ಕಾಂಗ್ರೆಸ್ ಗೆ ಟಕ್ಕರ್: ಜ.26ರಿಂದ ಜೆಡಿಎಸ್ ನಿಂದ ‘ಜನತಾ ಜಲಧಾರೆ’ ಆಂದೋಲನ

ಈ ಆಂದೋಲನಕ್ಕೆ ಪಕ್ಷದ ಶಾಸಕರು, ಮಾಜಿ ಸಚಿವರು, ಹಿರಿಯ ಮುಖಂಡರ ನೇತೃತ್ವದಲ್ಲಿ 15 ತಂಡಗಳನ್ನು ರಚಿಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Written by - Zee Kannada News Desk | Last Updated : Jan 8, 2022, 08:23 AM IST
  • ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ‘ಜನತಾ ಜಲಧಾರೆ ಆಂದೋಲನ’ ಯಾತ್ರೆ ಕೈಗೊಳ್ಳಲಾಗುವುದು
  • ನೀರಾವರಿ ಕುರಿತ ಕೇಂದ್ರದ ಅನ್ಯಾಯ, ಕಿರುಕುಳದ ಬಗ್ಗೆ ಮನವರಿಕೆ ಮಾಡಲು ಜನರ ಬಳಿ ಹೋಗುತ್ತೇವೆ
  • ಕೇಂದ್ರ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದ ಕುಮಾರಸ್ವಾಮಿ
ಕಾಂಗ್ರೆಸ್ ಗೆ ಟಕ್ಕರ್: ಜ.26ರಿಂದ ಜೆಡಿಎಸ್ ನಿಂದ ‘ಜನತಾ ಜಲಧಾರೆ’ ಆಂದೋಲನ title=
ಜೆಡಿಎಸ್ ನಿಂದ ‘ಜನತಾ ಜಲಧಾರೆ’ ಆಂದೋಲನ

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್(Congress)ನಾಳೆಯಿಂದ(ಜ.9) ‘ಮೇಕೆದಾಟು ಪಾದಯಾತ್ರೆ’ ಹಮ್ಮಿಕೊಂಡಿದೆ. ಇದೀಗ ‘ಕೈ’ನಾಯಕರಿಗೆ ಟಕ್ಕರ್ ಕೊಡಲು ಜೆಡಿಎಸ್ ಕೂಡ ‘ಜನತಾ ಜಲಧಾರೆ ಆಂದೋಲನ’ ಆರಂಭಿಸುತ್ತಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜನವರಿ 26ರಿಂದ ‘ಜನತಾ ಜಲಧಾರೆ ಆಂದೋಲನ’(Janatha Jaladhare Andolana) ಪ್ರಾರಂಭವಾಗಲಿದ್ದು, 2023ರ ಚುನಾವಣೆಯವರೆಗೂ ಮುಂದುವರೆಯಲಿದೆ. ನದಿ ಮೂಲಗಳಲ್ಲಿರುವ 51 ಸ್ಥಳಗಳಿಗೆ ಯಾತ್ರೆ ಮೂಲಕ ಭೇಟಿ ನೀಡಲಾಗುವುದು ಅಂತಾ ಹೇಳಿದ್ದಾರೆ.

ಈ ಯಾತ್ರೆಯ ಮೂಲಕ ನೀರಾವರಿ ಯೋಜನೆಗೆ ಸಂಬಂಧಿಸಿ ಕೇಂದ್ರ(Central government)ದ ಅನ್ಯಾಯ ಹಾಗೂ ಕಿರುಕುಳದ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು. ಆಂದೋಲನಕ್ಕೆ ಪಕ್ಷದ ಶಾಸಕರು, ಮಾಜಿ ಸಚಿವರು, ಹಿರಿಯ ಮುಖಂಡರ ನೇತೃತ್ವದಲ್ಲಿ 15 ತಂಡಗಳನ್ನು ರಚಿಸಲಾಗುವುದು. ಈ ತಂಡಗಳು ನದಿ ಮೂಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಜಲ ಸಂಗ್ರಹಿಸಲಿವೆ, ಜನವರಿ 26ರಂದು ಆಂದೋಲನ ಪ್ರಾರಂಭವಾಗುವುದು ಖಚಿತ. ಒಂದು ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಕೆಲ ದಿನಗಳವರೆಗೆ ಮುಂದೂಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಆನ್‍ಲೈನ್ ಪಾಠ ಕೇಳಲು ಟ್ಯಾಬ್ ವಿತರಣೆ: ಇಂದೇ ಅರ್ಜಿ ಸಲ್ಲಿಸಿ

ಜೆಡಿಎಸ್(JDS)ಗೆ ಸಂಪೂರ್ಣ ಬಹುಮತದೊಂದಿಗೆ 5 ವರ್ಷಗಳ ಪೂರ್ಣಾವಧಿ ಅಧಿಕಾರ ನೀಡಿದರೆ ರಾಜ್ಯದ ಎಲ್ಲಾ ನದಿಗಳ ನೀರಿನ ಸಮರ್ಪಕ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಬರುವ ಭರವಸೆಯೊಂದಿಗೆ ರಾಜ್ಯದ ಜನರ ಎದುರು ಬೆಂಬಲ ಕೋರಲಾಗುವುದು ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದ್ದಾರೆ.  

ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶುಭಸಂಕಲ್ಪ

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ(HD Kumaraswamy), ‘ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಾವು ಶುಭಸಂಕಲ್ಪ ಮಾಡಿದ್ದೇವೆ. ಸಸ್ಯ ಶ್ಯಾಮಲ ಕೃಷಿಗೆ ಸಮೃದ್ಧ ನೀರು, ಜಲ ಶ್ಯಾಮಲ ಕುಡಿಯಲು ಸಮೃದ್ಧ ನೀರು. ಈ ಗುರಿಯೊಂದಿಗೆ ಜೆಡಿಎಸ್ ಪಕ್ಷವು ‘ಜನತಾ ಜಲಧಾರೆʼ ಕಾರ್ಯಕ್ರಮ ರೂಪಿಸಿದೆ. ಜ.26ರಿಂದ ರಾಜ್ಯಾದ್ಯಂತ ಪವಿತ್ರ ನದಿ ಜಲ ಸಂಗ್ರಹಕ್ಕೆ ಚಾಲನೆ ಸಿಗಲಿದ್ದು, ಕರುನಾಡಿನಲ್ಲಿ ಜಲಜಾತ್ರೆ ಕಳೆಗಟ್ಟಲಿದೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Road Accident: ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ

ಬೆಂಗಳೂರಿನ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ(HD Devegowda)ರ ಆಶೀರ್ವಾದದೊಂದಿಗೆ ಜಲ ಸಂಗ್ರಹ ಮಾಡುವ ಕಲಶವುಳ್ಳ ‘ಗಂಗಾ ರಥʼವನ್ನು ಅನಾವರಣಗೊಳಿಸಲಾಗಿದೆ. ಹಾಗೆಯೇ ‘ಜನತಾ ಜಲಧಾರೆʼ ಲಾಂಛನವನ್ನೂ ಬಿಡುಗಡೆ ಮಾಡಲಾಗಿದೆ ಅಂತಾ ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News