Omicron in India: ಬಂದೇ ಬರುತ್ತಾ ಕೊರೊನಾ 3ನೇ ಅಲೆ? ವಿದೇಶದಿಂದ ಮುಂಬೈಗೆ ಬಂದ 100 ಯಾತ್ರಿಗಳು ನಾಪತ್ತೆ

Omicron in India: ಓಮಿಕ್ರಾನ್‌ನ (Omicron) ಅಪಾಯವನ್ನು ಗ್ರಹಿಸಿದ ಮಹಾರಾಷ್ಟ್ರ (Maharashra) ಸರ್ಕಾರವು ಅಪಾಯದ ದೇಶಗಳಿಂದ ಭಾರತಕ್ಕೆ ಬರುವ ಜನರು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿ ಇರಲು ನಿಯಮವನ್ನು ಮಾಡಿದೆ.

Written by - Nitin Tabib | Last Updated : Dec 7, 2021, 10:54 AM IST
  • ಅಪಾಯದ ದೇಶಗಳಿಂದ ಬಂದ 100 ಜನ ನಾಪತ್ತೆ
  • ವರದಿ ನೀಡಿದ ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೋರೇಶನ್.
  • ಥಾಣೆ ಜಿಲ್ಲೆಗೆ ವಿದೇಶದಿಂದ ಬಂದ 295 ವಿದೇಶಿ ಪ್ರಯಾಣಿಕರಲ್ಲಿ 109 ಪ್ರಯಾಣಿಕರ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ.
Omicron in India: ಬಂದೇ ಬರುತ್ತಾ ಕೊರೊನಾ 3ನೇ ಅಲೆ? ವಿದೇಶದಿಂದ ಮುಂಬೈಗೆ ಬಂದ 100 ಯಾತ್ರಿಗಳು ನಾಪತ್ತೆ title=
Omicron In India (File Photo)

Omicron in India: ಮಾರಣಾಂತಿಕ ಕೊರೊನಾ ವೈರಸ್‌ನ (Coronavirus) ಓಮಿಕ್ರಾನ್ ರೂಪಾಂತರದ ಸೋಂಕಿನ ಅಪಾಯವು ದೇಶದಲ್ಲಿ ಹೆಚ್ಚುತ್ತಿದೆ. ನಿನ್ನೆ, ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ (Mumbai) ಇನ್ನೂ ಇಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಅದರ ನಂತರ ಈ ರೂಪಾಂತರದಿಂದ ಸೋಂಕಿತರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. Omicron ರೂಪಾಂತರಿಯ ಈ ಅಪಾಯದ ನಡುವೆ, ಆತಂಕ ಹುಟ್ಟಿಸುವ ಮಾಹಿತಿಯೊಂದು ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ವಿದೇಶದಿಂದ ಮಹಾರಾಷ್ಟ್ರಕ್ಕೆ ಆಗಮಿಸಿರುವ ಸುಮಾರು 100 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಈ ಜನರ ಬಗ್ಗೆ ಆಡಳಿತ ಈಗ ಮಾಹಿತಿ ಸಂಗ್ರಹಿಸುತ್ತಿದೆ.

295 ವಿದೇಶಿ ಪ್ರಯಾಣಿಕರಲ್ಲಿ 109 ಪ್ರಯಾಣಿಕರ ಪತ್ತೆಯೇ ಇಲ್ಲ
ಥಾಣೆ ಜಿಲ್ಲೆಗೆ ವಿದೇಶದಿಂದ ಬಂದ 295 ವಿದೇಶಿ ಪ್ರಯಾಣಿಕರಲ್ಲಿ 109 ಪ್ರಯಾಣಿಕರ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ ಎಂದು ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಮುಖ್ಯಸ್ಥ ವಿಜಯ್ ಸೂರ್ಯವಂಶಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇವರಲ್ಲಿ ಕೆಲವರ ಮೊಬೈಲ್ ಫೋನ್‌ಗಳು ಆಫ್ ಆಗಿವೆ ಎಂದು ವಿಜಯ್ ಸೂರ್ಯವಂಶಿ ಹೇಳಿದ್ದಾರೆ. ಅಷ್ಟೇ ಅಲ್ಲ ವಿದೇಶದಿಂದ ಬಂದಿದ್ದ ಪ್ರಯಾಣಿಕರು ನೀಡಿದ ವಿಳಾಸದಲ್ಲಿ ಮನೆಗಳಿಗೆ ಬೀಗ ಇರುವುದು ಗಮನಕ್ಕೆ ಬಂದಿದೆ. 

ಇದನ್ನೂ ಓದಿ-ಭಾರತದಲ್ಲಿ ಮಕ್ಕಳಿಗೆ COVID ಲಸಿಕೆ ಇಲ್ಲದಿರುವ ಈ ಸಮಯದಲ್ಲಿ, ನಿಮ್ಮ ಮಕ್ಕಳನ್ನು Omicronನಿಂದ ರಕ್ಷಿಸುವುದು ಹೇಗೆ?

ಒಮಿಕ್ರಾನ್‌ನ ಬೆದರಿಕೆಯನ್ನು ಗ್ರಹಿಸಿ, ಮಹಾರಾಷ್ಟ್ರ ಸರ್ಕಾರವು ಅಪಾಯದ ದೇಶಗಳಿಂದ ಭಾರತಕ್ಕೆ ಬರುವ ಜನರಿಗೆ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಲು ನಿಯಮ ಮಾಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಅಂತಹವರಿಗೆ ಏಳು ದಿನಗಳ ನಂತರ ಮತ್ತೆ ಕರೋನಾ (Covid-19 In India) ಪರೀಕ್ಷೆ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ. 

ಇದನ್ನೂ ಓದಿ-ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಮಾಸ್ಕ್ ಇಲ್ಲದೇ ಹೊರಬರುತ್ತಿದ್ದಾರೆ: ಆಘಾತಕಾರಿ ವರದಿ

ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. 
ಸೋಮವಾರ, ಮುಂಬೈನಲ್ಲಿ ಇಬ್ಬರಲ್ಲಿ ಓಮಿಕ್ರಾನ್  ರೂಪಾಂತರಿ ಇರುವುದು  ದೃಢಪಡಿಸಲಾಗಿದೆ. ಇಬ್ಬರೂ ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದರು ಮತ್ತು ಅವರ ಕರೋನಾ ವರದಿ ಧನಾತ್ಮಕ ಹೊರಬಂದಿತ್ತು. ಇದರ ನಂತರ, ಮಾದರಿಯನ್ನು ಪುಣೆಯ ಎನ್‌ಐವಿಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದ್ದು ಅದು ಓಮಿಕ್ರಾನ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿದಾಗ, ಅವರ ವರದಿ ಪಾಸಿಟಿವ್ ಬಂದಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ, ದೇಶಾದ್ಯಂತ 23 ಜನರಲ್ಲಿ ಓಮಿಕ್ರಾನ್ ರೂಪಾಂತರಗಳನ್ನು ದೃಢೀಕರಿಸಲಾಗಿದೆ. 

ಇದನ್ನೂ ಓದಿ-Omicron variant: ಹೊಸ ರೂಪಾಂತರದ ರೋಗಲಕ್ಷಣಗಳ ಬಗ್ಗೆ ತಜ್ಞರು ಹೇಳುವುದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News