TCS ಈಗ ವಿಶ್ವದ ಎರಡನೇ ಅತ್ಯಮೂಲ್ಯ IT ಬ್ರ್ಯಾಂಡ್...!

ವಿಶ್ವದ ಐಟಿ ಸೇವಾ ಪೂರೈಕೆದಾರರಲ್ಲಿ ಎರಡನೇ ಅತ್ಯಮೂಲ್ಯ ಬ್ರ್ಯಾಂಡ್ ಆಗಿ ಭಾರತದ ಹೆಮ್ಮೆಯ ಟಾಟಾ ಸಂಸ್ಥೆಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಗುರುತಿಸಲ್ಪಟ್ಟಿದೆ.

Written by - Zee Kannada News Desk | Last Updated : Jan 28, 2022, 05:48 PM IST
  • ವಿಶ್ವದ ಐಟಿ ಸೇವಾ ಪೂರೈಕೆದಾರರಲ್ಲಿ ಎರಡನೇ ಅತ್ಯಮೂಲ್ಯ ಬ್ರ್ಯಾಂಡ್ ಆಗಿ ಭಾರತದ ಹೆಮ್ಮೆಯ ಟಾಟಾ ಸಂಸ್ಥೆಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಗುರುತಿಸಲ್ಪಟ್ಟಿದೆ.
TCS ಈಗ ವಿಶ್ವದ ಎರಡನೇ ಅತ್ಯಮೂಲ್ಯ IT ಬ್ರ್ಯಾಂಡ್...! title=
ಸಂಗ್ರಹ ಚಿತ್ರ

ನವದೆಹಲಿ: ವಿಶ್ವದ ಐಟಿ ಸೇವಾ ಪೂರೈಕೆದಾರರಲ್ಲಿ ಎರಡನೇ ಅತ್ಯಮೂಲ್ಯ ಬ್ರ್ಯಾಂಡ್ ಆಗಿ ಭಾರತದ ಹೆಮ್ಮೆಯ ಟಾಟಾ ಸಂಸ್ಥೆಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಗುರುತಿಸಲ್ಪಟ್ಟಿದೆ.

ಭಾರತದ ಹೆಮ್ಮೆಯ ಸಂಸ್ಥೆ ಟಾಟಾ ಗ್ರೂಪ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಜಾಗತಿಕವಾಗಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. TCS ಈಗ ವಿಶ್ವದ ಐಟಿ ಸೇವಾ ಪೂರೈಕೆದಾರರಲ್ಲಿ ಎರಡನೇ ಅತ್ಯಮೂಲ್ಯ ಬ್ರ್ಯಾಂಡ್ ಆಗಿದೆ. ಈ ಪಟ್ಟಿಯಲ್ಲಿ ಇನ್ಫೋಸಿಸ್ ಮೂರನೇ ಸ್ಥಾನದಲ್ಲಿದೆ. ಇದರೊಂದಿಗೆ ಇತರ ನಾಲ್ಕು ದೊಡ್ಡ ಭಾರತೀಯ ಐಟಿ ಕಂಪನಿಗಳು ಟಾಪ್ 25 ಕಂಪನಿಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿವೆ. ಆದಾಗ್ಯೂ, ಅಮೇರಿಕಾದ ಆಕ್ಸೆಂಚರ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬ್ರ್ಯಾಂಡ್ ಮೌಲ್ಯಮಾಪನ ಕಂಪನಿಯಾದ ಬ್ರ್ಯಾಂಡ್ ಫೈನಾನ್ಸ್ 2022 ರ ತನ್ನ ವರದಿಯಲ್ಲಿ ಈ ಮಾಹಿತಿಯನ್ನು ನೀಡದೆ.

