ಮಂಗಳೂರು: ಮಂಗಳೂರು ಸಮೀಪದ ಜೋಕಟ್ಟೆಯಲ್ಲಿರುವ ಅಂಗನವಾಡಿಯಲ್ಲಿ ವಿಷಪೂರಿತ ಬೂದಿ ಆವರಿಸಿದ್ದು, ಮಕ್ಕಳ ಪ್ರಾಣಕ್ಕೆ ಕಂಟಕವಾಗಿ ಮಾರ್ಪಟ್ಟಿದೆ. ಪರಿಸರ ಇಲಾಖೆಯ ಆದೇಶಕ್ಕೂ ಕೇರ್ ಮಾಡದ MRPL ಕಾರ್ಖಾನೆ ಈಗಲೂ ವಿಷಯುಕ್ತ ಅನಿಲವನ್ನು ಹೊರಸೂಸುತ್ತಿದೆ.
ಆದರೆ, ಆ ಸಲ್ಫರ್ ಬೂದಿಯಲ್ಲೇ ಅಂಗನವಾಡಿಯಲ್ಲಿ ಮಕ್ಕಳು ಆಟವಾಡುತ್ತಿದ್ದಾರೆ. ಇದರಿಂದಾಗಿ MRPL ಕಾರ್ಖಾನೆ ವಿರುದ್ದ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಮಕ್ಕಳ ಪ್ರಾಣದ ಬಗೆಗೆ ಸ್ವಲ್ಪವೂ ಕಾಳಜಿ ಇಲ್ಲವೇ ಎಂದು ಸಚಿವರ ಮೇಲೆಯೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.