಪಿಯನ್ನು ಸೋಲಿಸಬಹುದು-ಮಮತಾ ಬ್ಯಾನರ್ಜಿ

ದೇಶದ ಒಕ್ಕೂಟ ರಚನೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುವುದು ತುಂಬಾ ಸುಲಭ ಎಂದು ಬುಧವಾರ ಹೇಳಿದ್ದಾರೆ.

Written by - Zee Kannada News Desk | Last Updated : Dec 1, 2021, 06:15 PM IST
  • ದೇಶದ ಒಕ್ಕೂಟ ರಚನೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುವುದು ತುಂಬಾ ಸುಲಭ ಎಂದು ಬುಧವಾರ ಹೇಳಿದ್ದಾರೆ.
ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾದರೆ ಬಿಜೆಪಿಯನ್ನು ಸೋಲಿಸಬಹುದು-ಮಮತಾ ಬ್ಯಾನರ್ಜಿ title=
file photo

ನವದೆಹಲಿ: ದೇಶದ ಒಕ್ಕೂಟ ರಚನೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುವುದು ತುಂಬಾ ಸುಲಭ ಎಂದು ಬುಧವಾರ ಹೇಳಿದ್ದಾರೆ.

2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ "ಸಮಾನ ಮನಸ್ಸಿನ ಪಕ್ಷಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಅಥವಾ ಮೈತ್ರಿಯ ಪ್ರಯತ್ನದಲ್ಲಿ, ಬ್ಯಾನರ್ಜಿ ಅವರು ಮುಂಬೈಗೆ ಭೇಟಿ ನೀಡುತ್ತಿದ್ದಾರೆ, ಅಲ್ಲಿ ಅವರು ಎನ್‌ಸಿಪಿ ಮತ್ತು ಶಿವಸೇನೆಯ ಉನ್ನತ ನಾಯಕರನ್ನು ಭೇಟಿಯಾಗುತ್ತಿದ್ದಾರೆ.

ಇದನ್ನೂ ಓದಿ: ಮಗನಿಗೆ ಕಚ್ಚಿದ ನಾಯಿಯನ್ನು ಹೊಡೆದು ಕೊಂದ ವ್ಯಕ್ತಿ.. ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯ್ತು viral Video

ಮುಂಬೈನಲ್ಲಿ ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸಿದ ಬ್ಯಾನರ್ಜಿ,"ನೀವು ಹೆಚ್ಚಿನ ಸಮಯ ವಿದೇಶದಲ್ಲಿದ್ದರೆ, ರಾಜಕೀಯವನ್ನು ಹೇಗೆ ಮಾಡಲಾಗುತ್ತದೆ? ರಾಜಕೀಯವು ನಿರಂತರ ಪ್ರಯತ್ನವನ್ನು ಬಯಸುತ್ತದೆ. ಫೆಡರಲ್ ರಚನೆಯು ಬಲವಾಗಿರಬೇಕೆಂದು ನಾನು ಬಯಸುತ್ತೇನೆ.ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳು ಇದ್ದರೆ ಅದು ಉತ್ತಮವಾಗುತ್ತದೆ,ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದರೆ, ಬಿಜೆಪಿಯನ್ನು ಸೋಲಿಸುವುದು ಅತ್ಯಂತ ಸುಲಭದ ಆಟ"ಎಂದು ಹೇಳಿದ್ದಾರೆ.

'ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿವಿಧ ಪ್ರಾದೇಶಿಕ ಪಕ್ಷಗಳು ಸಿಬಿಐ, ಇಡಿ ಮತ್ತು ಇತರರನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಜೆಪಿಗೆ ಹೆದರುತ್ತಿವೆ.ನಾವು ಬಿಜೆಪಿ ವಿರುದ್ಧ ಹೋರಾಡುವ ರೀತಿಯಲ್ಲಿ ಇತರರಿಗೆ ಸಾಧ್ಯವಿಲ್ಲ. ನಮ್ಮ ತಂತ್ರವು ಎಲ್ಲಾ ಜನರಿಗಾಗಿ, ಸಮಾಜದ ಪ್ರತಿಯೊಂದು ವರ್ಗದ ವಿಶೇಷ ಗಮನದೊಂದಿಗೆ ಹೋರಾಡುವುದು.ಬಡವರಿಗೆ ನಾನು ಬದುಕಿರುವವರೆಗೂ ಹೋರಾಡುತ್ತೇನೆ"ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಹೇಳಿದ್ದಾರೆ.

ಇದನ್ನೂ ಓದಿ : ಹೊಸ ರೂಪಾಂತರಿ ‘ಓಮಿಕ್ರಾನ್’ ವೈರಸ್ ವಿರುದ್ಧವೂ ಕೆಲಸ ಮಾಡುತ್ತಾ COVAXIN..?

'ಉತ್ತರ ಪ್ರದೇಶದಲ್ಲಿ ನಾವು ಸ್ಪರ್ಧಿಸುವುದಿಲ್ಲ, ನಾವು ನಮ್ಮ ಸ್ನೇಹಿತರನ್ನು ಬೆಂಬಲಿಸುತ್ತೇವೆ, ಮಹಾರಾಷ್ಟ್ರದಲ್ಲಿ ನಾವು ನಮ್ಮ ಸ್ನೇಹಿತರನ್ನು ಬೆಂಬಲಿಸುತ್ತೇವೆ" ಎಂದು ಬ್ಯಾನರ್ಜಿ ಹೇಳಿದರು.ಅವರು ಮಂಗಳವಾರದಂದುಶಿವಸೇನೆ ನಾಯಕರಾದ ಸಂಜಯ್ ರಾವುತ್ ಮತ್ತು ಆದಿತ್ಯ ಠಾಕ್ರೆ ಅವರನ್ನು ಭೇಟಿ ಮಾಡಿದರು.

ಇದನ್ನೂ ಓದಿ : ಓಮಿಕ್ರಾನ್ ಪರಿಣಾಮ ಡೆಲ್ಟಾಗಿಂತಲೂ ಅಪಾಯಕಾರಿ ಎಂದ ತಜ್ಞರು...!

ಮಮತಾ ಅವರು ಬುಧವಾರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಮುಂಬೈನಲ್ಲಿರುವ ಅವರ ನಿವಾಸ ಸಿಲ್ವರ್ ಓಕ್~ನಲ್ಲಿ ಭೇಟಿಯಾಗಲಿದ್ದಾರೆ.ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆಯೂ ಅವರು ಇತ್ತೀಚೆಗೆ ಮಾತನಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News