ಇದನ್ನೂ ಓದಿ: ಹುಟ್ಟುಹಬ್ಬದ ಪ್ರಯುಕ್ತ ಶ್ರುತಿ ಹಾಸನ್ ಪಾತ್ರ ಅನಾವರಣಗೊಳಿಸಿದ ಸಲಾರ್ ಚಿತ್ರ ತಂಡ

ಬ್ರ್ಯಾಂಡ್ ಫೈನಾನ್ಸ್ ಐಟಿ ಸರ್ವಿಸಸ್ 25, 2022 ರ ವರದಿಯ ಪ್ರಕಾರ, ಟಿಸಿಎಸ್ ಮತ್ತು ಇನ್ಫೋಸಿಸ್ ನಂತರ ಇನ್ನೂ ನಾಲ್ಕು ಭಾರತೀಯ ಕಂಪನಿಗಳು ಅಗ್ರ 25 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ, ವಿಪ್ರೋ 7 ನೇ ಸ್ಥಾನದಲ್ಲಿದೆ,  HCL 8 ನೇ, ಟೆಕ್ ಮಹೀಂದ್ರಾ 15 ನೇ ಸ್ಥಾನದಲ್ಲಿ,  LTI 22 ನೇ ಸ್ಥಾನದಲ್ಲಿದೆ. ಈ ಎಲ್ಲಾ 6 ಭಾರತೀಯ ಬ್ರ್ಯಾಂಡ್‌ಗಳು 2020-2022 ರ ಅವಧಿಯಲ್ಲಿ  ವೇಗವಾಗಿ ಬೆಳೆಯುತ್ತಿರುವ ಟಾಪ್ ಹತ್ತು ಐಟಿ ಸೇವಾ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. 36.2 ಶತಕೋಟಿ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ಅಕ್ಸೆಂಚರ್ ವಿಶ್ವದ ಅತ್ಯಂತ ಮೌಲ್ಯಯುತ ಮತ್ತು ಶಕ್ತಿಯುತ IT ಸೇವೆಗಳ ಬ್ರ್ಯಾಂಡ್ ಆಗಿ ಮುಂದುವರಿದಿದೆ.

ಇದನ್ನೂ ಓದಿ: One Cut Two Cut Trailer Out Now : ಡ್ಯಾನಿಶ್ ಸೇಟ್ ಅಭಿನಯದ ಕನ್ನಡ ಕಾಮಿಡಿ-ಸಾಹಸ

ವರದಿಯ ಪ್ರಕಾರ, ಭಾರತದ ವೈವಿಧ್ಯಮಯ ಐಟಿ ಸೇವಾ ಬ್ರ್ಯಾಂಡ್‌ಗಳು 2020 ಮತ್ತು 2022 ರ ನಡುವೆ ಸರಾಸರಿ ಶೇ 51  ರಷ್ಟು ಬೆಳವಣಿಗೆ ಕಂಡಿದ್ದರೆ, ಯುಎಸ್ ಐಟಿ ಕಂಪನಿಗಳ ಬ್ರ್ಯಾಂಡ್‌ಗಳು ಶೇಕಡಾ 7 ರಷ್ಟು ಕುಸಿದಿದ್ದರೆ, IBM ನಾಲ್ಕನೇ ಸ್ಥಾನಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ,  ಆದರೆ TCS ಹಿಂದಿನ ವರ್ಷಕ್ಕಿಂತ 12 ಶೇಕಡಾ ಮತ್ತು 2020 ಕ್ಕೆ ಹೋಲಿಸಿದರೆ ಶೇ  24 ರ ಬೆಳವಣಿಗೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. TCS 16.8 ಬಿಲಿಯನ್ ಡಾಲರ್  ಬ್ರಾಂಡ್ ಮೌಲ್ಯವನ್ನು ಹೊಂದಿದೆ.  ಇನ್ನೊಂದೆಡೆಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಇನ್ಫೋಸಿಸ್, ಶೇ 52 ರಷ್ಟು  ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ; 2020 ಕ್ಕಿಂತ  ಶೇ 80 ರಷ್ಟು ಹೆಚ್ಚಳವನ್ನು ಕಂಡು 12.8 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದೆ.

ಇದರ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ರಾಜಶ್ರೀ ಆರ್, ಈ ಶ್ರೇಯಾಂಕವು ಕಂಪನಿಗೆ ಮಹತ್ವದ ಮೈಲಿಗಲ್ಲನ್ನು ಕಲ್ಪಿಸಿದೆ, ಇದು ಮಾರುಕಟ್ಟೆಯಲ್ಲಿ ಕಂಪನಿಯ ಉತ್ತಮವಾಗಿ ಬೆಳೆಯುತ್ತಿರುವ ಬಗ್ಗೆ ಮತ್ತು ಗ್ರಾಹಕರಿಗೆ ಕಂಪನಿಯ ನಾವೀನ್ಯತೆ ಬಗ್ಗೆ ನಂಬಿಕೆ ತಂದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News