ಬೆಂಗಳೂರು: ಪಕ್ಷವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ, ಇಲ್ಲದಿದ್ದರೆ ರಾಜ್ಯಕ್ಕೆ ಕರಾಳ ದಿನ ಬರುತ್ತೆ! ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾರ್ಮಿಕ ನಗು ಬೀರಿದ್ದು ಸದನದಲ್ಲಿ ಗಮನಸೆಳೆಯಿತು.
ಇದನ್ನೂ ಓದಿ: ‘ಅಧಿಕಾರ ಯಾವುದೂ ಶಾಶ್ವತವಲ್ಲ’: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಬೊಮ್ಮಾಯಿ..?
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಸಿದ್ದರಾಮಯ್ಯ (Siddaramaiah) ಪ್ರಾರಂಭ ಮಾಡುವ ಮುನ್ನ, ಬಜೆಟ್ ಯಾರಿಗೂ ಇಷ್ಟ ಇಲ್ಲ, ಆದರೆ ಶಾಸಕರಿಗೆ ನನ್ನ ಹಾಗೆ ಹೇಳಲು ಆಗುವುದಿಲ್ಲ.ಪಾಪ, ಯತ್ನಾಳ್ ಗೆ ಕೂಡಾ ಇಷ್ಟ ಇಲ್ಲ, ನನ್ನ ಹಾಗೆ ಹೇಳಲು ಆಗಲ್ಲ ಅವರು ಯತ್ನಾಳ್ ಗೆ ಕುಟುಕಿದರು.ಇದಕ್ಕೆ ಉತ್ತರಿಸಿದ ಶಾಸಕ ಯತ್ನಾಳ್, ಇಲ್ಲಿ ನಿಮ್ಮ ಬೆಂಬಲಿಗರು ಮಾತ್ರ ಇದ್ದಾರೆ,ಕಾಂಗ್ರೆಸ್ ಈ ಬಜೆಟ್ ಗೆ ವಿರೋಧ ಮಾಡುತ್ತೋ ಅಥವಾ ನಿಮ್ಮ ಬಣ ಮಾತ್ರ ವಿರೋಧ ಮಾಡುತ್ತೋ? ನಿಮ್ಮ ಪಕ್ಷವನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಕು.ಇಲ್ಲದಿದ್ದರೆ ರಾಜ್ಯ ಕರಾಳ ದಿನ ಎದುರಿಸಬೇಕಾಗುತ್ತದೆ ಎಂದರು.
ಇದನ್ನೂ ಓದಿ: Basanagouda Patil Yatnal : ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್!
ಯತ್ನಾಳ್ (Basanagouda Patil Yatnal) ಮಾತಿಗೆ ನಗುತ್ತಾ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ಆಯ್ತು ಆಯ್ತು ಎಂದು ಉತ್ತರಿಸಿದರು.ಇದೇ ಸಂದರ್ಭದಲ್ಲಿ, ನಿಮ್ಮ ಬಗ್ಗೆ ನಿಮ್ಮ ಕಡೆ ಪ್ರೀತಿ ಇಲ್ಲದಿದ್ದರೂ ಈ ಕಡೆ ಜಾಸ್ತಿ ಇದೆ ಸಾರ್ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ಸಿ.ಸಿ.ಪಾಟೀಲ್ ಕಾಳೆಲೆದರು.ಅದಕ್ಕೆ ನೀನು ಯಾವಾಗಲೂ ನನ್ನ ಪರ ಕೂತ್ಕೋ ಎಂದು ಅವರದ್ದೇ ಶೈಲಿಯಲ್ಲಿ ಉತ್ತರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.