WATCH:ಕಣ್ತುಂಬಿ ಬರುವ ದೃಶ್ಯ.. ನಿರ್ಗತಿಕನನ್ನು ಅಪ್ಪಿಕೊಂಡ ಶ್ವಾನ, ಮೂಕಜೀವದ ಮುಗ್ಧ ಪ್ರೀತಿಗೆ ಮನಸೋತ ನೆಟ್ಟಿಗರು

DOG HUGS HOMELESS: ನಾಯಿಗಳು ಮನುಷ್ಯನ ಆತ್ಮೀಯ ಸ್ನೇಹಿತ ಎಂಬ ಮಾತು ಈ ವಿಡಿಯೋ ಮೂಲಕ ಸಾಬೀತಾಗಿದೆ. 

Edited by - Zee Kannada News Desk | Last Updated : Jan 2, 2022, 04:27 PM IST
  • ನಿರ್ಗತಿಕನನ್ನು ಅಪ್ಪಿಕೊಂಡ ಶ್ವಾನ
  • ವೈರಲ್ ಆದ ಭಾವನಾತ್ಮಕ ವಿಡಿಯೋ
  • ಮೂಕಜೀವದ ಮುಗ್ಧ ಪ್ರೀತಿಗೆ ಮನಸೋತ ನೆಟ್ಟಿಗರು
WATCH:ಕಣ್ತುಂಬಿ ಬರುವ ದೃಶ್ಯ.. ನಿರ್ಗತಿಕನನ್ನು ಅಪ್ಪಿಕೊಂಡ ಶ್ವಾನ, ಮೂಕಜೀವದ ಮುಗ್ಧ ಪ್ರೀತಿಗೆ ಮನಸೋತ ನೆಟ್ಟಿಗರು  title=
ಶ್ವಾನ

Dog hugged the homeless person: ಈ ಜಗತ್ತಿನಲ್ಲಿ ಅನೇಕ ಜನರಿಗೆ ಮನೆ ಇಲ್ಲ. ಇದಲ್ಲದೇ ಲೋಕದಲ್ಲಿ ಇಂಥವರು ಅನೇಕರಿದ್ದಾರೆ. ಅವರಿಗೆ ಬಹಳಷ್ಟು ದುಃಖಗಳಿವೆ. ಆದರೆ ದುಃಖವನ್ನು ಹಂಚಿಕೊಳ್ಳುವ ವ್ಯಕ್ತಿ ಸಿಕ್ಕಾಗ ಈ ದುಃಖ ಕಡಿಮೆ ಎನಿಸುತ್ತದೆ. ಅದು ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಯೇ ಆಗಿರಲಿ ನೋವು ಕೇಳುವ ಮನಸ್ಸೊಂದು ಬೇಕು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವು ಭಾವುಕರಾಗುವುದು ಖಚಿತ. ಈ ವಿಡಿಯೋದಲ್ಲಿ, ನಾಯಿಯೊಂದು ನಿರ್ಗತಿಕ ವ್ಯಕ್ತಿಯನ್ನು ತಬ್ಬಿಕೊಂಡು ಬೆಂಬಲ ನೀಡುತ್ತಿದೆ. ಈ ವಿಡಿಯೋ ಮೂಲಕ ಈ ಶ್ವಾನ ಜನರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದೆ. ವಿಡಿಯೋದಲ್ಲಿ, ನಾಯಿಯೊಂದು ದುಃಖಿತ ಮತ್ತು ನಿರ್ಗತಿಕ ವ್ಯಕ್ತಿಯನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ.

ಈ ವಿಡಿಯೋ ಮೂಲಕ ನಾಯಿಗಳು ಮನುಷ್ಯನ ಆತ್ಮೀಯ ಗೆಳೆಯ ಎಂಬ ಮಾತು ಸತ್ಯವಾಗಿದೆ. @buitengebieden_ ಹೆಸರಿನ ಖಾತೆಯ ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 

ಮೊದಲನೆಯದಾಗಿ, ಈ ವಿಡಿಯೋದಲ್ಲಿ ನಿರ್ಗತಿಕ ವ್ಯಕ್ತಿಯೊಬ್ಬರು ದುಃಖದಲ್ಲಿ ಕುಳಿತಿದ್ದಾರೆ. ಅದೇ ಸಮಯದಲ್ಲಿ, ಆ ವ್ಯಕ್ತಿಯ ಬಳಿ ಶ್ವಾನವೊಂದು ಬರುತ್ತದೆ. ಈ ನಾಯಿ ಆ ವ್ಯಕ್ತಿಯನ್ನು ನೋಡುತ್ತದೆ.

 

 

ಸ್ವಲ್ಪ ಸಮಯದ ನಂತರ ನಾಯಿ ವ್ಯಕ್ತಿಯನ್ನು ತಬ್ಬಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ನಾಯಿಯು ವ್ಯಕ್ತಿಯ ಸಮಸ್ಯೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಅವನನ್ನು ಅಪ್ಪಿಕೊಂಡು ತನ್ನ ದುಃಖವನ್ನು ಹಂಚಿಕೊಳ್ಳಲು ಬಯಸುತ್ತದೆ ಎಂದು ಇದರಿಂದ ಊಹಿಸಬಹುದು. 

ಈ ವಿಡಿಯೋ ನೋಡಿದ ಹಲವು ಬಳಕೆದಾರರು ನಾಯಿಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋ ಇದುವರೆಗೆ ಸುಮಾರು 7 ಲಕ್ಷ ವೀಕ್ಷಣೆ ಪಡೆದಿದೆ. ಸುಮಾರು 50 ಸಾವಿರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 

ಇದನ್ನೂ ಓದಿ: Horrible Video: ಬೆನ್ನಟ್ಟಿ ಬಂದು ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, ಬೆಚ್ಚಿಬೀಳಿಸುತ್ತೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News