ನವದೆಹಲಿ : ಐಪಿಎಲ್ ಮೆಗಾ ಹರಾಜು (IPL Mega Auction) ದಿನಾಂಕಗಳು ಪ್ರಕಟವಾಗಿದ್ದು, ಮುಂದಿನ ವರ್ಷದಿಂದ ಎಲ್ಲಾ ತಂಡಗಳು ಬದಲಾಗಲಿವೆ. ಇದೀಗ ಅಭಿಮಾನಿಗಳೆಲ್ಲರ ಕಣ್ಣು ಐಪಿಎಲ್ ಮೆಗಾ ಹರಾಜಿನತ್ತ ನೆಟ್ಟಿದೆ. ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಬಲಿಷ್ಠ ಆಟಗಾರರನ್ನು ತಂಡಗಳು ಉಳಿಸಿಕೊಂಡಿಲ್ಲ. ಇದೀಗ ಅವರು ಐಪಿಎಲ್ (IPL) ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಈ ಆಟಗಾರರ ಮೇಲೆ ಬಿಗ್ ಬಿಡ್ಡಿಂಗ್ ಮಾಡಬಹುದು ಮತ್ತು ಐಪಿಎಲ್ ಮೆಗಾ ಹರಾಜಿನಲ್ಲಿ ಈ ಆಟಗಾರರ ಮೇಲೆ ಹಣದ ಹೊಳೆಯೇ ಹರಿಯುವುದಂತೂ ಖಚಿತ.
1.ಡೇವಿಡ್ ವಾರ್ನರ್
ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ (David Warner) ಅವರನ್ನು ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಉಳಿಸಿಕೊಂಡಿಲ್ಲ. ಈ ಬ್ಯಾಟ್ಸ್ಮನ್ ಕೆಲವೇ ಎಸೆತಗಳಲ್ಲಿ ಪಂದ್ಯವನ್ನು ಬದಲಾಯಿಸಿ ಬಿಡುವ ಸಾಮರ್ಥ್ಯ ಹೊಂದಿದ್ದಾರೆ. ವಾರ್ನರ್ ಐಪಿಎಲ್ನಲ್ಲಿ (IPL) 5000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಹೈದರಾಬಾದ್ ತಂಡವು ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಆಟಗಾರನನ್ನು ಖರೀದಿಸಲು ತಂಡಗಳು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು.
ಇದನ್ನೂ ಓದಿ : South Africa vs India: ಕೆ.ಎಲ್.ರಾಹುಲ್ ಭರ್ಜರಿ ಅಜೇಯ ಶತಕಕ್ಕೆ ಹರಿದು ಬಂದು ಮೆಚ್ಚುಗೆ ಸುರಿಮಳೆ
2. ಬೆನ್ ಸ್ಟೋಕ್ಸ್
ಬೆನ್ ಸ್ಟೋಕ್ಸ್ (Ben Stokes) ಯಾವುದೇ ತಂಡಕ್ಕೆ ಲಾಭದಾಯಕವಾಗಿ ಪರಿಣಮಿಸಬಹುದು. ಈ ಆಟಗಾರನು ಎಲ್ಲಾ ಮೂರು ವಿಭಾಗಗಳಲ್ಲಿ ತನ್ನ ಶಕ್ತಿಯನ್ನು ತೋರಿಸಬಹುದು. ಸ್ಟೋಕ್ಸ್ ಬ್ಯಾಟಿಂಗ್ ಹಾಗೂ ಅಪಾಯಕಾರಿ ಬೌಲಿಂಗ್ನಲ್ಲಿ ಇವರು ಪರಿಣಿತರು. ಸ್ಟೋಕ್ಸ್ ಅದ್ಭುತ ಫೀಲ್ಡರ್ ಕೂಡ ಆಗಿದ್ದು, ಅವರನ್ನು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಉಳಿಸಿಕೊಂಡಿಲ್ಲ. ಹೀಗಿರುವಾಗ ಇಂಗ್ಲೆಂಡಿನ ಈ ಆಟಗಾರನಿಗೆ ದೊಡ್ಡ ಮೊತ್ತದ ಬಿಡ್ ಬರಬಹುದು.
3. ರವಿಚಂದ್ರನ್ ಅಶ್ವಿನ್
ವಿಶ್ವದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ (Ravichandran Ashwin) ತಮ್ಮ ಮಾರಕ ಬೌಲಿಂಗ್ಗೆ ಹೆಸರುವಾಸಿಯಾಗಿದ್ದಾರೆ. ವಿಕೆಟ್ ಪಡೆಯುವ ಇವರ ಕಲೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಟಿ20 ಕ್ರಿಕೆಟ್ನಲ್ಲಿ ಅಶ್ವಿನ್ ಬೌಲಿಂಗ್ ಅದ್ಬುತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಈ ಮಾರಕ ಆಟಗಾರನನ್ನು ಉಳಿಸಿಕೊಂಡಿಲ್ಲ. ಐಪಿಎಲ್ ಅನ್ನು ಯಾವಾಗಲೂ ಭಾರತದ ಪಿಚ್ಗಳಲ್ಲಿ ಆಡಲಾಗುತ್ತದೆ. ಈ ಪಿಚ್ಗಳಲ್ಲಿ ಅಶ್ವಿನ್ಗಿಂತ ಅಪಾಯಕಾರಿ ಯಾರೂ ಇಲ್ಲ.
ಇದನ್ನೂ ಓದಿ : South Africa vs India, 1st Test: ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ
4. ಇಶಾನ್ ಕಿಶನ್
ಮುಂಬೈನ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ (Ishan Kishan) ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ (Mumbai Indians) ತಂಡ ಅವರನ್ನು ಉಳಿಸಿಕೊಂಡಿಲ್ಲ. ಐಪಿಎಲ್ಗೆ ಹೊಸದಾಗಿ ಸಂಬಂಧ ಹೊಂದಿರುವ ಎರಡು ತಂಡಗಳು ಅವರನ್ನು ತಮ್ಮ ಕ್ಯಾಂಪ್ ನಲ್ಲಿ ಸೇರಿಸಿಕೊಳ್ಳಬಹುದು. ಈ ಬ್ಯಾಟ್ಸ್ಮನ್ ತನ್ನಫಾರ್ಮ್ ನಲ್ಲಿದ್ದಾಗ, ಯಾವುದೇ ಬೌಲಿಂಗ್ ದಾಳಿಯನ್ನು ಪುಡಿಗಟ್ಟ ಬಲ್ಲರು .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.