ಲಂಚ ಪಡೆದ ಆರೋಪ: ಮಡಿವಾಳ ಠಾಣೆ ಇನ್ಸ್ ಪೆಕ್ಟರ್ ಸಸ್ಪೆಂಡ್..!

ಲಂಚ ಪಡೆದ ಆರೋಪದಡಿ ಮಡಿವಾಳ ಠಾಣೆ ಇನ್ಸ್ಪೆಕ್ಟರ್ ಓರ್ವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.

Written by - Zee Kannada News Desk | Last Updated : Jan 3, 2022, 06:09 PM IST
  • ಲಂಚ ಪಡೆದ ಆರೋಪದಡಿ ಬೆಂಗಳೂರಿನ ಮಡಿವಾಳ ಇನ್ಸ್ ಪೆಕ್ಟರ್ ಸಸ್ಪೆಂಡ್
  • ಸುನೀಲ್ ನಾಯಕ್ ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ
  • ಲಂಚ ಪಡೆದು ವಾರೆಂಟ್ ಮೇಲೆ ಕರೆತಂದ ಆರೋಪಿ ಅಜಯ್ & ಪೋಷಕರನ್ನು ಬಿಟ್ಟು ಕಳಿಸಿದ್ದ ಪೊಲೀಸರು
ಲಂಚ ಪಡೆದ ಆರೋಪ: ಮಡಿವಾಳ ಠಾಣೆ ಇನ್ಸ್ ಪೆಕ್ಟರ್ ಸಸ್ಪೆಂಡ್..!  title=
ಡಿಸಿಪಿ ವರದಿ ಆಧರಿಸಿ ಕಮಿಷನರ್ ಕಮಲ್ ಪಂತ್ ಆದೇಶ

ಬೆಂಗಳೂರು: ಲಂಚ ಪಡೆದ ಆರೋಪದಡಿ ಮಡಿವಾಳ ಠಾಣೆ ಇನ್ಸ್ಪೆಕ್ಟರ್(Madiwala Police Station Inspector) ಓರ್ವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್(Kamal Pant) ಆದೇಶ ಹೊರಡಿಸಿದ್ದಾರೆ. ಮಡಿವಾಳ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ನಾಯಕ್(Sunil Naik) ಅಮಾನತು ಆಗಿರುವ ಅಧಿಕಾರಿ ಎಂದು ಹೇಳಲಾಗಿದೆ.

ವರದಕ್ಷಿಣೆ ಕಿರುಕುಳ ಸಂಬಂಧ ಅಜಯ್ ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್ ಗೆ ಹಾಜರಾಗದೇ ಇದುದ್ದರಿಂದ ಆರೋಪಿ ವಿರುದ್ಧ ವಾರಂಟ್(Arrest Warrant Case)ಜಾರಿ ಮಾಡಲಾಗಿತ್ತು. ಈ ಹಿನ್ನೆಲೆ ಮುಂಬೈಯಿಂದ ಆರೋಪಿ ಅಜಯ್ ನನ್ನು ಪೊಲೀಸರು ಕರೆತಂದಿದ್ದರು.  

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಡಿ.ಕೆ.ಸುರೇಶ್ & ಅಶ್ವತ್ಥ್ ನಾರಾಯಣ್ ಫೈಟ್..!

ಹೀಗೆ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಲಂಚ(Bribery Charges) ಪಡೆದು ಅಜಯ್ & ಆತನ ಪೋಷಕರನ್ನು ಬಿಟ್ಟು ಕಳುಹಿಸಿದ್ದರು. ಪೊಲೀಸರಿಗೆ ಲಂಚ ಕೊಡುವ ವಿಡಿಯೋ ಮಾಡಿದ ಆರೋಪಿ ಅಜಯ್ ಕಮಿಷನರ್ ಕಮಲ್ ಪಂಥ್ ಗೆ ನೀಡಿದ್ದ. ಈ ವಿಡಿಯೋ ಆಧರಿಸಿ ಡಿಸಿಪಿ ಶ್ರೀನಾಥ್ ಜೋಶಿಗೆ ವರದಿ ಸಲ್ಲಿಸುವಂತೆ ಕಮಲ್ ಪಂಥ್ ಕೇಳಿದ್ದರು. ನಂತರ ಡಿಸಿಪಿ ವರದಿ ಆಧರಿಸಿ ಮಡಿವಾಳ ಇನ್ಸ್ಪೆಕ್ಟರ್ ಸುನಿಲ್ ನಾಯಕ್ ನನ್ನು ಸಸ್ಪೆಂಡ್(Sunil Naik Suspended) ಮಾಡಿ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಪ್ರಕರಣಗಳು ಹೆಚ್ಚಾದರೆ ಲಾಕ್ ಡೌನ್ ಮಾಡಬಹುದು: ಕೃಷಿ ಸಚಿವ ಬಿ.ಸಿ.ಪಾಟೀಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News