ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ (Matrimonial Website) ಯುವತಿಯರನ್ನ ಸಂಪರ್ಕಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಜೊತೆಗೆ, ಹೆಸ್ಕಾಂನಲ್ಲಿ ಕೆಲಸ ಕೊಡಿಸ್ತೀನಿ ಎಂದು ಮರಳು ಮಾಡುತ್ತಿದ್ದ. ಆನ್ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಂಡು ಬಳಿಕ ಮೋಸ ಮಾಡುತ್ತಿದ್ದ. ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ತಂದೆ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೃತಪಟ್ಟ ಹಿನ್ನೆಲೆ, ಅನುಕಂಪ ಆಧಾರದ ಮೇಲೆ ಮಗನಿಗೆ ಲೈನ್ ಮ್ಯಾನ್ ಕೆಲಸ ಸಿಕ್ಕಿತ್ತು. ಬಳಿಕ 8 ತಿಂಗಳ ಕಾಲ ಲೈಮ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಆರೋಪಿ. ಈತನನ್ನು ಬಿಜಾಪುರದಿಂದ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
2013 ರಲ್ಲಿ ಮುದ್ದೇಬಿಹಾಳ ಮೂಲದ 23 ವರ್ಷದ ಯುವತಿಯನ್ನ ಕೊಲೆ ಮಾಡಿದ ಆರೋಪವು ಈತನ ಮೇಲಿದೆ. ಈ ಪ್ರಕರಣದಲ್ಲಿ ಎರಡು ವರ್ಷ ಜೈಲು ವಾಸ ಅನುಭವಿಸಿ ಹೊರಬಂದಿದ್ದ.
ಬಳಿಕ ಜೀವನ ನಿರ್ವಹಣೆಗೆ ಬೇರೆ ದಾರಿ ಕಾಣದೆ ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ ಚಾಲಕಿ, ಹುಬ್ಬಳ್ಳಿಯ ಹೆಸ್ಕಾಂನಲ್ಲಿ ಸೆಕ್ಷನ್ ಆಫೀಸರ್ ಆಗಿರೋದಾಗಿ ಹೇಳಿಕೊಂಡಿದ್ದ.
ಸುಮಾರು 26 ಜನ ಹೆಣ್ಣುಮಕ್ಕಳಿಗೆ ನಿಮ್ಮ ಪ್ರೊಫೈಲ್ ಇಷ್ಟ ಆಗಿದೆ ಎಂದು ನಂಬಿಸಿದ್ದ ಈ ಕಿಲಾಡಿ, ಬಳಿಕ ಅವರ ಕುಟುಂಬದ ಮಾಹಿತಿ ಪಡೆದು, ಎಕ್ಸಾಂ ಇಲ್ಲದೇ ಹೆಸ್ಕಾಂನಲ್ಲಿ ಕೆಲ್ಸ ಕೊಡಿಸ್ತೀನಿ ಎಂದು ಹೇಳಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಬಳಿಕ ಅವರಿಂದ ಹಣ ಪಡೆದು ಯಾಮಾರಿಸುತ್ತಿದ್ದ. ಬಂದ ಹಣದಲ್ಲಿ ಗೋವಾ, ಪಾಂಡಿಚೇರಿ ಸೇರಿ ವಿವಿಧೆಡೆ ಟ್ರಿಪ್ ಹೊಡೆದು ಮೋಜು ಮಾಡುತ್ತಿದ್ದ.
ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಖಾತೆಯನ್ನೂ ಪೊಲೀಸರು ಫ್ರೀಜ್ ಮಾಡಿದ್ದಾರೆ. ಆತನ ಬ್ಯಾಂಕ್ ಅಕೌಂಟ್ ನಲ್ಲಿ 1 ಲಕ್ಷದ 66 ಸಾವಿರದ 695 ರೂ. ಬ್ಯಾಲೆನ್ಸ್ ಇರುವುದು ತಿಳಿದುಬಂದಿದೆ.
ಇದನ್ನೂ ಓದಿ: ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ, ₹1 ಕೋಟಿ ಹಣಕ್ಕೆ ಬೇಡಿಕೆ... ಓರ್ವ ವಶಕ್ಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.